ಸುರಪುರ ಬುದ್ದ ವಿಹಾರದಲ್ಲಿ ಪ್ರಥಮ ವರ್ಷವಾಸ ಸಮಾರೋಪ

ಕ್ರಾಂತಿವಾಣಿ ವಾರ್ತೆ

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷವಾಸ ಕಾರ್ಯಕ್ರಮ ಸಮಾರೋಪ ಸಮಾರಂಭವ ಏರ್ಪಡಿಸಲಾಗಿತ್ತು.


ನಗರದ ಬಸ್ ನಿಲ್ದಾಣ ಹತ್ತಿರವಿರುವ ಬೋಧಿ ಸತ್ವ ಡಾ. ಅಂಬೇಡ್ಕರ್ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಪುಷ್ಫವಂದನೆ ಸಲ್ಲಿಸಲಾಯಿತು.
ಪೂಜ್ಯ ವರಜ್ಯೋತಿ ಭಂತೇಜಿಯರ ಮಾರ್ಗದರ್ಶನದಲ್ಲಿ ಸುರಪುರ ಇತಿಹಾಸದಲ್ಲಿಯೇ ಒಂದು ಚಾರಿತ್ರಿಕ ಬೌದ್ಧ ಧಮ್ಮ ಸಂಸ್ಕಾರದ ಚಾರಿಕ ಯಾತ್ರೆಯನ್ನು ಕೈಗೊಂಡು ಭಗವಾನ್ ಬುದ್ದನ ತತ್ವದಂತೆ ಪಿಂಡಪಾತ್ರೆಯನ್ನು ಹಿಡಿದುಕೊಂಡು ಡಾ.ಅಂಬೇಡ್ಕರ್ ವೃತ್ತದಿಂದ ಯಾತ್ರೆ ಪ್ರಾರಂಭಿಸಿ ಗಾಂಧೀಜಿ ಸರ್ಕಲ್ ಮಾರ್ಗವಾಗಿ ಬುದ್ದಂ ಶರಣಂ ಘಚ್ಛಾಮಿ, ದಮ್ಮಂ ಶರಣಂ ಘಚ್ಛಾಮಿ, ಸಂಘಂ ಶರಣಂ ಘಚ್ಛಾಮಿ ಎಂದು ೮ ಜನ ಬಿಕ್ಕು ಸಂಘದವರು ನಾಡಿನ ಶಾಂತಿಗಾಗಿ ಮತ್ತು ಬುದ್ಧ ಧಮ್ಮವೂ ಜಿಲ್ಲೆಯಲ್ಲಿ ಪಸರಿಸಲೂ ಹೊರಟಿರುವುದು ವಿಶಿಷ್ಠವಾಗಿತ್ತು.
ಇದಕ್ಕೆ ಬೌದ್ಧ ಉಪಾಸಕರೆಲ್ಲರು ಸಾಧು, ಸಾದೂ, ಸಾದೂ ಎಂದು ನುಡಿಯುತ್ತ ಬಾಬಾಸಾಹೇಬ್ ಅಂಬೇಡ್ಕರ್ ಕಂಡಿರುವ ಬೌದ್ಧ ಭಾರತ ಕನಸು ನನಸು ಮಾಡಲೂ ಬುದ್ದ ಭೀಮ ಮಾರ್ಗದಲ್ಲಿ ಮುನ್ನೆಡದರೆ ಮಾತ್ರ ಸಾಧ್ಯವೆಂದು ಸಾರಲಾಯಿತು.
ಬುದ್ದ ವಿಹಾರದಲ್ಲಿ ಬಿಕ್ಕು ನಿವಾಸದಿಂದ ತಪ್ಪಲಿನ ಮಡಿಲಲ್ಲಿರುವ ಬುದ್ದ ವಿಹಾರಕ್ಕೆ ಹೂರಾಶಿಗಳಿಂದ ಹರಡಿದ ದಾರಿಯುದ್ದಕ್ಕು ಭಿಕ್ಕುಗಳನ್ನು ಸ್ವಾಗತಿಸುತ್ತಾ ಮಹಿಳಾ ಉಪಾಸಿಕಾರು ಮಕ್ಕಳು ಪಂಚಶೀಲ ಮತ್ತು ನೀಲಿ ಧ್ವಜದೊಂದಿಗೆ ಕಂಗೊಳಿಸಿದರು.
ಬುದ್ಧ ವಂದನೆ ವಿಶೇಷಪೂಜೆಯನ್ನು ಸಲ್ಲಿಸಿ ಟ್ರಸ್ಟ್ ಆಡಳಿತ ಮಂಡಳಿಯವರು ಅತ್ಯವಶ್ಯಕತೆ ಧಾರಿಯೊಂದನ್ನು ಇವತ್ತು ತುಳಿದರು.


ಈ ಸಂದರ್ಭದಲ್ಲಿ ಪ್ರಾಸ್ತವಿಕವಾಗಿ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಯವರು ಮಾತನಾಡಿದರು. ೮೯ ದಿನಗಳ ಬೌದ್ಧ ಬಿಕ್ಕುಸಂಘದವರಿಗೆ ಬೋಜನಧಾನ ನೇರವೇರಿಸಿದ ೮೯ ಕುಟುಂಬದವರನ್ನು ಟ್ರಸ್ಟ್ ವತಿಯಿಂದ ಸತ್ಕರಿಸಿ ಧಮ್ಮ ಸೇವಾ ಪತ್ರವನ್ನು ಮತ್ತು ಬೌದ್ಧ ಧಮ್ಮದ ಪುಸ್ತಗಳನ್ನು ಸಾಂಕೇತಿಕವಾಗಿ ನೀಡಿ ಗೌರವಿಸಲಾಯಿತು.

ನಾಗಣ್ಣ ಕಲ್ಲದೆವನಹಳ್ಳಿ, ಭೀಮರಾಯ ಸಿಂದಗೇರಿ, ರಾಹುಲ್ ಹುಲಿಮನಿ, ಆದಪ್ಪ ಹೊಸಮನಿ, ವೆಂಕಟೇಶ್ವರ್ ಸುರಪುರ್, ಮಾಳಪ್ಪ ಕಿರದಳ್ಳಿ, ಮಂಜುಳಾ ಸುರಪುರ್, , ಹಣಮತ ಭದ್ರಾವತಿ. ಮಲ್ಲಪ್ಪ ತಳವಾರಗೇರಾ, ಮರೆಪ್ಪ ತೇಲ್ಕರ , ಜಗದೀಶ್ ಶಾಖನವರು, ಗೋಪಾಲ್ ವಜ್ಜಲ್, ರಾಜು ದೊಡ್ಡಮನಿ, ಮಲ್ಲಿಕಾರ್ಜುನ್ ವಾಗಣಗೇರಾ, ಶರಣು ಹಸನಾಪುರ, ಪರಶುರಾಮ್ ನಾಟೇಕಾರ, ಚಂದಪ್ಪ ಪಂಚಮ್, ವಿಶ್ವನಾಥ ಹೊಸಮನಿ, ನಿಂಗಣ್ಣ ಗೋನಾಲ್ , ಮಲ್ಲು ಮುಷ್ಠಳ್ಳಿ, ಮಂಜುನಾಥ ಹೊಸಮನಿ,ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ