ಸುರಪುರದಲ್ಲಿ ಕಣ್ಮಚ್ಚಿದ ಸಿಸಿ ಕ್ಯಾಮೆರಾಗಳು, ನಿರ್ವಹಣೆ ಯಾರ ಹೊಣೆ!

 

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ಕಳ್ಳತನ ದರೋಡೆ ಮತ್ತು ಸಂಚಾರವನ್ನು ನಿಯಂತ್ರಿಸಲು ನಗರಸಭೆಯ ಅನುದಾನದಲ್ಲಿ ನಗರದ ವ್ಯಾಪ್ತಿಯ ವಿವಿಧಡೆ ಎಂಟು ಕ್ಯಾಮೆರಾಗಳನ್ನು ಲಕ್ಷಾಂತರ ವೆಚ್ಚದಲ್ಲಿ ಅಳವಡಿಸಿದ್ದು, ನಿರ್ವಹಣೆ ಇಲ್ಲದೆ ಅವಸಾನದತ್ತ ಸಾಗುತ್ತವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಿನ ಶಾಸಕ ನರಸಿಂಹರಾಜ ನಾಯಕ ರಾಜುಗೌಡ ಅವರ ಆಸಕ್ತಿಯ ಮೇರೆಗೆ ನಗರದಲ್ಲಿ ಎಂಟು ಕಡೆ ಎಂಟು ಲಕ್ಷ ರೂ. ವೆಚ್ಚದಲ್ಲಿ ಗುಣಮಟ್ಟದ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಿ ಚಾಲನೆ ನೀಡಿದರು. ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಲು ಗುತ್ತಿಗೆ ಪಡೆದವರು ಒಂದು ವರ್ಷ ನಿರ್ವಹಣೆ ನಂತರ ಸಿಸಿ ಕ್ಯಾಮೆರಾಗಳು ಹಳ್ಳ ಹಿಡಿದಿವೆ.
ಗುತ್ತಿಗೆದಾರರ ಅವಧಿ ಮುಗಿದ ನಂತರ ಸಿಸಿ ಕ್ಯಾಮೆರಾಗಳ ನಿರ್ವಹಣೆ ಪೊಲೀಸ್ ಇಲಾಖೆ ಮಾಡಬೇಕಿದೆ. ದೊಡ್ಡ ಎಲ್ಇಡಿ ಟಿವಿಯ ಮೂಲಕ ಎಲ್ಲಾ ಸಿ ಸಿ ಕ್ಯಾಮೆರಾ ಗಳ ಮಾನಿಟರ್ ಗಳನ್ನು ಠಾಣೆಯಿಂದಲೇ ಮಾಡಲಾಗುತ್ತಿತ್ತು. ಆರಂಭದ ಶೂರತ್ವ ಮೆರೆದ ಪೊಲೀಸರು ನಂತರ ದಿನಗಳಲ್ಲಿ ಅದರ ಸಿ ಸಿ ಕ್ಯಾಮೆರಾಗಳಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಇಂದು ಯಾವುದೇ ಸಿಸಿ ಕ್ಯಾಮೆರಾ ಗಳು ಕಾರ್ಯ ನಿರ್ವಹಿಸದೆ ಕಳ್ಳರಿಗೆ ಗೆ ರಹದಾರಿ ಮಾಡಿ ಕೊಟ್ಟಿದೆ ಎನ್ನಲಾಗುತ್ತಿದೆ.
ಸುರಪುರ ನಗರದ ಪ್ರಮುಖ ಹೃದಯ ಭಾಗಗಳಾದ
ವಲ್ಲಭಾಯಿ ವೃತ್ತ, ಅಂಬೇಡ್ಕರ್ ಸರ್ಕಲ್,
ಬಸ್ ನಿಲ್ದಾಣ, ವೆಂಕಟಪ್ಪ ನಾಯಕ ಸರ್ಕಲ್,
ಹಳೆ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಸುರಪುರದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಿದ ನಂತರವೂ ಅ ಬೈಕ್ ಕಳ್ಳತನ ಮುಂದುವರಿದಿದೆ..
ನಗರಸಭೆಯ ವಿಶೇಷ ಅನುದಾನದಲ್ಲಿ 8 ಲಕ್ಷ ರೂ ವೆಚ್ಚದಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿ ಸಂಭ್ರಮದ ಸಭೆಯ ಮೂಲಕ ಚಾಲನೆ ನೀಡಿದ್ದು ಇಂದು ಕೆಲಸಕ್ಕೆ ಬಾರದಂತಾಗಿದೆ.
ಪೊಲೀಸ್ ಇಲಾಖೆಯವರನ್ನು ಸಂಪರ್ಕಿಸಿದರೆ ಸಿ ಸಿ ಕ್ಯಾಮೆರಾ ಗಳ ನಿರ್ವಹಣೆಯನ್ನು ನಾವು ಮಾಡುತ್ತೇವೆ ಯಾವುದೋ ಸಣ್ಣಪುಟ್ಟ ರಿಪೇರಿಗಳು ಮತ್ತು ಅದರ ಖರ್ಚು ವೆಚ್ಚಗಳನ್ನು ನಗರಸಭೆ ಭರಿಸಬೇಕಾಗುತ್ತದೆ ಎಂದು ತಿಳಿಸುತ್ತಾರೆ.
ನಗರಸಭೆ ಪೌರಾಯುಕ್ತ ಕ್ರಾಂತಿವಾಣಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ನಗರಸಭೆಯ ಅನುದಾನದ ದಲ್ಲಿ 8 ಲಕ್ಷ ರೂ ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ನಿರ್ವಹಣೆಯನ್ನು ಪೋಲಿಸ್ ಇಲಾಖೆಯು ಮಾಡಬೇಕಾಗುತ್ತದೆ. ಸಿ ಸಿ ಕ್ಯಾಮೆರಾ ಅಳವಡಿಸಲು ಗುತ್ತಿಗೆ ಪಡೆದ ಕಾಂಟ್ರಾಕ್ಟರ್ ಒಂದು ವರ್ಷನಿರ್ವಹಣೆ ಮಾಡಿದ ನಂತರ ಉಸ್ತುವಾರಿಯನ್ನು ಪೋಲಿಸ್ ಇಲಾಖೆ ಮಾಡಬೇಕಿದೆ. ಆದರೆ ನಗರಸಭೆಯವರೇ ಖರ್ಚು ವೆಚ್ಚಗಳನ್ನು ಭರಿಸಬೇಕೆಂಬುದು ಇಲ್ಲವೆಂದು ತಿಳಿಸಿದ್ದಾರೆ.
ನಗರಸಭೆ ಮತ್ತು ಪೊಲೀಸ್ ಇಲಾಖೆಯ ಜಂಜಾಟದಲ್ಲಿ ನಗರದಲ್ಲಿರುವ ಸಿಸಿ ಕ್ಯಾಮೆರಾ ಗಳು ಮಖಾಡೆ ಮಲಗಿ ಕಳ್ಳರಿಗೆ ಮತ್ತು ದರೋಡೆಕೋರರನ್ನು ಕೈಬೀಸಿ ಕರೆಯುತ್ತಿವೆ.
ನಗರದಲ್ಲಿ ಕೆಟ್ಟು ನಿಂತಿರುವ ಸಿಸಿ ಕ್ಯಾಮೆರಾ ಗಳನ್ನು ದುರಸ್ತಿ ಪಡಿಸಿ ಕಳ್ಳತನ ಮತ್ತು ದರೋಡೆಯನ್ನು ನಿಯಂತ್ರಿಸಿ ಹಾಗೂ ಜನರ ಸುಖ ಜೀವನವನ್ನು ನಡೆಸಲು ಅನು ಮಾಡಿಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ..

ಕೋಟ್: ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ್ಣ ಜಿಲ್ಲಾ ಸಂಚಾಲಕ ಡಾ. ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ನಗರದಲ್ಲಿರುವ ಸಿ ಸಿ ಕ್ಯಾಮೆರಾಗಳನ್ನು ದುರಸ್ತಿಪಡಿಸಿ ಕಳ್ಳತನ ದರೋಡೆ ನಿಯಂತ್ರಿಸಬೇಕು. ಇಲ್ಲದಿದ್ದರೆ ನಗರಸಭೆ ಮತ್ತು ಪೊಲೀಸ್ ಠಾಣೆ ಎದರು ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ