ಕ್ರಾಂತಿವಾಣಿ ವಾರ್ತೆ ಶಹಾಪುರ.
ಸರ್ಕಾರಿ ಬಸ್ ಬೈಕ್ ನಡುವೆ ಡಿಕ್ಕಿಯಾಗಿ (accident) ಬೈಕ್ನಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆ ಯಾದಗಿರಿ ಜಿಲ್ಲೆಯ ವಡೇಗೇರಾ ತಾಲೂಕಿನ ಶಿವಪುರ ಗ್ರಾಮದ ಬಳಿ ನಡೆದಿದೆ.
ವಡಗೇರಾ ತಾಲೂಕಿನ ಶಿವಪುರ ಗ್ರಾಮದ ಸಾಬಣ್ಣ ತನ್ನ ಮೂರು ಜನ ಮಕ್ಕಳನ್ನು ಬೈಕ್ ನಲ್ಲಿ ಕುಳ್ಳಿಸಿ ಕೊಂಡು ಜಮೀನಿಗೆ ತೆರಳುತ್ತಿರುವ ಸಂದರ್ಭದಲ್ಲಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸಾಬಣ್ಣ( 34) ಮನುಜ (7) ಚೈತ್ರ( 9 ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಿತಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರೊಚ್ಚಿಗೆದ್ದ ಶಿವಪುರ ಗ್ರಾಮಸ್ಥರು ಬಸ್ಸಿನ ಗಾಜುಗಳನ್ನು ಜಖಂಗೊಳಿಸಿದ್ದಾರೆ ಎನ್ನಲಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ಬೆಳೆದ ಜಾಲಿ ಕಂಠಿ ಗಿಡಗಳಿಂದ ಬೈಕ್ ಸವಾರನಿಗೆ ಬಸ್ ಬರುವುದು ಕಾಣದೇ ಇರದ ಪರಿಣಾಮ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ರಸ್ತೆಯನ್ನು ಆವರಿಸಿದ ಗಿಡಗಳನ್ನು ಕಡಿಯಬೇಕು ಎಂದು ಸಾರ್ವನಿಕರು ಆಗ್ರಹಿಸಿದ್ದಾರೆ.ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.