ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಭಾರತೀಯ ಸ್ಟೇಟ್ ಬ್ಯಾಂಕ್‌ನೊಂದಿಗೆ ಕೆಎಸ್‌ಆರ್‌ಟಿಸಿ ಇಲಾಖೆಯೂ ಒಪ್ಪಂದ ಮಾಡಿಕೊಂಡಿದ್ದು, ಇದರನ್ವಯ ಶೂನ್ಯ ವಿಮೆಯಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಂಟುಂಬಕ್ಕೆ 5 ಜನನ೦ ಲಕ್ಷ ರೂ. ಚೆಕ್ ವಿತರಿಸಲಾಗುತ್ತಿದೆ. ಎಸ್‌ಬಿಐ ಬ್ಯಾಂಕ್‌ನ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಪ್ರಾದೇಶಿಕ ವ್ಯವಸ್ಥಾಪಕ ಶ್ರೀಪಾದರಾಜು ಹೇಳಿದರು.
ನಗರದ ಎಸ್‌ಬಿಐ ಶಾಖಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಬಿಐ ಅಪಘಾತ ವಿಮೆ ಸುರಕ್ಷಾ ಚೆಕ್ (೫೦ ಲಕ್ಷ ) ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯ ಪ್ರಥಮ ಪ್ರಕರಣ ಹಾಗೂ ದೇಶದಲ್ಲೇ ೬ನೇ ಪ್ರಕರಣ ಇದಾಗಿದೆ. ಅಪಘಾತದಲ್ಲಿ ಮೃತಪಟ್ಟ ಚಾಲಕ ನಮ್ಮ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಇದರಿಂದ ಯಾವುದೇ ವಿಮೆ ಪಾವತಿಸಿದೇ ಶೂನ್ಯ ವಿಮೆಯಲ್ಲಿ 5೦ ಲಕ್ಷ ರೂ. ಚೆಕ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಕೆಆರ್‌ಟಿಸಿ ಜಿಲ್ಲಾ ಮಟ್ಟದ ಅಧಿಕಾರಿ ಬಂಗಾರಪ್ಪ ಕಟ್ಟಿಮನಿ ಮಾತನಾಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ೨೭ ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ. ಸ್ಯಾಲರಿ ಅಕೌಂಟ್ ಇದ್ದವರು ಆಕಸ್ಮಿಕವಾಗಿ ಮೃತಪಟ್ಟರೆ ೫೦ ಲಕ್ಷ ರೂ. ವಿಮೆ ನೀಡುವುದರಿಂದ ಕಟುಂಬವೂ ಆರ್ಥಿಕವಾಗಿ ಸದೃಢವಾಗಿ ಜೀವಿಸಲು ಸಾಧ್ಯವಾಗುತ್ತದೆ. ಎಸ್‌ಬಿಐ ಬ್ಯಾಂಕ್‌ನ ಯೋಜನೆಗಳನ್ನು ಪ್ರತಿಯೊಬ್ಬರೂ ಸುದುಪಯೋಗ ಪಡೆದುಕೊಳ್ಳಬೇಕು ಎಂದರು.
ಎಸ್‌ಬಿಐ ಬ್ಯಾಂಕಿನ ಸಿಬ್ಬಂದಿ, ಕೆಕೆಆರ್‌ಟಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಮೃತರ ಕುಟುಂಬಸ್ಥರಿಗೆ 5೦ ಲಕ್ಷ ರೂ. ಪರಿಹಾರ ಚೆಕ್‌ನ್ನು ವಿತರಿಸಲಾಯಿತು.
ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ರಮೇಶ ವೈ., ಕೆಕೆಆರ್‌ಟಿಸಿ ಅಕೌಂಟ್ ಅಧಿಕಾರಿ ಯುವರಾಜ್, ಎಸ್‌ಬಿಐ ವ್ಯವಸ್ಥಾಪಕ ಲೋಕೇಶ್, ಎಡಿಬಿ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ್ ಪಾಂಚಾಳ, ನಾರಾಯಣ ಕುಲಕರ್ಣಿ, ಯಂಕಪ್ಪ ನಾಯಕ, ಜಯಪ್ರಕಾಶ, ಮಂಜುನಾಥ, ಜ್ಯೋತಿ, ಮಲ್ಲಿಕಾರ್ಜುನ, ಚಂದ್ರಶೇಖರ ಚವ್ಹಾಣ, ಶರಣು ಇತರರಿದ್ದರು.