ಕ್ರಾಂತಿವಾಣಿ ವಾರ್ತೆ ಸುರಪುರ:ಧಾರ್ಮಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆಯನ್ನು ಗುರುತಿಸಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಸವ ಧರ್ಮ ಪೀಠದಿಂದ ನಡೆದ ಕಲ್ಯಾಣ ಪರ್ವ ಉತ್ಸವದಲ್ಲಿ ಉಪನ್ಯಾಸಕ ಡಾ. ಶಾಂತಗೌಡರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಗುರು ಬಸವಣ್ಣನವರ ಸಂದೇಶ ಪಸರಿಸಲು ತನು ಮನ ಧನ ಸಮಯ ದಾನ ಮಾಡಿದ್ದಾರೆ. ಬಸವ ಧರ್ಮ ಪೀಠ, ವಿಶ್ವಸ್ಥ ಸಮಿತಿಯು ಕೈಗೊಂಡ ಸಾಮಾಜಿಕ, ಧಾಮಿ ಈ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬಸವ ವಾದಿಗಳು ಸಂಘಟಿತವಾಗಿ, ವ್ಯವಸ್ಥಿತವಾದ ಆದರ್ಶ ಧರ್ಮ, ಸಮವಾಗಿ ಕಾರ್ಯದಲ್ಲಿ ತೊಡಗಬೇಕಾಗಿದೆ. ಈ ಎಲ್ಲಾ ಅಶೋತ್ತರಗಳಿಗೆ ಪೂರಕವಾಗಿ ಸೇವೆಯನ್ನು ಗುರುತಿಸಿ ಉಪನ್ಯಾಸಕ ಡಾ. ಶಾಂತಗೌಡರಿಗೆ ಪ್ರಶಸ್ತಿ ನೀಡಿ ಬಸವ ಪೀಠ ಗೌರವಿಸಿದೆ.
ಈ ಸಂದರ್ಭದಲ್ಲಿ ಮಹಾಜಗದ್ಗುರು ಗಾದೇವಿಯವರು ಸವ ಧರ್ಮ ಪೀಠ, ಸಂಗಮ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಜಿ ಪೀಠಾಧ್ಯಕ್ಷರು, ಅಲ್ಲಮಪ್ರಭು ಪೀಠ ಬಸವ ಮಹಾಮನೆ, ಮಹಾಮಠ, ಬಸವಕಲ್ಯಾಣ, ಶರಣ ಸಂಗಮೇಶ ಎನ್.ಅಧ್ಯಕ್ಷರು, ಕಲ್ಯಾಣ ಪರ್ವ ಇತರರಿದ್ದರು.