ನಮ್ಮ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ
ಕ್ರಾಂತಿವಾಣಿ ಶಹಾಪುರ.
ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಿಸುವ ಗುರುತರ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ. ರಾಷ್ಟ್ರಕೂಟರ ಕಾಲದ ಐತಿಹಾಸಿಕ, ಶಿಲ್ಪ ಕಲೆಯ ಶ್ರೀಮಂತಿಕೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಶಿರವಾಳ ದಕ್ಷಿಣ ಕಾಶಿ ಎಂದೆ ಪ್ರಸಿದ್ಧಿ ಪಡೆದಿದೆ. ಇಂತಹ ಮಹತ್ವದ ತಾಣಗಳನ್ನು ಪುನರುತ್ಥಾನಗೊಳಿಸದೆ ಹಾಳು ಮಾಡುತ್ತಿದ್ದೇವೆ. ಐತಿಹಾಸಿಕ ಸ್ಮಾರಕಗಳನ್ನು ಹಾಳು ಮಾಡುವುದರಿಂದ ನಮ್ಮ ಇತಿಹಾಸವನ್ನು ನಾವೇ ನಾಶ ಮಾಡಿದಂತಾಗುತ್ತದೆ. ಇವುಗಳ ಸಂರಕ್ಷಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಪ್ರಕಟಿಸಿದರು.
ನಮ್ಮ ಸ್ಮಾರಕಗಳ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಶಿರವಾಳದ ರಾಷ್ಟ್ರಕೂಟರ ಕಾಲದ ಐತಿಹಾಸಿಕ ದೇವಾಲಯಗಳ ಸಂಕೀರ್ಣ ವೀಕ್ಷಿಸಿದ ನಂತರ ಮಾತನಾಡಿದ ಅವರು,
ರಾಜ ಮಹಾರಾಜರ ಕಾಲದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ಮಿಸಿದ ಹಲವು ಸ್ಮಾರಕಗಳು, ಕೋಟೆ ಕೊತ್ತಲಗಳು, ಗುಡಿ-ಗುಂಡಾರ, ಕೆರೆ-ಕಟ್ಟೆಗಳು, ಚರ್ಚ್-ಮಸೀದಿಗಳು ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿವೆ. ಮುಂದಿನ ಪೀಳಿಗೆಗೆ ಸ್ಮಾರಕಗಳನ್ನು ಉಳಿಸಬೇಕು. ಶಿರವಾಳ ಈ ದೇವಾಲಯ ಯಾವ ಹಂಪೆಗಿಂತ ಕಡಿಮೆ ಇಲ್ಲ ಎನಿಸುತ್ತಿದೆ. ಇಂತಹ ಮಹತ್ವದ ತಾಣಗಳು ಹಾಳು ಬಿದ್ದಿರುವುದು ದುರ್ದೈವದ ಸಂಗತಿ. ಶಿರವಾಳದಲ್ಲಿ ಸಂಶೋಧಕರ ಪ್ರಕಾರ 360 360 ಬಾವಿಗಳು ಮತ್ತು ಸಾವಿರಾರು ಲಿಂಗುಗಳಿವೆ. ಈ ಗ್ರಾಮದ ತುಂಬೆಲ್ಲ ದೇವಾಲಯಗಳಿವೆ. ಇಂತಹ ಅದ್ಭುತ ತಾಣ ನಾನೆಲ್ಲಿ ಕಾಣೆ. ಆದರೆ ಇವುಗಳ ಪುನರುತ್ಥಾನ ಕೆಲಸ ನಡೆಯಬೇಕಿದೆ. ಗ್ರಾಮಸ್ಥರು, ಅಧಿಕಾರಿಗಳು ರಾಜಕೀಯ ಇಚ್ಛಾ ಇವುಗಳ ರಕ್ಷಣೆಯ ಉದ್ದೇಶದಿಂದ ಇಂದು ರಾಜ್ಯದಾದ್ಯಂತ ನಮ್ಮ ಸ್ಮಾರಕಗಳ ದರ್ಶನ ಹಾಗೂ ಅವರ ರಕ್ಷಣೆಗಾಗಿ ಪ್ರವಾಸ ಕೈಗೊಂಡಿದ್ದಾರೆ.ಸ್ಮಾರಕ ರಕ್ಷಣೆಗಾಗಿ ಹೊಸ ಚಿಂತನೆಗಳನ್ನು ಮಾಡಿದ್ದು, ಸುಮಾರು ಸಾವಿರ ಸ್ಮಾರಕ ಉದ್ಯಮಿಗಳು, ಸಂಘ, ಸಂಸ್ಥೆಗಳಿಗೆ ದತ್ತು ನೀಡುವ ಮೂಲಕ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ.
ಹೈದ್ರಾಬಾದನ ಶ್ರೀಮಂತ ಉದ್ಯಮಿ ಹರ್ಷ ಲಾಹೋಟಿ ಅವರು ಚಿತಾಪುರ ತಾಲೂಕಿನ ನಾಗಾವಿ ದೇವಾಲಯ ಸೇರಿದಂತೆ ದೇಶದ ಪ್ರಮುಖ ನಾಲ್ಕು ತಾಣಗಳ ದತ್ತು ಪಡೆದು, ಜೀರ್ಣೋದ್ಧಾರ ಕಾರ್ಯಕೈಗೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಅವರೇ ಯಾದಗಿರಿ ಕೋಟೆಯನ್ನು ಸಹ ದತ್ತು ಪಡೆದಿದ್ದು, ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. ಆಯಾ ಸ್ಮಾರಕಗಳ ಮುಂದೆ ಅವರದೊಂದು ನಾಮಫಲಕ ಹಾಕದಿದ್ದರೆ. ಯಾವುದೇ ಸ್ಮಾರಕಗಳನ್ನು ಅವರ ಸುಪರ್ದಿಗೆ ಕೊಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಶಿರವಾಳದ ನಂತರ ಶಹಾಪುರ ಪಟ್ಟಣದ ದಿಗ್ಗಿ ಅಗಸಿ ಮತ್ತು ಕನ್ಯಾಕೋಳೂರ ಅಗಸಿ ಸೇರಿದಂತೆ ಬುದ್ಧ ಮಲಗಿದ ದೃಶ್ಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಮತ್ತು ಸಿಇಓ ಗರೀಮಾ ಪನ್ವಾರ ಸೇರಿದಂತೆ ಪುರಾತತ್ವ ಇಲಾಖೆ ರಾಜ್ಯ ಆಯುಕ್ತರಾದ ದೇವರಾಜ, ತಹಸಿಲ್ದಾರ್ ವುಮಕಾಂತ ಹಳ್ಳೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರೆದಾರ್, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎಸ್ ಎಂ ಪಾಟೀಲ್ ಸೇರಿದಂತೆ ಹಲವರು ಇದ್ದರು.