ಮೀಸಲಾತಿ ಹೆಚ್ಚಳ ಸಮುದಾಯಕ್ಕೆ ಅನುಕೂಲವಾಗಿದೆ. ರಾಜನಹಳ್ಳಿ ವಾಲ್ಮೀಕಿಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಮತ.
ಕ್ರಾಂತಿ ವಾಣಿ ಶಹಾಪುರ:
ಮಹರ್ಷಿ ವಾಲ್ಮೀಕಿ ಸರ್ವ ಜನಾಂಗಕ್ಕೂ ಆದರ್ಶ ಮಹಿಮರಾಗಿದ್ದಾರೆ. ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ 2024 ಫೆ.8 ಹಾಗೂ 9 ರಂದು ಎರಡು ದಿನಗಳ ಕಾಲ ನಡೆಯುವ ಶ್ರೀ ವಾಲ್ಮೀಕಿ ಜಾತ್ರಾ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಜಾತ್ರಾ ಮಹೋತ್ಸವ ಕಾರ್ಯಕ್ಕೆ ಸಮುದಾಯದ ಜನ ತಮ್ಮ ತನು ಮನ ಧನ ನೀಡಿ ಜಾತ್ರೆ ಯಶಸ್ವಿಗೆ ಸಹಕರಿಸಿ ಎಂದು ಹೇಳಿದರು.
ನಗರದ ಅತಿಥಿಗೃಹದಲ್ಲಿ ಬುಧವಾರ ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವ ವಾಲ್ಮೀಕಿ ಜಾಗೃತಿ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ವಾಲ್ಮೀಕಿ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 60ಲಕ್ಷ ಜನಸಂಖ್ಯೆ ಇರುವ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಶೇ3ರಿಂದ7 ಹೆಚ್ಚಳದಿಂದ ಪರಿಶಿಷ್ಟ ಪಂಗಡದ ಸಮುದಾಯದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ. ಮೀಸಲಾತಿಯಿಂದ ಉನ್ನತ ಶಿಕ್ಷಣ ಪಡೆಯಲು ಹಾಗೂ ಬಡ್ತಿಗೆ ನೆರವಾಗಿದೆ. ನಾವೆಲ್ಲರೂ ಇನ್ನೂ ಸಂಘಟಿತರಾಗಬೇಕು. ನಕಲಿ ಜಾತಿ ಪ್ರಮಾಣ ಪತ್ರದಿಂದ ನಮ್ಮ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತಿದ್ದು ಇದರ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಅಲ್ಲದೆ ಮಠದ ಮೂಲಕ ಕಾನೂನು ಹೋರಾಟ ಸಹ ನಡೆಸಲಾಗಿದೆ. ನಕಲಿ ಜಾತಿ ಪ್ರಮಾಣ ಪತ್ರ ನೀಡುವುದು ಮುಂದುವರೆದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಸೇವಾ ಸಮಿತಿಯ ಪದಾಧಿಕಾರಿಗಳನ್ನು ನೇಮಿಸಲಾಯಿತು. ತಿರುಪತಿ ಯಕ್ಷಿಂತಿ( ಅಧ್ಯಕ್ಷ), ಶರಣಪ್ಪ ಶೆಟ್ಟಿಕೇರಿ, ಹಣಮಂತರಾಯ ಬಿರನೂರ, ಭೀಮಣ್ಣ ಬುದನೂರ, ದೇವೀಂದ್ರ ಗಂಗನಾಳ ನೇಮಿಸಲಾಯಿತು. ಸಭೆಯಲ್ಲಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಕಾರ್ಯದರ್ಶಿ ಹಣಮಂತರಾಯ ಟೋಕಾಪುರ ಹಾಗೂ ಸಮುದಾಯದ ಹಿರಿಯ ಮುಖಂಡರಾದ ಹಣಮಂತರಾಯ ದೊರೆ ದಳಪತಿ, ಡಾ.ಪ್ರಭು ಹುಲಿನಾಯಕ, ಗೌಡಪ್ಪಗೌಡ ಆಲ್ದಾಳ, ಗಂಗಾಧರ ನಾಯಕ, ರವಿಕುಮಾರ ಯಕ್ಷಿಂತಿ, ಸೊಪಣ್ಣ ಸಗರ,ಬಸವರಾಜ ಹವಾಲ್ದಾರ, ಶೇಖರ ದೊರೆ, ಶರಣಪ್ಪ ಪ್ಯಾಟಿ, ಮಲ್ಲಿಕಾರ್ಜುನ ಯಾದಗಿರಿ, ಅಮರೇಶ ಇಟಗಿ, ಶ್ರೀನಿವಾಸ ಯಕ್ಷಿಂತಿ, ನಾಗರಾಜ ಇಬ್ರಾಹಿಂಪೂರ, ರಾಘವೇಂದ್ರ ಯಕ್ಷಿಂತಿ, ಯಲ್ಲಾಲಿಂಗ ಯಕ್ಷಿಂತಿ ಇದ್ದರು.