ಕ್ರಾಂತಿವಾಣಿ ವಾರ್ತೆ ಕಕ್ಕೇರಾ: ಕಟ್ಟಡ ಕಾರ್ಮಿಕರ ಅತ್ಯಂತ ಪ್ರಾಮಾಣಿಕ ಕಾಯಕವಾಗಿದ್ದು, ರಾಜ್ಯದಲ್ಲಿಯೇ ಅತೀ ದೊಡ್ಡಕಾರ್ಮಿಕರ ಸಂಘವಾಗಿದ್ದು, ಗ್ರಾಮೀಣ, ಹೋಬಳಿಗಳಲ್ಲಿ ಕಟ್ಟಡ ಕಾರ್ಮಿಕ ಸಂಘ ರಚನೆಯಾಗಿ, ವಿವಿಧ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ವಾಗಿ ಮುನ್ನಡೆಯಬೇಕೆಂದು ಎಂದು ಹಿರಿಯ ಮುಖಂಡ ದೇವಿಂದ್ರಪ್ಪ ಬಳಿಚಕ್ರ ಹೇಳಿದರು.
ಪಟ್ಟಣದ ಸರಕಾರಿ ಶಾಲಾ ಆವರಣದಲ್ಲಿ ಈಚೆಗೆ ಜರುಗಿದ ಕಾರ‍್ಯಕ್ರಮದಲ್ಲಿ ಮಾತನಾಡಿ, ಕಟ್ಟಡ ಕಾರ್ಮಿಕ ಘಟಕ ಸಂಘದಲ್ಲಿ ವಿವಿಧ ಸೌಲಭ್ಯಗಳಾದ ಮಕ್ಕಳ ಶಾಲಾ ಕಿಟ್, ಕೆಲಸದ ಸಂದರ್ಭದಲ್ಲಿ ಅಪಘಾತ ವಾದಾಗ ಆಸ್ಪತ್ರೆ ಸಹಾಯಧನ, ಕಾರ್ಮಿಕ ಕಿಟ್, ಅನಿವಾರ್ಯ ಸಂದರ್ಭದಲ್ಲಿ ಸಹಾಯಧನ, ಸಾಲ ಸೌಲಭ್ಯಗಳು ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಇದರ ಸದುಪಯೋಗ ಪಡೆದುಕೊಳ್ಳವೇಕು ಎಂದು ಕರೆ ನೀಡಿದರು.
ನಂತರ ನೂತನ ಕಟ್ಟಡ ಕಾರ್ಮಿಕ ಘಟಕ ಸಂಘದ ಅಧ್ಯಕ್ಷ ಚಾಂದಪಾಶ ದಖನಿ ಮಾತನಾಡಿ, ನಮ್ಮ ವಲಯದಲ್ಲಿರುವ ಕಾರ್ಮಿಕರನ್ನು ಗುರುತಿಸಿ, ಕರ‍್ಡ ಸೇರಿದಂತೆ ವಿವಿಧ ಸೌಲಭ್ಯ ಹಾಗೂ ಸಂಘವನ್ನು ಮುನ್ನಡೆಸುವುದಾಗಿ ಹೇಳಿದರು.
ಕಟ್ಟಡ ಕಾರ್ಮಿಕ ಸಂಘ ಪದಾಧಿಕಾರಿಗಳು: ಹರಿಸಿಂಗ ಪವಾರ್ ( ಗೌರವಾಧ್ಯಕ್ಷ), ಚಾಂದಸಾಬ ದಖನಿ ( ಅಧ್ಯಕ್ಷ), ಸಾಮಲಿಂಗ (ಉಪಾಧ್ಯಕ್ಷ), ಅಂಬ್ರೇಶ (ಉಪಾಧ್ಯಕ್ಷ), ದೇವಿಂದ್ರಪ್ಪ ತಳ್ಳಳ್ಳಿ (ಖಜಾಂಚಿ), ಚಂದ್ರಶೇಖರ (ಪ್ರಧಾನ ಕಾರ್ಯದರ್ಶಿ), ಕಾಸಿಂಸಾಬ (ಸಹಾ ಕಾರ್ಯದರ್ಶಿ), ಪರಮಣ್ಣ, ಸೋಮಣ್ಣ ಖಜಾಂಚಿ( ಸಹ ಖಜಾಂಚಿ) ರಾಜೇಸಾಬ ಗೋಡಿಹಾಳ ( ಸಂಘಟನೆ ಕಾರ್ಯದರ್ಶಿ) ಸದಸ್ಯರಾದ ಚಾಂದಪಾಶ,ಮಲ್ಲಿಕಾರ್ಜುನ, ಪರಮಣ್ಣ, ಬಸವರಾಜ, ನಂದಪ್ಪ, ಸಂತೋಷ, ಆಂಜನೇಯ, ಅಮೀನಸಾಬ, ರಾಜೇಸಾಬ ಹಾಜರಿದ್ದರು.
ಪ್ರಮುಖರಾದ ದೇವಿಂದ್ರಪ್ಪ ಪತ್ತಾರ, ತಿಮ್ಮಯ್ಯ ತಳವಾರ, ನಾರಾಯಣ ಗುತ್ತೇದಾರ, ಆದಯ್ಯ ಗುರಿಕಾರ, ಬುಚ್ಚಪ್ಪ ಗುರಿಕಾರ, ಮುದ್ದಣ್ಣ ಅಮ್ಮಾಪುರ, ನಂದಣ್ಣ ವಾರಿ, ತಿಪ್ಪಣ್ಣ ಜಂಪಾ, ಸಿದ್ದಣ್ಣ ದೇಸಾಯಿ, ಮಹಿಬೂಬ ಸುರಪುರ ಸೇರಿದಂತೆ ಅನೇಕರು ಹಾಜರಿದ್ದರು.
�