ಕ್ರಾಂತಿವಾಣಿ ವಾರ್ತೆ ಸುರಪುರ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ನಗರದ ಮಾರ್ಕೆಟ್ ಹತ್ತಿರ ಇರುವ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿ ಮಾಲಾರ್ಪಣೆ ಮಾಡಿ ಹಂಚಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ಒಡನಾಯಕ ಗೊಂದೇನೂರು ಜಾಗೀರದಾರ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶದ ಏಕತೆಗಾಗಿ ನಡೆಸಿದ ಹೋರಾಟ ಮತ್ತು ಅವರು ನೀಡಿದ ಸಂದೇಶವನ್ನು ಸಾರುವ ಜತೆಗೆ ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರ ಕರೆ ಕೊಟ್ಟಿದೆ. ಆಕ್ಟೋಬರ್ 31 ರಂದು ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದೇಶದ ಎಲ್ಲಾ ಪ್ರಜೆಗಳು, ದೇಶದ ಒಳಿತಿಗಿ ಒಗ್ಗೂಡಿ ಕೆಲಸ ಮಾಡುವುದು ಈ ದಿನದ ಆಚರಣೆಯ ದಿನವಾಗಿದೆ ಎಂದು ತಿಳಿಸಿದರು.
ಸಂಘ ಪರಿವಾತದ ಗುರುನಾಥ ಶೀಲವಂತ, ಸರ್ದಾರ ವಲ್ಲಭಬಾಯಿ ಪಟೇಲರವರು ಗುಜರಾತಿನ ಕರುಣಾಂಡ್‌ನಲ್ಲಿ 1875 ರ ಅಕ್ಟೋಬರ್ 31 ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ ಅವರು ಕಾನೂನು ಪದವಿ ಪಡೆದಿದ್ದರೂ, ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ಥತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು ಎಂದರು.
ಇದೇ ಸಂದರ್ಭದಲ್ಲಿ ವೆಂಕಟೇಶ ನಾಯಕ, ಜಲ್ಲಿಪಾಳೆ, ಹಣಮಂತ್ರಾಯ ಹುಲಿಹೈದರು, ಮರಪ್ಪ ದಾಯಿಯವರು, ಶಂಕರಗೌಡ ಪಾಟೀಲ, ಅಪ್ಪಾಪ್ಪನಾಯಕ ಪುಲಿಬೆಂಚಿ ದೂರಿ, ಪ್ರೊ.ಶ್ರೀನಿವಾಸ ನಾಯಕ ದೊರಿ ಮತ್ತು ನಾರಾಯಣ ಪತ್ತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.