ದಲಿತ ಮುಖಂಡನ ಹತ್ಯೆ ಆರೋಪಿಗಳ ಗಡೀಪಾರಿಗೆ ಸಾಮೂಹಿಕ ಸಂಘಟನೆ ವೇದಿಕೆ ಒತ್ತಾಯ

ಕ್ರಾಂತಿವಾಣಿ ವಾರ್ತೆ ಸುರಪುರ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದಲಾಪೂರ ಗ್ರಾಮದ ದಲಿತ ಮುಖಂಡನ ಹತ್ಯೆ ಮಾಡಿದವರನ್ನು ಗಡಿಪಾರು ಮಾಡಲು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ ಉಪ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಿಂಗಣ್ಣ ಎಂ. ಗೋನಾಲ ರು ದೇಶಕ್ಕೆ ಸ್ವತಂತ್ರ ಬಂದು ಸುಮಾರು ೭೦ ವರ್ಷಗಳು ಕಳೆದರೂ ಇಲ್ಲಿಯತನಕ ದಲಿತ ಹಿಂದುಳಿದ, ಅಲ್ಪಸಂಖ್ಯಾತರಿಗೆ ದಿನ ನಿತ್ಯ ಕಿರುಕುಳ, ಹಲ್ಲೆ, ಕೊಲೆ, ಸೂಲಿಗೆ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದಲಾಪೂರ ಗ್ರಾಮದ ದಲಿತ ಮುಖಂಡನಾದ ಪ್ರಸಾದ ಮದಲಾಪೂರ ಎನ್ನುವ ದಲಿತ ವ್ಯಕ್ತಿಯನ್ನು ಹಾಡು ಹಗಲೆ ಮಚ್ಚಿನಿಂದ ಕೊಲೆ ಮಾಡಿದ್ದನ್ನು ಸಾಮೂಹಿಕ ಸಂಘಟನೆಗಳು ಖಂಡಿಸುತ್ತವೆ ಎಂದರು.
ಸಾಮಾಜಿಕ ಹೋರಾಟಗಾರರು ಹತ್ಯೆ ಹಾಗೂ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ ಮಾಡಿ ಕೊಲೆ ಮಾಡತಕ್ಕಂತ ಸಂಸ್ಕೃತಿ ನಮ್ಮ ದೇಶದಲ್ಲಿ ಕೆಲ ಪಟ್ಟಾಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ನಡೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ನಾಗರಾಜ ಓಕುಳಿ, ದಾನಪ್ಪ ಕಡಿಮನಿ, ಮಲ್ಲು ಬಿಲ್ಲವ್, ಭೀಮಣ್ಣ ದೀವಳಗುಡ್ಡ, ರಮೇಶ್ ಪೂಜಾರಿ, ಹಣಮಂತ ಕೆ, ನಾಗು ಗೋಗಿಕೇರಾ, ಶಿವಣ್ಣ ನಾಗರಾಳ, ಮಾನಪ್ಪ ಶೆಳ್ಳಗಿ, ಹಣಮಂತ ಬೋನಾಳ, ಭೀಮಣ್ಣ ಮ್ಯಾಗೇರಿ, ರಾಕೇಶ, ಬಸವರಾಜ ಹಾದಿಮನಿ, ನಂದಪ್ಪ ಕಕ್ಕೇರಾ, ಬಸವರಾಜ, ಚಂದ್ರು ನಡುಗೇರಿ, ಅಪ್ಪಣ್ಣ ಕವಡಿಮಟ್ಟಿ, ಮೌನೇಶ, ಹುಸನಪ್ಪ ರುಕ್ಮಾಪುರ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ