ವರದಿ: ನಾಗರಾಜ್ ನ್ಯಾಮತಿ
ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕೇಂದ್ರ ಸರಕಾರದ ರೂಸಾ ಯೋಜನೆಯಡಿ ಪದವಿ ಕಾಲೇಜಿನ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ವಿದ್ಯಾವಂತರು ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ಓದಿನ ಹವ್ಯಾಸ ಬೆಳೆಸಲು ಗ್ರಂಥಾಲಯದ ಅವಶ್ಯಕತೆಯಿದೆ. ತರಗತಿ ಇಲ್ಲದ ಸಮಯದಲ್ಲಿ ವ್ಯರ್ಥವಾಗಿ ಕಾಲ ಕಳೆಯದೆ ಗ್ರಂಥಾಲಯದಲ್ಲಿ ಕುಳಿತು ಓದಿದರೆ ಜ್ಞಾನ ವೃದ್ಧಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪದವಿ ಓದುವಾಗಲೇ ಸಿದ್ಧತೆ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಇಟ್ಟುಕೊಂಡು ಕೇಂದ್ರ ಸರಕಾರದ ರಾಷ್ಟಿçÃಯ ಉಚ್ಚತಾರ್ ಶಿಕ್ಷಾ ಅಭಿಯಾನ( ರೂಸಾ)ಯೋಜನೆಯಡಿ ೨.೪೦ ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಗುತ್ತಿಗೆದಾರರು ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು. ಕ್ರಿಯಾಯೋಜನೆಯಂತೆ ಕೆಲಸ ನಡೆಯಬೇಕು. ಕಳಪೆಯಾದ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಬಹುಸುಂದರ, ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜಾ ವೇಣುಗೋಪಾಲ ನಾಯಕ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ವೆಂಕೋಬ ಸಾಹುಕಾರ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ರವಿಚಂದ್ರ ಆಲ್ದಾಳ, ಪ್ರಾಂಶುಪಾಲ ಆನಂದ ಕುಮಾರ ಜೋಶಿ, ಪ್ರಾಧ್ಯಾಪಕರಾದ ವಿಶ್ವನಾಥ ರೆಡ್ಡಿ, ವೆಂಕೋಬ ಬಿರಾದರ, ದೇವು ಪಾಟೀಲ್, ಬಲಭೀಮ ದೇಸಾಯಿ, ಜಗದೀಶ ತಂಬಾಕೆ, ಶಾಂತು ನಾಯಕ ಇತರರಿದ್ದರು.