ಕ್ರಾಂತಿವಾಣಿ ವಾರ್ತೆ ಸುರಪುರ: ಶ್ರೀಗಂಧ ನಾಡು, ಕರುನಾಡು ಬೀಡಾಗಿರುವ ಕರ್ನಾಟಕದ ಕನ್ನಡ ಭಾಷೆ ಎಲ್ಲೆಡೆ ಡಿಮ್‌ಡಿಮಾ ಮೊಳಗಬೇಕು. ಐತಿಹಾಸಿಕ ಕನ್ನಡ ಭಾಷೆ ಮೆರಗು ಹೆಚ್ಚಿಸಲು ಕನ್ನಡದಲ್ಲೇ ಮಾತನಾಡಬೇಕು ಎಂದು ತಹಸೀಲ್ದಾರ್ ಕೆ. ವಿಜಯಕುಮಾರ ಹೇಳಿದರು.
ನಗರದ ತಹಸೀಲ್ದಾರ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೫೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು. ಎಲ್ಲ ಸಮಾಜ ಬಾಂಧವರು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಉಪನ್ಯಾಸ ನೀಡಿದ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ತಿಪ್ಪಾರೆಡ್ಡಿ ಮಾಲಿಪಾಟೀಲ ಮಾತನಾಡಿ, ಏಕೀಕರಣಕ್ಕೂ ಮುಂಚೆ ಕನ್ನಡ ಪ್ರದೇಶಗಳು ಹರಿದು ಹಂಚಿ ಹೋಗಿದ್ದವು. ¥sಫಜಲ್ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಕನ್ನಡ ಪ್ರಾದೇಶಿಕ ಪ್ರದೇಶಗಳನ್ನು ಒಗ್ಗೂಡಿಸಿ ೧೯೫೬ ನವೆಂಬರ್ ೧ರಂದು ಮೈಸೂರು ರಾಜ್ಯವಾಯಿತು. ೧೯೭೩ರಂದು ನವೆಂಬರ್ ೧ರಂದು ಮೈಸೂರು ಬದಲಾಗಿ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ಏಕೀಕರಣಕ್ಕೆ ಸಾಹಿತಿಗಳಾದ ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ, ಬಿ.ಎಂ. ಶ್ರೀಕಂಠಯ್ಯ, ಎಎ.ಎನ್. ಕೃಷ್ಣರಾವ್ ಇತರರು ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಕೃಷ್ಣ ದೇವರಾಜ ಅರಸು ಕರ್ನಾಟಕ ನಾಮಕರಣಗೊಳಿಸಿದರು ಎಂದು ತಿಳಿಸಿದರು.
ಉಪ ಖಜನಾಧಿಕಾರಿ ಸಣ್ಣಕೆಪ್ಪ ಕೊಂಡಿಕಾರ ಉಪನ್ಯಾಸ ನೀಡಿದರು. ಉಪ ತಹಸೀಲ್ದಾರ್ ಮಲ್ಲಯ್ಯ ದಂಡಿ, ತಾಪಂ ಇಒ ಬಸವರಾಜ ಸಜ್ಜನ್, ತಾಲೂಕು ಆರೋಗ್ಯಾಧಿಕಾರಿ ಆರ್.ವಿ. ನಾಯಕ, ಎಂಡಿಎಂ ಯಲ್ಲಪ್ಪ ಚಂದನಕೇರಿ, ಸಮಾಜ ಕಲ್ಯಾಣ ಅಧಿಕಾರಿ ಮಹಮದ್ ಸಲೀಂ, ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮಡ್ಡಿ, ಚಂದ್ರಶೇಖರ ನಾಯಕ , ಶರಣು ಹೂಗಾರ, ವಜಾಹತ್ ಹುಸೇನ್ ಇತರರಿದ್ದರು.