ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣಮಂದಿರದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ ಯಾದಗಿರಿಯ ಜಿಲ್ಲಾ ಶಾಸಕರು ಸಾರ್ವಜನಿಕರು ಕುಂದುಕೊರತೆಗಳಿಗೆ ನೇರವಾಗಿ ಮೈಕ್ ಹಿಡಿದು ಉತ್ತರಿಸಿದ್ದು, ಜನರಲ್ಲಿ ಆಚ್ಚರಿ ಮೂಡಿಸಿದರು.
ಆರಂಭದಲ್ಲಿ ಶಹಾಪುರ ತಾಲೂಕುಗಳ ಅರ್ಜಿಗಳಿಗೆ ಸಂಬಂಧಿಸಿದಂತೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪ್ರತಿಯೊಂದು ಉತ್ತರಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ಸೂಚಿಸಿದರು.
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸಾರ್ವಜನಿಕರ ಕೇಂದ್ರ ಬಿಂದುವಾಗಿದ್ದು, ಕಟ್ಟಡ ಪರವಾನಗಿ, ಸಿಸಿ ರಸ್ತೆ, ಚರಂಡಿ, ಪಹಣ , ಹೆಸರು ಬದಲಾವಣೆ, ಜಲಾಲ್ ಬಾವಿಯ ಹೂಳು ತೆಗೆಯಲು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದರು.
ಸುರಪುರ, ಹುಣಸಗಿ, ಶಹಾಪುರ, ಯಾದಗಿರಿ, ವಡಗೇರಾ, ಗುರುಮಿಠಕಲ್ ತಾಲೂಕುಗಳಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದಂತೆ ಮೊಗದಲ್ಲಿ ಮಂದ ಹಾಸ ಬೀರಿತು.
ಒಳಚರಂಡಿ ನಿವೇಶನ ಸಮಸ್ಯೆಗೆ ಜಿಲ್ಲಾಡಳಿತದಲ್ಲಿ ಸಭೆಗೆ ನಿಧಾರ, ಗಂಗಾ ಕಲ್ಯಾಣ ಕೊಳವೆ ಬಾವಿಗೆ ವಿದ್ಯುತ್ ಕಲ್ಪಿಸಲು ಜೆಸ್ಕಾಂಗೆ ಸೂಚನೆ, ಜಮೀನು ರಸ್ತೆ, ಸ್ಮಶಾನ ಭೂಮಿ, ಜಮೀನಿನ ಪಹಣ ಯಲ್ಲಿ ಹೆಸರು ಬದಲಾವಣೆ, ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕರ ಸಮಸ್ಯೆ, ಸಿಸಿ ರಸ್ತೆ, ಕಟ್ಟಡ ಪರವಾನಗಿ, ಶೌಚಾಲಯ, ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರೆತ ಸಮಾಧನ ಜನರದ್ದಾಗಿತ್ತು.
ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣಮಂದಿರದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗೆ ಉತ್ತರಿಸುವತ್ತಿರುವ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಸಚಿವ ಶರಣಬಸಪ್ಪಗೌಡ ದರ್ಶನಾಪುರ.