ಕ್ರಾಂತಿವಾಣಿ ವಾರ್ತೆ ಸುರಪುರ: ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದ ಸಾಮಾಜಿಕ ಹೋರಾಟಗಾರ ದಲಿತ ಮುಖಂಡನ ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಜಾಂಬವ ಯುವ ಸೇನೆ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹಣಮಂತ ಎಂ. ಬಿಲ್ಲವ್, ಮಾನವಿ ತಾಲೂಕಿನ ಮದ್ದಾಮರ ಗ್ರಾಮದ ಸಾಮಾಜಿಕ ಹೋರಾಟಗಾರ, ದಲಿತ ಮುಖಂಡ ಪ್ರಸಾದ ಮದ್ದಾಪೂರ ಅವರನ್ನು ತೋಟಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ತಡೆದು ಕೆಲ ಕಿಡಿಗೇಡಿಗಳು ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿ ಕೊಲೆಗೈದಿದ್ದಾರೆ. ಈ ಘಟನೆಯನ್ನು ಡಿಎಸ್.ಎಂ. ರಮೇಶ ಚಕ್ರವರ್ತಿ ಸಂಸ್ಥಾಪಕರು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಚಿತವಾದ ಯಾದಗಿರಿ ಜಿಲ್ಲೆ ಜಾಂಬವ ಯುವ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ರಾಜ್ಯದಲ್ಲಿ ದಲಿತ ಹೋರಾಟಗಾರರು, ಸಾಹಿತಿಗಳು, ಭಯದಲ್ಲಿದ್ದಾರೆ. ಇಂತಹ ಪ್ರಕರಣಗಳು ಮೇಲಿಂದ ಮೇಲೆ ಆಗುತ್ತಿರುವುದು ಆತಂಕವನ್ನು ಉಂಟು ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಆದ್ದರಿಂದ ರಾಜ್ಯದ ಮಾನ್ಯ ಗೃಹ ಸಚಿವರು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು.
ದಲಿತರಿಗೆ ಸೂಕ್ತವಾದ ರಕ್ಷಣೆ ಒದಗಿಸಿ ಈ ಪ್ರಕರಣವನ್ನು ಸಿ.ಓ.ಡಿ, ತನಿಖೆಗೆ ವಹಿಸಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಅಯ್ಯಪ್ಪ ಟಿ. ಬಿಲ್ಲವ, ಪ್ರಧಾನ ಕಾರ್ಯದರ್ಶಿ ಸಂತೋಷ ಮ್ಯಾತಿ, ಸಂಘಟನೆ ಕಾರ್ಯದರ್ಶಿ ದೇವಿಂದ್ರಪ್ಪ ಶಾಂತಗಿರಿ ಹೇಮನೂರು, ಸಹಕಾರ್ಯದರ್ಶಿ ಯಲ್ಲಪ್ಪ ಆರ್ಗ ಮತ್ತು ಸುರಪುರ ತಾಲೂಕು ಅಧ್ಯಕ್ಷರು ಮರೆಪ್ಪ ಪುಜಾರಿ, ಉಪಾಧ್ಯಕ್ಷರು ಭೀಮಣ್ಣ ಖಂಡ್ರೆ, ಖಜಾಂಚಿ ಕೃಷ್ಣಾ ಕಡಿಮನಿ, ಹುಣಸಗಿ ತಾಲೂಕು ಅಧ್ಯಕ್ಷರು ಪರಮಣ್ಣ ದೊಡ್ಡಮನಿ, ವಡಗೇರಾ ತಾಲೂಕಾ ಅಧ್ಯಕ್ಷರು ಕಿರಣ, ಹಾಗೂ ಜಾಂಬವ ಯುವ ಸೇನೆಯ ಜಿಲ್ಲಾ ಮತ್ತು ತಾಲೂಕಾ ಎಲ್ಲಾ ಪದಾಧಿಕಾರಿಗಳು ಇದ್ದರು.