ಕ್ರಾಂತಿ ವಾಣಿ ಶಹಾಪುರ
ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ವಸತಿ ರಹಿತ ನಿಜವಾದ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಕಲ್ಪಿಸಬೇಕು. ಸಮಾಜಿಕ ನ್ಯಾಯದ ನಿಯಮ ಪಾಲನೆಯಾಗಲಿ. ಪಕ್ಷದ ಮತ್ತು ದರ್ಶನಾಪೂರ ಕುಟುಂಬದ ಘನತೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ನೂತನ ವಾಗಿ ಆಯ್ಕೆಯಾದ ನಗರ ಆಶ್ರಯ ಸಮಿತಿ ಅಧ್ಯಕ್ಷರಿಗೆ ಸಣ್ಣ ಕೈಗಾರಿಕೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ ಕಿವಿಮಾತು ಹೇಳಿದರು.
ತಾಲೂಕಿನ ಭೀ, ಗುಡಿಯಲ್ಲಿ ನಗರ ಆಶ್ರಯ ಸಮಿತಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಸಂತಕುಮಾರ ಸುರಪುರಕರ್ ಅವರಿಗೆ ಸಚಿವ ದರ್ಶನಾಪೂರ ನೇಮಕಾತಿ ಆದೇಶ ನೀಡಿ ಸನ್ಮಾನಿಸಿ ಮಾತನಾಡಿದರು,
ದರ್ಶನಾಪೂರ ಕುಟುಂಬದ ಕೆಲವೇ ಕೆಲವು ಪರಮಾಪ್ತರಲ್ಲಿ ವಸಂತಕುಮಾರ ಒಬ್ಬರು ಈ ಮೊದಲ ಬಾರಿಗೆ ನವೆಂಬರ್ 30 2020 ರಂದು ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾಗ ನಿಷ್ಠೆಯಿಂತ ಕರ್ತವ್ಯ ನಿರ್ವಹಿಸಿದ್ದರು.ತದ ನಿಮಿತ್ತ ಎರಡನೇ ಬಾರಿಯೂ ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮರಿಗೌಡ ಹುಲ್ಕಲ್ ಶ್ರೀಮಾಂತಪ್ಪ ಸಾಹು ಬಸವರಾಜಪ್ಪಗೌಡ ತಂಗಡಗಿ, ವೆಂಕಟೇಶ ಆಲೂರು,ವಿಜಯಕುಮಾರ, ಶಾಂತಪ್ಪ ಕಟ್ಟಿಮನಿ, ರಾಮಣ್ಣ ಸಾದ್ಯಾಪುರ, ರವಿ ಎದುರು ಮನಿ, ಮಲ್ಲೇಶಿ ಮಮದಾಪುರ, ಮಲ್ಲಣ್ಣ ಗೋಗಿ, ಬಸವರಾಜ್ ನಾಯ್ಕಲ್, ಹುಲಗಪ್ಪ ದೊಡ್ಡಮನಿ, ಶಿವಕುಮಾರ್ ದೊಡ್ಮನಿ, ಹೈಯ್ಯಳಪ್ಪ ರಾಕಮಗೆರ, ನಿಂಗಣ್ಣ ರಾಖಮ್ಗೆರ, ಬಸವರಾಜ ಕಣೆಕಲ್, ಭೀಮರಾಯ ನರಬೋಳಿ, ವೀರಭದ್ರ ಕುಂಬಾರ, ಮರೆಪ್ಪ ರತ್ತಾಳ, ಮಾದೇವಪ್ಪ ದೊಡ್ಮನಿ, ಭೀಮರಾಯ ಕಾಂಗ್ರೆಸ್, ಭೀಮರಾಯ ಪೂಜಾರಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.