ಗಿರಿನಾಡಿನಲ್ಲಿ ಗರಿಗೆದರಿದ ಅಕ್ರಮ ಮರಳು ಮಾಫಿಯಾ: ತಡೆಗೆ ಒತ್ತಾಯ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಯಾದಗಿರಿ:  ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ತಾಲೂಕುಗಳಲ್ಲಿ ಹರಿಯುವ ಜನರ ಜೀವನಾಡಿ ನದಿಗಳಲ್ಲಿ ಮರಗಳುಗಾರಿಕೆ ಅತಿ ಹೆಚ್ಚು ಸದ್ದು ಮಾಡುತ್ತಿದ್ದು, ಅಕ್ರಮ ಮರಳುಗಳಕೆ ನಡೆಯುತ್ತಿದ್ದರೂ ಸಂಬಂಧ ಪಟ್ಟಂತಹ ಅಧಿಕಾರಿಗಳು ಕಣ್ಮುಚ್ಚಿಕೊಳ್ಳುತ್ತಿರುವುದಕ್ಕೆ ಜಯ ಕರ್ನಾಟಕ ಸಂಘಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಶಹಾಪುರ ಮತ್ತು ಸುರಪುರ ತಾಲೂಕಿನ ಕೃಷ್ಣಾ ಮತ್ತು ಶಹಾಪುರ ತಾಲೂಕಿನ ಭೀಮಾ ನದಿಗಳಿದ್ದು ಇಲ್ಲಿನ ಜನಕ್ಕೆ ಜೀವನದಿಗಳಾಗಿವೆ. ಇದರಿಂದ ಯಾದಗಿರಿ ಜಿಲ್ಲೆಯು ಸಮೃದ್ಧಿ ಹಾಗೂ ಕೃಷಿ ಚಟುವಟಿಕೆಯ ಜಿಲ್ಲೆಯಾಗಿದೆ. ಈ ನದಿಯಿಂದ ಸರಕಾರ ಆದೇಶದಂತೆ ಮರಳನ್ನು ರಾಜಧನ ಪಾವತಿಸುವವರಿಗೆ ವಿವಿಧ ಮೂಲಭೂತ ಸೌಕರ್ಯಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಮಾರಾಟವಾಗುತ್ತದೆ.

ಮರಳು ಗಣಿಗಾರಿಕೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹಾಗೂ ವಿವಿಧ ಇಲಾಖೆಯ ಸದಸ್ಯರು ಸೇರಿಕೊಂಡ ಒಂದು ತಂಡ ರಚನೆಯಾಗಿರುತ್ತದೆ.
ಆದರೂ ಕೂಡ ಸುಮಾರು ವರ್ಷಗಳಿಂದ ಕೃಷ್ಣಾ ನದಿಯ ಒಡಲನ್ನು ಮರಳು ಮಾಫಿಯಾ ಗ್ಯಾಂಗ್  ಬಗೆಯುತ್ತಿದ್ದರೂ ತಮ್ಮ ಲಾಭದ ಆಸೆಗಾಗಿ ಹಾಗೂ ಮಂತ್ಲಿ ಮಾಡಿಕೊಂಡು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳು ಎಡೆ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ನಿಯಮದಂತೆ ಪ್ರತಿ ಭಾರತ್ ಬೆಂಜ್ ಗೆ 25 ಟನ್ ಮರಳು ಸಾಗಿಸಲು ರಾಯಲ್ಟಿ ಕೊಟ್ಟು ಅನುಮತಿ ನೀಡಲಾಗಿದೆ.  ಹೆಚ್ಚುವರಿಯಾಗಿ ವಾಹನಗಳಿಗೆ ಪಟ್ಟಿಯನ್ನು ಕಟ್ಟಿಸಿ 9 ಟನ್ ಹೆಚ್ಚುವರಿಯಾಗಿ ಓವರ್ ಲೋಡ್ ತುಂಬಿ ರಾಜಾರೋಷವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ.   ಸುರಪುರ ತಾಲೂಕಿನ ಸೂಗರನಲ್ಲಿರುವ ಚೆಕ್ ಪೋಸ್ಟ್ ಹಾಗೂ ಶಹಾಪುರ ತಾಲೂಕಿನ ಹತ್ತಿಗೂಡುರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್ ಇದ್ದರೂ ಕೂಡ ಅಧಿಕಾರಿಗಳು ಕಣ್ಣಿಗೆ ಕಂಡರು ಕಾಣದಂತೆ ಇರುವ ಅಧಿಕಾರಿಗಳ ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ ಎಂದು ವ್ಯಕ್ತಪಡಿಸಿದರು.

ಒಂದು ರಾಯಲ್ಟಿ ಮೇಲೆ 2-3 ಲೋಡುಗಳನ್ನು ಸಾಗಿಸುವ ಭರದಲ್ಲಿ, ವಾಹನಗಳನ್ನು ಚಾಲಕರು ಅತಿ ವೇಗವಾಗಿ ಚಲಿಸುತ್ತಾರೆ. ಇದರಿಂದ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಮುಸ್ಟಳ್ಳಿ, ಹೆಮ್ಮಡಗಿ, ಅಡ್ಡೋಡಗಿ, ಚೌಡೇಶ್ವರ ಹಾಳ, ಶೆಳ್ಳಿಗಿ, ಈ ಐದು ಗ್ರಾಮಗಳಲ್ಲಿ ಯಾವುದೇ ಟೆಂಡರ್ ಇಲ್ಲದೆ 15-20 ಇಟಾಚಿಗಳ ಮೂಲಕ ಅಕ್ರಮ ಮರುಳ ಗಣಿಗಾರಿಕೆ ಮಾಡಿ ಮರಳು ಸಾಗಿಸುತ್ತಿದ್ದಾರೆ ಎಂದು ದೂರಿದರು.

ಅಲ್ಲದೆ ಶಹಾಪುರ ತಾಲೂಕಿನ ಲ್ಲು ಸಹ ಸಂಬಂಧಪಟ್ಟ ಅಧಿಕಾರಿಗಳ ಕುಮಕ್ಕಿನಿಂದ ಯಕ್ಷಿಂತಿ, ಗೌಡೂರು, ಇನ್ನು ಮುಂತಾದ ಡಕ್ಕಗಳಿಂದ ಟ್ರ್ಯಾಕ್ಟರ್, ಟಿಪ್ಪರ್ (1ಬ್ರಾಸ್ ) ಅಕ್ರಮ ಮರಳು ಸರಬರಾಜು ಮಾಡುತ್ತಾರೆ.
ಅವರಿಗೆ ಕೇಳಿದರೆ ಒಂದು ತಿಂಗಳ ಮಟ್ಟಿಗೆ ನಾವು ದುಡ್ಡು ಕೊಟ್ಟಿದ್ದೇವೆ ಎಂದು ರಾಜಾರೋಷವಾಗಿ ಮರಳನ್ನು ಸರಬರಾಜು ಮಾಡುತ್ತಾರೆ. ಇದರಿಂದ ಹಳ್ಳಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಣ್ಣ ಬ್ರಿಜ್ ಗಳು, ಹೊಡೆದು ನಿಂತಿವೆ ಇದರಿಂದ ಸರಕಾರಿ ಬಸ್ಸುಗಳು, ಆಟೋಗಳು, ರೈತರ ಗಾಡಿಗಳು, ತಿರುಗಾಡಲು ಆಗದೇ ಇರುವಂತಹ ಪರಿಸ್ಥಿತಿ ಎದುರಾಗಿದೆ.

ಎಂದು ಜಯ ಕರ್ನಾಟಕ ಸಂಘಟನೆ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಅಶೋಕ್ ಡಿಚ್ಚಿ ತಳವಾರ, ಶಹಾಪುರ ತಾಲೂಕು ಅಧ್ಯಕ್ಷ ಸೋಪಣ್ಣ ಸಗರ ಹಾಗೂ ಶಹಾಪುರ ತಾಲೂಕು ಕಾರ್ಯಾಧ್ಯಕ್ಷ ವೆಂಕಟೇಶ ನಾಯಕ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದರು.

ಅಕ್ರಮ ಮರಳು ಸಾಗಾಟ ಹೀಗೆ ಮುಂದುವರೆದರೆ ಕೃಷ್ಣ ನದಿಯ ಒಡಲು ಬರಿದಾಗಿ ಮುಂದಿನ ಪೀಳಿಗೆಗೆ ಮರಳೆ ಇಲ್ಲದಂತಾಗುತ್ತದೆ ಇದನ್ನು ತಪ್ಪಿಸಲು ತಾಲೂಕಿನ ಅನೇಕ ಸಂಘಟನೆಗಳ ಮನವಿ, ದಿನಪತ್ರಿಕೆಗಳಲ್ಲಿ ವರದಿ, ಮಾಧ್ಯಮಗಳಲ್ಲಿ ವರದಿ ಯಾದರು ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ಸಾಗಾಟ ಮಾಡುವ ಮಾಲೀಕರ ಜೊತೆ ಶ್ಯಾಮಿಲು ಆಗಿರುವ ಶಂಕೆಯನ್ನು ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಆದರೂ ಕೂಡ ಅಕ್ರಮ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದೆ ಹೋದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಹೋರಾಟದ ಎಚ್ಚರಿಕೆಯನ್ನು ನೀಡಿದರು.

ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಎಷ್ಟೇ ಮನವಿ ಮಾಡಿದರು, ಒಂದು ವಾರದ ಮಟ್ಟಿಗೆ ಅಧಿಕಾರಿಗಳು ತಡೆಯುತ್ತಾರೆ. ಮತ್ತೆ ಅದೇ ಹಳೆ ಚಾಳಿಯನ್ನು ಮುಂದುದುವರೆಸಿಕೊಂಡು ಹೋಗುತ್ತಾರೆ.

ಸುರಪುರ ಮತ್ತು ಶಹಾಪುರ ನಗರದ ಹೃದಯ ಭಾಗದ ಮೂಲಕ ಹಾಡು ಹಗಲೇ ರಾಜಾರೋಷವಾಗಿ ಮರಳು ವಾಹನಗಳು ಓವರ್ ಲೋಡ್ ಮರಳನ್ನು ತುಂಬಿಕೊಂಡ ಟಿಪ್ಪರ್ ಗಳ ಮೇಲೆ ತಾಟಪಲ್ ಕಟ್ಟಲಾರದೆ ಹೋಗುತ್ತಿರುವುದರಿಂದ ದ್ವಿಚಕ್ರ ವಾಹನಗಳ ಸವಾರರ ಕಣ್ಣುಗಳಲ್ಲಿ ಮರಳು ಬಿದ್ದು ಅಪಘಾತಗಳು ಕೂಡಾ ಸಂಭವಿಸಿದ ಹಲವಾರು ಉದಾಹರಣೆಗಳು ಇವೆ ಆದರೂ ಕೂಡಾ ಸಂಬಂಧಪಟ್ಟ ಅಧಿಕಾರಿಗಳ ಜಾಣ ಮೌನ / ಕಂಡು ಕಾಣದಂತೆ ಕುಳಿತ್ತುಕೊಳ್ಳುವುದು ಯಾಕೆ ಎಂಬುದು ತಿಳಿಯುತ್ತಿಲ್ಲ, ಇದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ಎಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಗಳ ವಿರುಧ್ಧ ಗಂಭೀರವಾದ ಆರೋಪವನ್ನು ಮಾಡಿದರು.

ಬಸವ ರತ್ತಾಳ, ಮಹೇಶ ಶಹಾಪುರ, ಹಣಮಂತ್ರಾಯ ವನದುರ್ಗ, ವೆಂಕಟೇಶ ನಾಯಕ ಆಲ್ದಾಳ, ಬಸವರಾಜ ವನದುರ್ಗ, ಗೋವಿಂದ ನಾಯಕ ಆಲ್ದಾಳ ಇತರರು ಉಪಸ್ಥಿತರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ