ಕ್ರಾಂತಿವಾಣಿ ವಾರ್ತೆ ಸುರಪುರ: ನಗರದಲ್ಲಿರುವ ಎಲ್ಲ ಅಂಗಡಿಮುಂಗಟ್ಟು ಹಾಗೂ ಸರಕಾರಿ/ಖಾಸಗಿ ಕಚೇರಿಗಳಲ್ಲಿ ಆಂಗ್ಲ ನಾಮಫಲಕಗಳನ್ನು ನವಂಬರ್ ೧ರೊಳಗೆ ತೆರವುಗಳಿಸಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಎಲ್ಲಾ ಅಂಗಡಿಮುಂಗಟ್ಟು, ಸರಕಾರಿ ಕಛೇರಿಗಳು ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಮತ್ತು ಇನ್ನಿತರ ವಾಣ ಜ್ಯ ಮಳಿಗಳಿಗೆ ಕಡ್ಡಾಯವಾಗಿ ನವಂಬರ್ ೧ರೊಳಗೆ ಆಂಗ್ಲ ನಾಮಫಲಕವನ್ನು ತೆರವುಗೊಳಿಸಬೇಕು. ಅಲ್ಲದೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ನರಸಭೆ ಪೌರಾಯುಕ್ತ ಆದೇಶ ಹೊರಡಿಸಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕರವೇ ವತಿಯಿಂದ ಬೀದಿಗಿಳಿದು ನಾವೇ ಆಂಗ್ಲ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ ್ಣಗೇರಾ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭೀಮುನಾಯಕ ಮಲ್ಲಿಭಾವಿ, ತಾಲೂಕು ಪದಾಧಿಕಾರಿಗಳಾದ ಹಣಮಗೌಡ ಶಖಾಪುರ, ಶ್ರೀನಿವಾಸ, ಹಣಮಂತ ದೇವಿಕೇರಿ, ರಂಗನಾಥ ಬಿರಾದಾರ, ಶ್ರೀಶೈಲ ಕಾಚಾಪೂರ, ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಲಿ, ಯುವಘಟಕದ ನಾಗರಾಜ ಡೊಣ್ಣಿಗೇರಿ, ಗ್ರಾಮಶಾಖೆಯ ಅಧ್ಯಕ್ಷರಾದ ಬಲಭೀಮ ಬೊಮ್ಮನಹಳ್ಳಿ, ರಾಮಯ್ಯ ಅಜ್ಜಕೊಲ್ಲಿ ದೇವಿಕೇರಿ, ಶೇಖರ ಚೌಡೇಶ್ವರಿ ಹಾಳ, ಮಲ್ಲಿಕಾರ್ಜುನ ರಸ್ತಾಪೂರ, ಖಾಶಿಂ ಪಠಾಣ, ಹಣಮಂತ ರಸ್ತಾಪೂರ ಸೇರಿದಂತೆ ಇತರರಿದ್ದರು.