ಸುರಪುರ ಜೆಸ್ಕಾಂ ವಿಭಾಗೀಯ ಕಚೇರಿಯ ಪೂಜಾ-ಕಾರ್ಯಾರಂಭಕ್ಕೆ ಸಚಿವರು- ಶಾಸಕರು ಚಾಲನೆ

 

ವರದಿ: ನಾಗರಾಜ್ ನ್ಯಾಮತಿ

ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ರಂಗಂಪೇಟೆಯಲ್ಲಿರುವ ಗುಲಬರ್ಗಾ ವಿದ್ಯುಚಕ್ತಿ ಸರಬರಾಜು ಕಂಪನಿಯ ಸುರಪುರ ಜೆಸ್ಕಾಂ ವಿಭಾಗೀಯ ನೂತನ ಕಚೇರಿಯ ಪೂಜಾ ಹಾಗೂ ಕಾರ್ಯಾರಂಭದ ಕಾರ್ಯಕ್ರಮ ಶುಕ್ರವಾರ ಜರುಗಿತು.

ಸಣ್ಣ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದ±ðನಾಪುರ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರುಗಳು ರಿಬ್ಬನ್ ಕತ್ತರಿಸುವ ಮೂಲಕ ಕಚೇರಿ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ನಂತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಂತರ ಮಾತನಾಡಿದ ಸಚಿವರು, ಜೆಸ್ಕಾಂ ವಿಭಾಗೀಯ ನೂತನ ಕಚೇರಿ ಆರಂಭದಿಂದಾಗಿ ಈ ಭಾಗದ ರೈತರ ವಿದ್ಯುತ್ ಸಮಸ್ಯೆ ನೀಗಲಿದೆ. ಯಾವುದೇ ಸಮಸ್ಯೆಯಾದರೂ ಯಾದಗಿರಿಗೆ ಹೋಗುವುದು ತಪ್ಪಲಿದೆ. ಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಪಂಪ್‌ಸೆಟ್ ಮೋಟಾರಗಳು ಸುಡುವುದಿಲ್ಲ. ವಿದ್ಯುತ್ ಪೂರೈಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರ ಬೆಳೆಗಳನ್ನು ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ ಎಂದರು.
ಜೆಸ್ಕಾಂ ಇಲಾಖೆಯ ಅಧೀಕ್ಷಕ ಅಭಿಯಂತರ ಎಂ.ಎಂ.ಕಿತ್ತೂರು, ಹೆಚ್ಚುವರಿ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ, ಎಇಇ ಅಶೋಕ ಚವ್ಹಾಣ, ಎಇಇ ಸುಜೀತ್ ಕುಮಾರ, ಎಇಟಿ ಶ್ರೀನಿವಾಸ ಪ್ರಸಾದ, ಹುಣಸಗಿ ಎಇಇ ಕಲಕಪ್ಪ, ಶಹಾಪುರ ಕೆಪಿಟಿಸಿಎಲ್ ಎಇಇ ಭೀಮಾಶಂಕರ, ಜೆಸ್ಕಾಂ ಎಇಇ ಮರೆಪ್ಪ ಕಡೇಕಲ್, ಕೆಂಭಾವಿ ಶಾಖಾಧಿಕಾರಿ ಶ್ರೀಶೈಲ್ ತಮದಡ್ಡಿ, ಆರ್‌ಎಪಿಡಿಆರ್‌ಪಿ ರಾಜಶೇಖರ ನಾಯಕ, ಮಹಿಬೂಬ್‌ಸಾಬ್ ಸುರಪುರ, ಶಾಂತಪ್ಪ ಕುರಿ ಅಮ್ಮಾಪುರ, ಪ್ರಮೋದ ದೇವಪುರ ಪೂಜೆಯಲ್ಲಿದ್ದರು.
ಪ್ರಮುಖರಾದ ವೆಂಕೋಬ ಸಾಹು ಮಂಗಳೂರು, ಮಲ್ಲಣ್ಣ ಸಾಹು ಮುಧೋಳ, ರಾಜಾ ವೇಣುಗೋಪಾಲ ನಾಯಕ, ರಾಜಾ ಕುಮಾರ ನಾಯಕ, ನಿಂಗರಾಜ್ ಬಾಚಿಮಟ್ಟಿ, ಸುಗೂರೇಶ ವಾರದ, ಖಾಲೀದ್ ಅಹ್ಮದ್ ತಾಳಿಕೋಟಿ, ಕಮರುದ್ಧೀನ್ ನಾರಾಯಣಪೇಟೆ, ಭಂಡಾರೆಪ್ಪ ನಾಟೇಕರ್, ಗುತ್ತಿಗೆದಾರರಾದ ಗೌಡಪ್ಪಗೌಡ ಚನ್ನೂರ, ಬಾಬುಮಿಯಾ, ನವಾಬ್, ಗುರುರಾಜ್ ಚಾಮನಾಳ, ಅಯ್ಯಪ್ಪ ಅಕ್ಕಿ, ವಿನೋದರೆಡ್ಡಿ ಶಾರದಹಳ್ಳಿ, ಮೌನೇಶ ಸೇರಿದಂತೆ ಅನೇಕ ಮುಖಂಡರು, ಸಾರ್ವಜನಿಕರು, ಜೆಸ್ಕಾಂ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.

 

 

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ