ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಲ್ಲಿ 74,484 ಭೂ ಹಿಡುವಳಿದಾರರಿದ್ದು, ಇದರಲ್ಲಿ 60,656 ರೈತರು ಮಾತ್ರ ಎಫ್.ಐ.ಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಎಫ್.ಐ.ಡಿ ಮಾಡಿಸದ 13,828 ರೈತರಿಗೆ ಬರ ಪರಿಹಾರ ಹಾಗೂ ಕೃಷಿ ಇಲಾಖೆಯಿಂದ ದೊರೆಯುವ ಯಾವ ಸೌಲಭ್ಯಗಳೂ ಸಿಗುವುದಿಲ್ಲ.
ಈ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಅಕೌಂಟಿಂಗ್ ಗೆ ಜಮೆ ಮಾಡಲಾಗುವುದು. ಎಫ್.ಐ.ಡಿ ಮಾಡಿಸದ ರೈತರು ಕೂಡಲೇ ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಕಚೇರಿಗೆ ತಮ್ಮ ಆದಾರ ಕಾರ್ಡ್, ಬ್ಯಾಂಕ ಪಾಸ್ ಬುಕ್, ಪಹಣಿ, ಹಾಗೂ ಮೋಬೈಲ್ ಸಂಖ್ಯೆಯೊಂದಿಗೆ ಕೂಡಲೇ ಎಫ್.ಐ.ಡಿ ಮಾಡಿಸಲು ತಿಳಿಸಿದೆ.
ತಪ್ಪಿದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದಿಂದ ವಂಚಿತರಾಗುವಿರಿ. ಹೆಚ್ಚಿನ ಮಾಹಿತಿಗಾಗಿ ಕೃಷಿ/ಕಂದಾಯ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದುಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕರಾದ ಗುರುನಾಥ ಎಂ.ಬಿ. ತಿಳಿಸಿದ್ದಾರೆ.