ಕ್ರಾಂತಿವಾಣಿ ವಾರ್ತೆ ಸುರಪುರ:
ಸುರಪುರ ಪ್ರಪ್ರಥಮ ಸಂಗೀತ ಪಾಠಶಾಲೆಯಾದ ಶ್ರೀ ಸೂಗುರೇಶ್ವರ ಸಂಗೀತ ಪಾಠಶಾಲೆಯ ಪ್ರಥಮ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದಿದ್ದ ಶ್ರೀ ವೇದಮೂರ್ತಿ ಶಿವಶರಣಯ್ಯ ಸ್ವಾಮಿ ಬಳುಂಡಗಿ ಮಠ
ಅವರು ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿ ಸಂಗೀತ ಸೇವೆ ಸಲ್ಲಿಸುವ ಮೂಲಕ ಈ ನಾಡಿನ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿದಿದ್ದಾರೆ ಇವರಿಗೆ ಯಾದಗಿರಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸದ ಸಂಗತಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ ಹೇಳಿದರು.
ನಗರದ ಸುರಪುರ ಮತ್ತು ರಂಗಂಪೇಟೆಯ ಕಲಾಬಳಗದ ವತಿಯಿಂದ
ವೀರಶೈವ ಕಲ್ಯಾಣ ಮಂಟಪ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜರುಗಿದ ಯಾದಗಿರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾದ ಶಿವಶರಣಯ್ಯ ಸ್ವಾಮಿ ಬಳುಂಡಗಿ ಮಠ ಅವರ ಸನ್ಮಾನ ಸಮಾರಂಭ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಶರಣರ ಹತ್ತಿರ ಸಂಗೀತ ಅಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ರಾಜ್ಯದ ಅನೇಕ ಭಾಗಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದು ಶ್ಲಾಘನೀಯ ಸಂಗತಿ. ಸಂಗೀತ ಆಲಿಸುವುದರಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ ಎಂಬುದು ವೈಜ್ಞಾನಿಕ ಸತ್ಯ ಸಂಗತಿಯಾಗಿದೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ, ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಸಂಗೀತವು ಮನುಷ್ಯನ ಮನಸ್ಸನ್ನು ಏಕಾಗ್ರತೆಗೊಳಿಸುವ ಮೂಲಕ ಮಾನಸಿಕ ಶಾಂತಿಯನ್ನು ನೀಡುತ್ತದೆ ಎಂದರು.
ಶರಣಪ್ಪ ಗುಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು. ಚೆನ್ನಪ್ಪ ಗುಂಡನೂರ್, ನಿಂಗಣ್ಣ ರಾಯಚೂರಕರ್, ಸೋಮಶೇಖರ್ ಶಾಬಾದಿ ವೇದಿಕೆಯಲ್ಲಿದ್ದರು.
ಸಂಗೀತ ಕಲಾಬಳಗದ
ರಾವ್ ಮಾಳದಕರ,
ರಾಜಶೇಖರ್ ಗೆಜ್ಜೆ, ರಮೇಶ್ ಕುಲಕರ್ಣಿ, ಉಮೇಶ್ ಯಾದವ್, ಸುರೇಶ್ ಅಂಬುರೆ, ಪ್ರಾಣೇಶ ರಾವ್ ಕುಲಕರ್ಣಿ,
ಶಿವಲಿಂಗಯ್ಯ ಸ್ವಾಮಿ ಬಳುಂಡಗಿ ಮಠ, ಮಹಾಂತೇಶ್ ಶಹಾಪುರ್ಕರ್, ಸೂಗಮ್ಮ ಕೊಂಗಂಡಿ, ಶರಣಬಸವ ಕೊಂಗಂಡಿ, ಜಗದೀಶ ಮಾನು, ಮಹಮ್ಮದ್ ಇಸಾಕ್ ಪ್ರಭು, ಗುರುನಾಥ್ ರೆಡ್ಡಿ ಶೀಲವಂತ, ಮಹೇಶ್ ಗೋಗಿ, ಚಂದ್ರಹಾಸ್ ಮಿಟ್ಟ ಲಕ್ಷ್ಮಿಪುರ, ನೂರೊಂದುಯ್ಯ ಸ್ವಾಮಿ ಲಕ್ಷ್ಮಿಪುರ, ಶಿವಶಂಕರ ಅಲ್ಲೂರ್ ಸಂಗೀತ ಸೇವೆ ನೆರವೇರಿಸಿದರು.
ಪ್ರಮುಖರಾದ
ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪ ಮಠ, ಕೊಟ್ಟಯ್ಯ ಸ್ವಾಮಿ ಬಳುಂಡಗಿ ಮಠ, ಮುದ್ದಣ್ಣ ಅಪ್ಪಗೋಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು
ಕಸಾಪ ಗೌರವ ಕಾರ್ಯದರ್ಶಿ ಎಚ್. ವೈ ರಾಠೋಡ್ ನಿರೂಪಿಸಿದರು. ರಮೇಶ್ ಕುಲಕರ್ಣಿ ಸ್ವಾಗತಿಸಿ ವಂದಿಸಿದರು.