ರಂಗಂಪೇಟೆಯ ಕಸಾಪಕ್ಕೆ ಬುದ್ದಿವಂತ ಶೆಟ್ಟರ ಹೆಸರಿನಲ್ಲಿ ಸರಕಾರದಿಂದ ಟ್ರಸ್ಟ್ ಆರಂಭಿಸಲು ಸಚಿವರಿಗೆ ಮನವಿ

ವರದಿ: ಎನ್. ನ್ಯಾಮತಿ

ಕ್ರಾಂತಿವಾಣಿ ವಾರ್ತೆ  ಸುರಪುರ: ರಂಗಂಪೇಟ ಕನ್ನಡ ಸಾಹಿತ್ಯ ಸಂಘದ ಸ್ಥಾಪಕರಾದ ಕನ್ನಡದ ಕಟ್ಟಾಳು ರಂಗಂಪೇಟೆಯ ಎಂ.ಆರ್.ಬುದ್ದಿವಂತ ಶೆಟ್ಟರ್ ಹೆಸರಿನಿಂದ ಸರಕಾರದಿಂದ ಟ್ರಸ್ಟ್ ಮಾಡಬೇಕೆಂದು ಹಿರಿಯ ಸಾಹಿತಿ  ಶಾಂತಪ್ಪ ಬೂದಿಹಾಳ, ಸಂಘದ ಅಧ್ಯಕ್ಷ ಸೂಗುರೇಶ ವಾರದ ನೇತೃತ್ವದ ತಂಡ ಸಚಿವ ಶರಣಬಸಪ್ಪ ದರರ್ಶನಾಪರ ಅವರಿಗೆ  ಮನವಿ ಸಲ್ಲಿಸಲಾಯಿತು.

ಕರ್ನಾಟಕ  ಭಾಗದಲ್ಲಿ ನಿರಂತರವಾಗಿ ೮೧ ವರ್ಷಗಳಿಂದ ಕನ್ನಡ ಕಟ್ಟುವ, ಬೆಳೆಸುವ, ಪೊಷಿಸುವ ಕಾರ್ಯದಲ್ಲಿ ತೊಡಗಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಸ್ಥಾಪಕರಾದ ಕನ್ನಡದ ಕಟ್ಟಾಳು ರಂಗಂಪೇಟೆಯ ಎಂ.ಆರ್.ಬುದ್ದಿವಂತ ಶೆಟ್ಟರ್ ಹೆಸರಿನಿಂದ ಸರಕಾರದಿಂದ ಟ್ರಸ್ಟ್ ಮತ್ತು ಪ್ರತಿಷ್ಠಾನ ಮಾಡುವಂತೆ ಕೋರಿ ಮನವಿ ಸಲ್ಲಿಸಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ಹೈದ್ರಾಬಾದ್ ಕರ್ನಾಟಕ ಪ್ರದೇಶ ನಿಜಾಮನ ಆಡಳಿತದ ಸಂದರ್ಭದಲ್ಲಿ ಈ ಪ್ರದೇಶ ಉರ್ದುಮಯವಾಗಿತ್ತು, ಎಲ್ಲರೂ ಉರ್ದುವನ್ನೇ ಕಲೆಯಬೇಕಾಗಿತ್ತು, ಒಂದು ನಾಡಿನ, ಒಂದು ಜನಾಂಗದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ, ಅಂತಹ ಸಂದರ್ಭದಲ್ಲಿ ರಂಗಂಪೇಟೆಯ ೮೦% ಪ್ರತಿಶತ ಜನ ಕನ್ನಡವನ್ನೇ ಮಾತನಾಡುತ್ತಿದ್ದರು. ಆಗ ಹಿರಿಯರು ಕನ್ನಡ ಅಭಿಮಾನಿಗಳೆಲ್ಲರು ಸೇರಿ ಜನರಲ್ಲಿ ಸದಭಿರೂಚಿಯನ್ನು ರೂಪಿಸಿ, ಪೋಷಿಸಿ, ಜನಮನವನ್ನು ಹದಗೊಳಿಸಿ ಕನ್ನಡ ಸಾಹಿತ್ಯದ ರಸಸ್ವಾದನೆಗಾಗಿ ಅಣ ಗೊಳಿಸುವುದರಲ್ಲಿ ನಮ್ಮೂರು ಕನ್ನಡ ಸಾಹಿತ್ಯ ಸಂಘ ರಂಗಂಪೇಟ ಶ್ರಮಿಸಿದೆ.

ಸ್ವಾತಂತ್ಯ ಪೂರ್ವದ ೧೯೪೩ ರ ಏಪ್ರಿಲ್ ತಿಂಗಳ ೫ನೇ ತಾರೀಕಿನಂದು ಸಂಘವನ್ನು ಸ್ಥಾಪಿಸಿದರು. ಸಂಘದ ಸ್ಥಾಪಕರುಗಳಾದ ಎಂ.ಆರ್. ಬುದ್ದಿವಂತಶೆಟ್ಟರ ನೇತೃತ್ವದಲ್ಲಿ ಸಂಘ ಸ್ಥಾಪನೆಯಾಯಿತು.

೧೯೪೩ ರಲ್ಲಿ ಪ್ರಥಮವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರನ್ನು ಕರೆಸಿದರು, ನಿಜಾಮನ ಸರಕಾರ ಮತ್ತು ಪೋಲಿಸರು ಭಾಷಣ ಮಾಡಲು ಅನುಮತಿ ನಿಡಲಿಲ್ಲ, ಅಂತಹ ಸಂದರ್ಭದಲ್ಲಿ ಎಲ್ಲರು ಕುಳಿತು ಚರ್ಚಿಸಿದರು. ಅದು ಸ್ವಾತಂತ್ಯçದ ಪೂರ್ವದ ಕಾಲ ಒಂದೆಡೆ ಅಂದಿನ ಹೈದ್ರಾಬಾದ್ ಸಂಸ್ಥಾನದ ನಿಜಾಮನ ಸರಕಾರ ಸಂಘ-ಸಂಸ್ಥೆಗಳನ್ನು ಸಂಶಯದ ದೃಷ್ಟಿಯಿಂದ ನೊಡುತ್ತಿತ್ತು, ಇನ್ನೊಂದೆಡೆ ಮಾಡು ಇಲ್ಲವೆ ಮಡಿ ಎನ್ನುವ ಪ್ರಾಣವನ್ನೇ ಪಣಕಿಟ್ಟು ದೇಶದ ಬಂಧಮುಕ್ತಿಗಾಗಿ ಹೋರಾಟ ಮಾಡುವ ಕಾಲ, ಅಂತಹ ಸಂದರ್ಭದಲ್ಲಿ ಸಂಘವನ್ನು ಸ್ಥಾಪಿಸಿ ಶ್ರೀಯುತ.

ಬೋಡಾ ರಾಮಣ್ಣನವರ ಅಧ್ಯಕ್ಷತೆಯಲ್ಲಿ ಅನೇಕ ವರ್ಷಗಳ ಕಾಲ ಸಂಘ ಸಾಹಿತ್ಯ ಹಾಗೂ ಸಾಂಸ್ಕತಿಕ ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಬಂದು, ಮುಂದೆ ಅಡಿವೆಪ್ಪ ಗೋಲಗೇರಿ, ಡಿ.ಗೋವಿಂದಪ್ಪ, ಬುದ್ದಿವಂತಶೆಟ್ಟರ್, ಸುರೇಶ ಸಜ್ಜನ್, ಪ್ರಸ್ತುತ ಸೂಗುರೇಶ ವಾರದ ಅಧ್ಯಕ್ಷರಾಗಿ ನೂರಾರು ಜನ ಪದಾಧಿಕಾರಿಗಳು ಕನ್ನಡಕ್ಕಾಗಿ ಕಾರ್ಯಾನಿರ್ವಹಿಸುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಸಂಘವು ಕನ್ನಡ ಪತ್ರಿಕೆ ಇಲ್ಲದೆ ಇರುವ ಸಂದರ್ಭದಲ್ಲಿ ಅರುಣ ಎಂಬ ಅಂಕಿತದೊಂದಿಗೆ ಕೈ-ಬರಹದ ಪತ್ರಿಕೆ ಪ್ರಾರಂಭಿಸಿ ಕನ್ನಡ ಪ್ರೇಮ ಬೆಳೆಸಿದರು, ಸ್ಥಳಿಯ ಲೇಖಕ ಹಾಗೂ ಕವಿಗಳಿಗೆ ಉತ್ತೇಜನ ನೀಡುವ ಮೂಲಕ ಹೊಸ ಬರಹಗಾರರನ್ನು ಈ ಪತ್ರಿಕೆ ಸೃಷ್ಟಿಸಿತು.

ಕನ್ನಡ ಸಾಹಿತ್ಯ ಸಂಘವು ಬಹಳ ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಕಾವ, ಜಾಣ, ರತ್ನ ಪರಿಕ್ಷೆಗಳನ್ನು ನಡೆಸುತ್ತಾ ಪರಿಕ್ಷಾಕೇಂದ್ರವಾಗಿತ್ತು ಹಾಗೂ ಪರಿಣ ತ ಶಿಕ್ಷಕರಿಂದ ಉಚಿತ ತರಬೇತಿಗಳನ್ನು ನಡೆಸಿ ಅಬ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿತ್ತು. ಸಂಘವು ಅಧ್ಯಯನಕ್ಕಾಗಿ ಸಹಸ್ರಾರು ಗ್ರಂಥಗಳನ್ನು ಹೊಂದಿದ್ದು, ಸಂಜೆ ವಾಚನಾಲಯವನ್ನು ಕೂಡ ಪ್ರಸ್ತುತ ನಡೆಸುತ್ತಿದೆ, ಸಂಘದಿಂದ ೫೦ ಕೃತಿಗಳನ್ನು ಪ್ರಕಟಿಸಿದೆ.

ಆಧುನಿಕ “ಭಾರತದ ಸಪ್ತರ್ಷಿಗಳು” ಎಂಬ ಕೃತಿ ಹಲವಾರು ಮುದ್ರಣ ಕಂಡಿದೆ, ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ ೧೦ನೇ ತರಗತಿಯ ದ್ವಿತೀಯ ಭಾಷೆಯ ಪಠ್ಯ ಪುಸ್ತವಾಗಿದೆ ಹಾಗೂ ಶ್ರೀ. ಸೀತಾರಾಮ ಜಾಗೀರದಾರ ಅವರು ಬರೆದ “ಗ್ರಂಥ ಸಂಪಾದನಾಶಾಸ್ತç” ಗ್ರಂಥವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉತ್ತಮ ಸಂಶೋಧನಾ ಗ್ರಂಥ ಎಂಬ ಹೆಗ್ಗಳಿಕೆ ಪಡೆದಿದೆ.

೨೦೦೪ರಲ್ಲಿ ಸಂಘವು ೫೦ ವರ್ಷದ ನಿಮಿತ್ಯ ಸುವರ್ಣ ಮಹೋತ್ಸವನ್ನು ಅದ್ದುರಿಯಾಗಿ ೨ ದಿನಗಳ ಕಾಲ ಬುದ್ದಿವಂತ ಶೆಟ್ಟರ ನೇತೃತ್ವದಲ್ಲಿ ಆಯೋಜಿಸಿ ವಜ್ರದೀಪ್ತಿ ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಿ ಅನೇಕ ವಿಚಾರ ಸಂಕಿರ್ಣಗಳನ್ನು ಆಯೋಜಿಸಲಾಗಿದೆ, ಪ್ರತಿ ವರ್ಷ ನಾಡಹಬ್ಬದಲ್ಲಿ ಶಾಲಾ ಕಾಲೇಜಿನ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ, ಸಾಧಕರಿಗೆ ಸನ್ಮಾನಮಾಡಿ ಗೌರವಿಸುತ್ತಾ ಬಂದಿದೆ. ಇಲ್ಲಿಯವರೆಗೆ ಸಂಘಕ್ಕೆ ಕರ್ನಾಟದಾದ್ಯಂತ ೪೫೦ಕ್ಕು ಹೆಚ್ಚು ಉಪನ್ಯಾಸಕರು ಭಾಗವಹಿಸಿದ ಹೆಮ್ಮೆ ಇದೆ.

ಇದರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಶಸ್ತಿ ಪುರಸ್ಕೃತರು ಹಾಗೂ ನಾಡೋಜ ಪುರಸ್ಕೃತರು, ಸಾಹಿತ್ಯ ದಿಗ್ಗಜರು ಭಾಗವಹಿಸಿದ ಹೆಗ್ಗಳಿಕೆ ಸಂಘಕ್ಕಿದೆ. ನಾಡಿನ ಸಿನಮಾ ನಟರು, ನಿರ್ದೇಶಕರು, ರಂಗಭೂಮಿ ಮತ್ತು ಜನಪದ ಕಲಾವಿಧರು, ಕವಿ, ಸಾಹಿತಿ ವಿಮರ್ಷಕರು, ಜನಪ್ರತಿನಿಧಿಗಳು ಭಾಗವಹಿಸಿ ಬೇಟಿ ನೀಡಿ ಅವರ ಅನಿಸಿಕೆಗಳ ಹಸ್ತಾಕ್ಷರಗಳೊಂದಿಗೆ ಇಂದಿಗೂ ಸಂಘದಲ್ಲಿ ಕಾಯ್ದಿಟ್ಟಿದೆ. ಸಂಘಕ್ಕೆ ತನ್ನದೆ ಆದ ಕಾರ್ಯಲಯ, ೨ ಅಂತಸ್ಥಿನ ಕಟ್ಟಡ, ಸಾಂಸ್ಕೃತಿಕ ಭವನ ಹೊಂದಿದೆ.

ಇದೇ ವರ್ಷದ ಡಿಸೆಂಬರ್ ಒಳಗಾಗಿ ಅಮೃತ ಮಹೋತ್ಸವ ಆಚರಣೆಯ ಸಿದ್ದತೆಯಲ್ಲಿದೆ, ಕಳೆದ ೮ ದಶಕಗಳಿಂದ ನಿರಂತವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿರುವ ಕನ್ನಡ ಸಾಹಿತ್ಯ ಸಂಘವು ನಿರಂತರವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ, ಮಹಾಪುರುಷರ ಜಯಂತಿ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿವಿಧ ಸಮ್ಮೆಳನ ಸಮಾರಂಭ ಸಮಾವೇಶಗಳ ಆಯೋಜನೆ, ಮಹಿಳಾ ದಿನಾಚಾರಣೆ ಮಾಡುವುದಲ್ಲದೆ ಪ್ರತಿ ವರ್ಷ ೫ ದಿನಗಳ ದಸರಾ ಸಂಭ್ರಮದ ನಾಡಹಬ್ಬ ಕಾರ್ಯಕ್ರಮ ನಿರಂತರವಾಗಿ ಆಚರಿಸುತ್ತಾ ಬಂದಿದೆ.

ಈ ಸಂಘದ ಬೆಳವಣ ಗೆಯ ಹಿಂದಿನ ಮಹತ್ವದ ಶಕ್ತಿ ಎಂ.ಆರ್.ಬುದ್ದಿವಂತ ಶೆಟ್ಟರ್ ಕಾರಣ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸಾಹಿತಿ, ಕಲಾವಿಧರು, ಸಂಘಟಕರ ಹೆಸರಿನಲ್ಲಿ ಟ್ರಸ್ಟ್ ಮತ್ತು ಪ್ರತಿಷ್ಠಾನಗಳನ್ನು ಸರಕಾರದಿಂದ ಪ್ರಾರಂಭಿಸಿ ಕಾರ್ಯನಿರ್ವಹಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯಿಂದ ಕನ್ನಡದ ಕಟ್ಟಾಳು ಎಂ.ಆರ್.ಬುದ್ದಿವಂಂತ ಶೆಟ್ಟರ ಹೆಸರಿನಲ್ಲಿ ಶಿಘ್ರದಲ್ಲಿಯೇ ಟ್ರಸ್ಟ್ ಪ್ರಾರಂಭಿಸಬೇಕು  ಎಂದು ಸಚಿವರಲ್ಲಿ ಮನವಿ ಮಾಡಿದೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ