ಸುರಕ್ಷತೆ ಇಲ್ಲದೆ ಹಗಲು ಹೊತ್ತಿನಲ್ಲೇ ನಗರದೊಳಗಿಂದ ಮರಳು ಸಾಗಾಟ; ಶಪಿಸುತ್ತಿರುವ ಜನತೆ

ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಅನ್ನದಾತರ ಜೀವನಾಡಿ ಕೃಷ್ಣಾ ನದಿಯ ಒಡಲನ್ನು ಅಗೆದು ಮರಳನ್ನು ಸಾಗಿಸುತ್ತಿರುವ ಹಟ್ಟಿ ಚಿನ್ನದ ಗಣಿ ಕಂಪನಿಯವರು ರಾಜಾರೋಶವಾಗಿ ಯಾವುದೇ ಸುರಕ್ಷತೆ ಇಲ್ಲದೆ ನಗರದೊಳಗೆ ಶಾಲೆ ಬಿಟ್ಟ ಸಮಯದಲ್ಲಿ ಮರಳು ತುಂಬಿದ ಟಿಪ್ಪರಗಳು ಸಂಚರಿಸುತ್ತಿದ್ದರೂ ತಾಲೂಕಾಡಳಿತ ಮತ್ತು ಪೊಲೀಸ ಇಲಾಖೆಯ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ನಿತ್ಯ ನೂರಾರು ಮರಳು ಹೊತ್ತ ಟಿಪ್ಪರ್ ಗಳು ನಗರದ ಒಳಗೆ ಮತ್ತು ಹೊರವಲಯದಿಂದ ಸಂಚಾರ ಮಾಡುತ್ತಿವೆ. ಮರಳು ತುಂಬಿದ ಲಾರಿಗಳು ತೆರೆದೇ ಸಂಚರಿಸುವಾಗ ಮರಳುಗಳು ಹಾರಿ ಮಕ್ಕಳ ಕಣ್ಣಿಗೆ, ವಯೋ ವೃದ್ಧರ ಕಣ್ಣಿಗೆ ಮತ್ತು ವಯಸ್ಕರ ಕಣ್ಣುಗಳಿಗೆ ಬೀಳುವ ಸಾಧ್ಯತೆ ಇರುತ್ತದೆ. ಅಲ್ಲದೆ ವಾಹನಗಳು ಚಲಿಸುವಾಗ ಮರಳು ಹಾರಿ ವಾಹನಗಳ ಗ್ಲಾಸ್ ಗಳಿಗೆ ಬಿದ್ದು, ಅಪಘಾತಗಳು ಸಂಭವಿಸಬಹುದು.
ಮರಳು ಒತ್ತು ಸಾಗುವ ಟಿಪ್ಪರ್ ಗಳು ಧೂಳನ್ನು ಎಬ್ಬಿಸಿ ವೇಗವಾಗಿ ಎದ್ದೇಳುತ್ತಿದೆ. ಇದರಿಂದ ನಗರದ ರಸ್ತೆ ಬದಿಯ ವ್ಯಾಪಾರಸ್ಥರು ಯಾವಾಗಾದರೂ ಮರಳು ಲಾರಿಗಳ ಓಡಾಟ ನಿಲ್ಲುತ್ತೋ, ಪೊಲೀಸರು ಏನ್ ಮಾಡುತ್ತಿದ್ದಾರೆ ಎಂದು ಗೊಣಗುತ್ತಾ ಇಡೀ ನಗರದ ಜನತೆಯು ಹಿಡಿ ಶಾಪ ಹಾಕುತ್ತಿದ್ದಾರೆ.
ರಾಯಲ್ಟಿ ನೀಡಿದ ಕಂದಾಯ ಇಲಾಖೆ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಕಣ್ಮುಚ್ಚಿ ಕುಳಿತರೆ ಇತ್ತ ಪೊಲೀಸ್ ಅಧಿಕಾರಿಗಳು ಯಾವ ಮರಳು ಲಾರಿ ಹೋದರೇನು? ಬಂದರೇನು? ನಮ್ಮ ಮಾಮೂಲಿ ನಮಗೆ ಬರಬೇಕು. ಅದಕ್ಕೂ ತೊಂದರೆ ಆಗಬಾರದು. ಹೀಗಾಗಿ ಪೊಲೀಸರು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೌನಕ್ಕೆ ಜಾರಿದ್ದಾರೆ.
ನಗರದ ಜನರಿಗೆ ಜೀವ ಹಾನಿ ಆಗುವ ಮುನ್ನ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರದ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಲಿಂಗರಾಜ್, ಕೃಷ್ಣಾನದಲ್ಲಿ ಮರಳನ್ನು ತೆಗೆಯಲು ಸಮಯ ನಿಗದಿ ಮಾಡಲಾಗಿದೆ . ಆದರೆ, ಮರಳನ್ನು ಒತ್ತುವಯಲು ಯಾವುದೇ ಸಮಯ ನಿಗದಿರುವುದಿಲ್ಲ ದಿನದ 24 ಗಂಟೆಯೂ ಸಂಚರಿಸಬಹುದು ಎನ್ನುತ್ತಾರೆ ..
ಹಾಗಾದರೆ ಅಧಿಕಾರಿಗಳ ಹೇಳಿದ ಮಾತನ್ನು ಟಿಪ್ಪರ್ಗಳು ನಿರಂತರವಾಗಿ ಭಾರ ಹೊತ್ತು ಸಾಧಿಸುವಾಗ ಅಪಘಾತಗಳಾದರೆ ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹೊಣೆಯಾಗುತ್ತಾರೆಯೇ? ಇತ್ತೀಚಿಗೆ ಹುಣಸಿಗಿಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಇನ್ನು ಮಾಸಿಲ್ಲ. ಹಾಗಾದ್ರೆ ಜೀವಗಳ ಹಾನಿಯನ್ನು ಗಣಿ ಮತ್ತು ಭೂ ವಿಜ್ಞಾನ ಹೊರ ಬೇಕಾಗುತ್ತದೆ‌. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ದಲಿತ ಮುಖಂಡರಾದ ಭೀಮಣ್ಣ ಸಿಂಧಗೇರಿ ಆಗ್ರಹಿಸಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ