ದಿ.ಬಾಪುಗೌಡರ ೩೫ನೇ ಪುಣ್ಯಸ್ಮರಣೆ.
ಜನಸೇವೆ,ಅಭಿವೃದ್ಧಿ, ಸಾಮಾಜಿಕ ನ್ಯಾಯದಡಿ ಸಾರ್ಥಕ ಕಾರ್ಯ ಮಾಡಿದ್ದ ಬಾಪುಗೌಡರು:
ಕ್ರಾಂತಿ ವಾಣಿ ಶಹಾಪುರ.
ಕಲ್ಯಾಣ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ದಿ.ಬಾಪುಗೌಡ ದರ್ಶನಾಪುರ. ರಾಜಕಾರಣಿಗಳಲ್ಲಿ ಅಸಾಮಾನ್ಯರಾಗಿದ್ದರು, ದೂರದೃಷ್ಠಿ, ಮತ್ತು ಜನಪರ ಕಾಳಜಿಯಿಂದ ಎಲ್ಲ ವರ್ಗದವರ ಪ್ರೀತಿ ವಿಶ್ವಾಸ ಗಳಿಸಿದ ಅವರು, ಅಂತ್ಕರುಣವುಳ್ಳ ನಾಯಕ ಎಂದು ಎಂದು ಹಿರಿಯ ಧುರೀಣ ಎಮ್‌ಎಲ್‌ಸಿ ತಿಪ್ಪಣ್ಣ ಕಮಕನೂರು ಅಭಿಪ್ರಾಯಪಟ್ಟರು.
ದಿ.ಬಾಪುಗೌಡ ದರ್ಶನಾಪುರ ಅವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರೀ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ, ಶೋಷಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದವರು. ಆ ವರ್ಗಗಳಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾದ ಸದಾ ಜನಪರ ಕಾಳಜಿಯುಳ್ಳ ಜನನಾಯಕರಾಗಿದ್ದರು ದಿ.ಬಾಪುಗೌಡರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂಲಕ ನೀರಾವರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ದಿ.ಬಾಪುಗೌಡರದು ಅಪಾರ ಕೊಡುಗೆ ಇದೆ. ಅದಕ್ಕೆ ಮೊದಲಿನಿಂದಲೂ ದೂರದೃಷ್ಠಿ ಹೊಂದಿದ್ದ ದಿ.ಬಾಪುಗೌಡರ ಕೈಚಳಕವಿದೆ.ಅವರ ಪುತ್ರ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಹಿರಿಯ ಮಾರ್ಗದಲ್ಲಿ ಮುನ್ನಡೆದು ಸರ್ವರ ಆಶೋತ್ತರಗಳಿಗೆ ಸ್ಪಂಧಿಸುತ್ತಾ ರಾಜ್ಯಮಟ್ಟದ ಉತ್ತಮ ನಾಯಕರಾಗಿದ್ದಾರೆ ಎಂದರು.
ವಲಯಸಾಹಿತ್ಯ ಪರಿಷತ್ ಅಧ್ಯಕ್ಷ ಹಿರಿಯ ಸಹಕಾರಿ ಧುರೀಣ ಲಿಂಗಣ್ಣ ಪಡಶೆಟ್ಟಿ ಮಾತನಾಡಿ, ದಿ. ಬಾಪುಗೌಡ ದರ್ಶನಾಪುರ್ರವರು ತಮ್ಮ ಜೀವಿತ ಅವಧಿಯಲ್ಲಿ ಜಾತ್ಯಾತೀತ, ಧರ್ಮಾತೀತವಾಗಿ ನಡೆದುಕೊಂಡು ಜನಮಾನಸದಲ್ಲಿ ದೈವತ್ವ ಪಡೆದವರಾಗಿದ್ದಾರೆ.
ಬಾಪುಗೌಡರು ಶಿಕ್ಷಣವೇ ಮೂಲಮಂತ್ರವೆAಬ ಚಿಂತನೆಯಿAದ ಮಹಿಳಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅರಿವಿನ ಬೆಳಕು ನೀಡಿದ ಪುಣ್ಯ ಪುರುಷರಾಗಿದ್ದರು, ಆದರ್ಶ ರಾಜಕಾರಣಿಯಾಗಿ, ಶಿಕ್ಷಣ ತಜ್ಞರಾಗಿ, ಸರ್ವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದ್ದಾರೆ ಎಂದರು.
ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕಾಗಿ ವಿಶೇಷವಾಗಿ ಸನ್ಮಾನಿಸಲಾಯಿತು,
ಅದಕ್ಕಿಂತ ಪೂರ್ವದಲ್ಲಿ ಭೀಗುಡಿ ವೃತ್ತದಲ್ಲಿರುವ ದಿ.ಬಾಪುಗೌಡ ಪುತ್ಥಳಿಗೆ ದರ್ಶನಾಪುರ ಅಭಿಮಾನಿಗಳು, ಹಿತೈಶಿಗಳು ಕಾರ್ಯಕರ್ತರು ಗೌರವಸಮರ್ಪಣೆ ಸಲ್ಲಿಸಿದರು.
ಈ ಸಂದರ್ಭಲ್ಲಿ ಶ್ರೀ ಚರಬಸವೇಶ್ವರ ಸಂಸ್ಥಾನ ಮಠದ ವೇ.ಮೂ.ಬಸವಯ್ಯ ಶರಣರು, ಕೆಂಭಾವಿಯ ಷ.ಬ್ರ.ಚನ್ನಬಸವ ಶಿವಾಚಾರ್ಯರು, ನಗನೂರಿನ ಶ್ರೀ ಶರಣಬಸವೇಶ್ವರÀ ಮಠದ ಪೂಜ್ಯ ಶರಣಪ್ಪ ಶರಣರು, ಹೆಗ್ಗಣದೊಡ್ಡಿಯ ಶ್ರೀಗಳು, ನಾಗನಟಗಿಯ ಶ್ರೀಗಳು, ಹಿರಿಯ ಧುರೀಣ ಶ್ರೀ.ಚ.ಬ.ವಿ.ವ.ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ, ಭೀಮರಡ್ಡಿ ಭೈರಡ್ಡಿ, ಇದ್ದರು, ಕಾರ್ಯಕ್ರಮದಲ್ಲಿ ಶರಣಪ್ಪ ಸಲಾದಪೂರ, ಶಂಕ್ರಣ್ಣ ವಣಿಕ್ಯಾಳ, ಸನ್ನಿಗೌಡ ಪಾಟೀಲ ತುನ್ನೂರು, ಸೋಮಶೇಖರ ಗೋನಾಯಕ, ಮರಿಗೌಡ ಹುಲ್ಕಲ್, ರಾಜಶೇಖರ ಪಾಟೀಲ ವಜ್ಜಲ, ಮಾನಸಿಂಗ್ ಚವ್ಹಾಣ, ಬಸವರಾಜಪ್ಪಗೌಡ ತಂಗಡಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ, ಹಿರಿಯರಾದ ಮಾಣಿಕರೆಡ್ಡಿ ಗೋಗಿ, ವಿನೋದ ಪಾಟೀಲ, ಸೋಮಶೇಖರ, ಬಸವರಾಜಪ್ಪಗೌಡ ವಡಗೇರಾ, ಸಿದ್ದಲಿಂಗಣ್ಣ ಆನೇಗುಂದಿ, ಬಸನಗೌಡ ಸುಬೇದಾರ, ಇಬ್ರಾಹಿಂ ಶಿರವಾಳ, ವಸಂತಕುಮಾರಸುರಪುರ, ಶಿವುಮಹಾಂತ ಚಂದಾಪುರ, ಸಯ್ಯದ ಮುಸ್ತಫಾ ದರ್ಬಾನ, ಸುರೇಶ ಸಜ್ಜನ, ಅಲ್ಲಾಪಟೇಲ, ಮಲ್ಲಣ್ಣ ಉಳಂಡಗೇರಿ, ಬಾಬುರಾವ ಬೂತಾಳಿ, ಸಣ್ಣನಿಂಗಣ್ಣ ನಾಯ್ಕೋಡಿ, ಈರಣ್ಣ ದೇಸಾಯಿ, ಇದ್ದರು.ಹಿರಿಯ ಮುಖಂಡರಾದ ಘೇವರಚಂದ ಜೈನರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಅರುಣಕುಮಾರ ಜೇವರ್ಗಿ ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲ ಶಿವಲಿಂಗಣ್ಣಗೌಡ ಸಾಹು ವಂದಿಸಿದರು, ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ದಿ.ಬಾಪುಗೌಡರ ಅಭಿಮಾನಿಗಳು, ಕಾರ್ಯಕರ್ತರು ಹಿರಿಯ ಕಿರಿಯ ಮುಖಂಡರು, ಶ್ರೀ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಅಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮ ತಂದೆಯವರು ತಮ್ಮ ಜೀವಿತ ಅವಧಿಯಲ್ಲಿ ಗಳಿಸಿದ ಜನಮನ್ನಣೆ ಇಂದು ನನಗೆ ಶ್ರೀರಕ್ಷೆಯಾದೆ. ನಮ್ಮ ತಂದೆಯ ಆಶಯದಂತೆ ಅವರ ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದೇನೆ. ನಮ್ಮ ಕುಟುಂಬದ ಮೇಲೆ ಇಟ್ಟಿರುವ ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಮ್ಮ ಕುಟುಂಬ ಸದಾ ಚಿರಋಣಿ.
ಶರಣಬಸಪ್ಪ ಗೌಡ ದರ್ಶನಾಪೂರ.
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.