ಕ್ರಾಂತಿವಾಣಿ ಶಹಾಪುರ.
ಬೆಳೆ ಬೆಳೆಯಲು ಬ್ಯಾಂಕ್ ಸಾಲ ಹಾಗೂ ಕೈಗಡ ಸಾಲದ ಹೊರೆ ತಾಳಲಾರದೆ ರೈತನೊಬ್ಬ ಬೆಳಗಿನ ಜಾವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುರಸಗುಂಡಿಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಕ್ಬುಲ್ ಸಾಬ್ ತಂದೆ ಖಾಜಾ ಹುಸೇನ್ ಮುಲ್ಲಾ(55) ನಗರದ ರೈತ. ಮೃತನಿಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳು ಇನ್ನು ಚಿಕ್ಕವರಿದ್ದಾರೆ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.
ಈತ ಶಹಾಪುರ ಶಾಖೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ ರೂ. ಬೆಳೆ ಸಾಲ ಹಾಗೂ ಕೈಗಡವಾಗಿ 12 ಲಕ್ಷ ರೂ. ಸಾಲ ಮಾಡಿದ್ದ. ಮೃತನ ಹೆಸರಲ್ಲಿ 5.20 ಜಮೀನಿದೆ. ಕಳೆದ ಮೂರು ವರ್ಷಗಳಿಂದ ಹತ್ತಿ ಮತ್ತು ತೊಗರಿ ಬೆಳೆ ಸರಿಯಾಗಿ ಬಾರದೇ ಇದ್ದಾನೆ ಎಂದು ಸಾಲ ತೀರಿಸುವ ದಾರಿ ಕಾಣದೆ, ಹತ್ತಿ ಬೆಳೆಗೆ ಸಿಂಪಡಿಸಲು ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕವನ್ನು ಬೆಳಗಿನ ಜಾವದಲ್ಲಿ ಸೇವಿಸಿದ. ನಂತರ ಮನೆಯ ಪಕ್ಕದಲ್ಲಿ ತಾಯಿ ಇರುವ ಒಂದು ಕೋಣೆಗೆ ಹೋಗಿ ತಾಯಿಯ ಹತ್ತಿರ ತನ್ನನ್ನು ತೊಡಿ ಕೊಳ್ಳುತ್ತಾ ಬಿದ್ದಿದ್ದಾನೆ. ತಕ್ಷಣ ಈತನ ಅಣ್ಣತಮ್ಮರು ಹೆಂಡತಿ ಬಂದು ನೋಡಿದಾಗ ವಿಷ ಸೇವಿಸಿ ತುಂಬಾ ಹೊತ್ತಾಗ ಅಲ್ಲಿ ಪ್ರದರ್ಶನಗೊಂಡಿದ್ದಾನೆ. ಎಂದು ಆತನ ಕುಟುಂಬಸ್ಥರು. ಗಂಡ ವಿಷ ಕುಡಿದಿರುವ ವಿಷಯವನ್ನು ಮೃತನ ಹೆಂಡತಿ ಮುಮ್ತಾಜ್ ಬೇಗಂ ಭೀಮರಾಯನ ಗುಡಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಭೀಮರಾಯನ ಗುಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬಸ್ಥರ ಆಕ್ರಂದನ. ಮೃತ ಕುಟುಂಬಸ್ಥರ ಹಾಗೂ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಶವ ನೋಡಿ ಚಿಕ್ಕ ಮಕ್ಕಳಿಬ್ಬರು ತೆಕ್ಕೆಗೆ ಬಿದ್ದು ಅಳುವುದನ್ನ ಕಂಡವರ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿದ್ದವು.
*****
ನನ್ನ ಗಂಡನಿಗಿಂತ ಆಸ್ತಿ ದೊಡ್ಡದಲ್ಲ. ಸಾಲ ಜಾಸ್ತಿ ಆಯ್ತು ಹೆಂಗ್ ಕೊಡುವುದು ಇದ ದೊಡ್ಡ ಚಿಂತೆಯಾಗ್ಯಾದ ಅಂತ ಹೇಳುತ್ತಿದ್ದ, ಧೈರ್ಯ ಬಿಡಬ್ಯಾಡ್ರಿ ಹೆಂಗಾರ ಮಾಡಿ ಸಾಲ ತೀರಿಸಾನು ಅಂತ ಧೈರ್ಯ ಹೇಳಿದ್ದೆ. ಆದರ ಸಾಲ ಎಷ್ಟು ಮಾಡಿನಿ ಅಂತ ಹೇಳಿಲ್ಲ. ಸಣ್ಣ ಸಣ್ಣ ಜೀವನ ಕಟ್ಟಿಕೊಂಡು ನಾ ಹೆಂಗ್ ಮಾಡಬೇಕು. ದುಡಿದಾಕೋ ಗಂಡನೆ ಹೋದ ಮೇಲೆ ಈಗ ನಮ್ಮ ಕುಟುಂಬಕ್ಕೆ ಯಾರು ದಿಕ್ಕು.
ಮುಮ್ತಾಜ್ ಬೇಗಂ ಮಕ್ಬುಲ್ ಮುಲ್ಲಾ. ಆತ್ಮಹತ್ಯೆ ಮಾಡಿಕೊಂಡ ರೈತನ ಹೆಂಡತಿ.