ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡ ಸಾಹಿತ್ಯ ಸಂಘವೂ ಒಂದು ಕೋಟಿ ಸದಸ್ಯತ್ವ ಗುರಿಯನ್ನು ಹೊಂದಿದ್ದು, ಕನ್ನಡ ಮನಸ್ಸುಗಳು, ಕನ್ನಡ ಆಸಕ್ತರು ಕೂಡಲೇ ಆನ್‌ಲೈನ್‌ನಲ್ಲಿ ಸದಸ್ಯತ್ವ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಸುರಪುರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಹೇಳಿದರು.
ನಗರದ ರಂಗAಪೇಟೆಯ ಬಸವೇಶ್ವರ ಕಾಲೇಜಿನ ಸಭಾಂಗಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಸಂಭ್ರಮ ೫೦ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಆನ್‌ಲೈನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿರವರು ೧ ಕೋಟಿ ಸದಸ್ಯತ್ವ ಗುರಿ ಇಟ್ಟುಕೊಂಡಿದ್ದಾರೆ. ಅದನ್ನು ತಲುಪಲು ಪ್ರತಿಯೊಬ್ಬರೂ ಶ್ರಮಿಸಬೆಕು ಎಂದು ಕರೆ ನೀಡಿದರು.
ಕರ್ನಾಟಕ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಸಹಸ್ರ ಸದಸ್ಯತ್ವ ಯೋಜನೆ ಹಮ್ಮಿಕೊಂಡು ಚಾಲನೆ ನೀಡಲಗಿದೆ. ಸುರಪುರ ಸಾಹಿತ್ಯ ಪರಿಷತ್ತು ಕೂಡ ಅಭಿಯಾನಕ್ಕೆ ಕೈಜೋಡಿಸುತ್ತದೆ. ಕಸಾಪ ಪದಾಧಿಕಾರಿಗಳು, ಹಿರಿಯರು, ಕಿರಿಯರು ಸದಸ್ಯತ್ವಕ್ಕೆ ಮುನ್ನುಡಿ ಬರೆಯೇಕು ಎಂದರು.
ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿ, ಕಸ್ತೂರಿ ಕನ್ನಡ ಭಾಷೆಗೆ ಹಿರಿದಾದ ಇತಿಹಾಸ, ಭವ್ಯ ಸಂಸ್ಕöÈತಿಯಿದ್ದು, ಸುಮಾರು ೨೦೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಆದಿಕವಿ ಪಂಪನಿAದ ರಾಷ್ಟçಕವಿ ಕುವೆಂಪು ಹಾಗೂ ಪ್ರಸ್ತುತ ಕವಿ ಚಂಪಾನವರೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಜನ ಮಹನೀಯರು ಸಾಹಿತ್ಯ ಶ್ರೀಮಂತಿಕೆಗಾಗಿ ದುಡಿದಿದ್ದಾರೆ ಎಂದರು.
ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ೧೦೦೦ ಜನ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವಕ್ಕಾಗಿ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆ, ಕಾಲೇಜು, ತರಬೇತಿ ಕೇಂದ್ರ, ಸ್ನಾತಕೊತ್ತರ ಮಹಾವಿದ್ಯಾಲಯ, ಸಹಕಾರಿ ಮತ್ತು ರಾಷ್ಟಿçಕೃತ ಬ್ಯಾಂಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳಿಗೂ, ವಿದ್ಯಾರ್ಥಿಗಳಿಗೂ ಕನ್ನಡ ಆಸಕ್ತರೆಲ್ಲರಿಗೂ ಸದಸ್ಯರನ್ನಾಗಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ರಂಗAಪೇಟ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ, ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತ ಶಿವಶರಣಯ್ಯ ಬಳ್ಳುಂಡಗಿಮಠ ಅವರನ್ನು ಸಗರನಾಡು ಸೇವಾ ಪ್ರತಿಷ್ಠಾನವತಿಯಿಂದ ಸನ್ಮಾನಿಸಲಾಯಿತು. ಶಹಾಪುರ ಕಲಾವಿದ ಸುನೀಲ ಕುಮಾರ ಸಿರಣ ಅವರಿಂದ ಹಾಸ್ಯ, ರಸಮಂಜರಿ ಕಾರ್ಯಕ್ರಮ ನಡೆಯಿತು.
ಶೃತಿ ಹಿರೇಮಠ ನಿರೂಪಿಸಿದರು. ಬಲಭಿಮ ಪಾಟೀಲ ಸ್ವಾಗತಿಸಿದರು. ಹಣಮಂತ್ರಯ ದೇವತ್ಕಲ್ ವಂದಿಸಿದರು. ಕಾಲೇಜಿನ ಪ್ರಾಚಾರ್ಯ ವೀರೇಶ ಹಳಿಮನಿ, ಮುಖಂಡರಾದ ಶಿವಶರಣಪ್ಪ ಹೆಡಿಗಿನಾಳ, ಜಗದೀಶ ಮಾನು, ವೆಂಕಟೇಶ ದೇವಿಕೇರಾ, ಶ್ರೀಕಾಂತ ರತ್ತಾಳ, ರುದ್ರಪ್ಪ ಕೆಂಭಾವಿ, ಚಂದ್ರಶೇಖರ ಕಕ್ಕೇರಾ, ನವೀನ ಜುಜಾರೆ, ಶರಣು ಸಜ್ಜನ್ ಸೇರಿದಂತೆ ಇತರರಿದ್ದರು.