ಹಸಿವು ನೀಗಿಸುವ ಕೆಲಸ ಮಾಡುವೆ: ಇಳಕಲ್ಲ ಶಿವಣ್ಣ

ನಗರದಲ್ಲಿ ಆಸ್ಪತ್ರೆ ರೋಗಿಗಳಿಗೆ ಆಹಾರ-ಬಾಳೆಹಣ್ಣು ವಿತರಣೆ

ಕ್ರಾಂತಿವಾಣಿ ವಾರ್ತೆ ಸುರಪುರ: ಕನ್ನಡ ರಾಜ್ಯೋತ್ಸವ ನಿಮಿತ್ತ ಬಡವರಿಗೆ, ನಿರ್ಗತಿಕರಿಗೆ, ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಅನ್ನದಾನ ಮಾಡಲಾಯಿತು. ನಗರದಲ್ಲಿರುವ ಕೆಲವರು ಅನ್ನಕ್ಕೆ ಪರದಾಡುತ್ತಿದ್ದಾರೆ. ಅಂತವರಿಗೆ ಗುರುತಿಸಿ ಹಸಿವನ್ನು ನೀಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾತೃ ಸೇವೆ ಸಂಸ್ಥೆ ಸಂಸ್ಥಾಪಕ ಇಲಕಲ್ಲ ಶಿವಣ್ಣ ಹೇಳಿದರು.


ನಗರದ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಬುಧವಾರ ಆಹಾರದ ಪೊಟ್ಟಣ ಮತ್ತು ಬಾಳೆ ಹಣ್ಣು ವಿತರಿಸಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೂ ಸಮಾಜ ಸೇವೆ ಮಾಡಬೇಕೆಂಬ ಮಹಾನ್ ಉದ್ದೇಶ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಸಂಸ್ಥೆಯು ಮುಂದಾಗಲಿದೆ. ರಾಜ್ಯವೂ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹಸಿವನ್ನು ನೀಗಿಸುವ ಶಕ್ತಿ ರೈತರಿಗಿದೆ. ರೈತನ ಮಗನಾದ ನಾನು ನನ್ನಿಂದ ಸಾಧ್ಯವಾಷ್ಟು ಪ್ರಯತ್ನಿಸುತ್ತೇನೆ ಎಂದರು.
ಬಸ್ ನಿಲ್ದಾಣ, ರಾಜಾ ವೆಂಕಟಪ್ಪ ನಾಯಕ ವೃತ್ತ ಸೇರಿದಂತೆ ವಿವಿಧಡೆ ಸಂಚರಿಸಿ ಭಿಕ್ಷುಕರು, ನಿರ್ಗತಿಕರಿಗೆ ಆಹಾರ ಮತ್ತು ಬಾಳೆ ಹಣ್ಣು ವಿತರಿಸಲಾಯಿತು.
ಮಾತೃ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ್ ಕಕ್ಕೇರಿ, ಮಾನಪ್ಪ ಕವಡಿಮಟ್ಟಿ, ದಶವಂತ ಕೊರಬಾರ, ಬಾಬಣ್ಣ ಕುಂಬಾರಪೇಟೆ ಇತರೆ ಪದಾಧಿಕಾರಿಗಳು ಇದ್ದರು.

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ