ಎರಡನೇ ಬಾರಿಗೆ ಶಹಾಪುರ ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿ ವಸಂತಕುಮಾರ ಸುರಪುರಕರ್ ನೇಮಕ

ಕ್ರಾಂತಿವಾಣಿ ಶಹಪುರ.

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ನಿರ್ದೇಶನದ ಮೇರೆಗೆ ಶಹಪೂರು ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ವಸಂತಕುಮಾರ/ಮಲ್ಲಪ್ಪ ಸುರಪುರಕರ್ ಅವರನ್ನು ನೇಮಕ ಮಾಡಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. ವಸಂತಕುಮಾರ ಅಧ್ಯಕ್ಷರಾಗುತ್ತಿರುವುದು ಇದು ಎರಡನೇ ಬಾರಿಗೆ. ನವೆಂಬರ್ 30, 2020ರಂದು ಮೊದಲ ಬಾರಿಗೆ ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಮಾಣಿಕ ನಿಷ್ಠೆಯಿಂದ ಸೇವೆ ಸಲ್ಲಿಸಿ, ದರ್ಶನಾಪೂರ್ ಕುಟುಂಬದ ವಿಶ್ವಾಸ ಗಳಿಸಿದ್ದರು. ಸಚಿವರ ಕೆಲವೇ ಕೆಲವು ಪರಮಾಪ್ತರಲ್ಲಿ ಇವರು ಒಬ್ಬರಾಗಿ ಗುರ್ತಿಸಿಕೊಂಡಿದ್ದಾರೆ. ವಸಂತ್ ಕುಮಾರ್ ಅವರ ಆಯ್ಕೆಯನ್ನು ಅನೇಕ ಕಾಂಗ್ರೆಸ್ ಮುಖಂಡರು ಅಭಿನಂದಿಸಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ