28ರಂದು ಶೋಷಿತರ ಜಾಗೃತಿ ದಿನಾಚರಣೆ: ನಿಂಗಣ್ಣ ಗೋನಾಲ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ಪ್ರೊ.ಬಿ.ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಭಾರತ ಸಂವಿಧಾನ ದಿನ ಅಂಗವಾಗಿ ಶೋಷಿತರ ಜಾಗೃತಿ ದಿನವನ್ನು ನವೆಂಬರ್ ೨೮ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಗರುಡಾದ್ರಿ ಕಲ್ಯಾಣ ಮಂದಿರದಲ್ಲಿ ಆಚರಿಸಲಾಗುವುದು. ಎಂದು ಕದಸಂಸ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುವಾದಿ ಮತ್ತು ಜಾತಿವಾದಿ ಸರ್ಕಾರಗಳು ಸಂವಿಧಾನದ ಆಶಯಗಳನ್ನು ನಿರ್ಭಯವಾಗಿ ಗಾಳಿಗೆ ತೂರಿವೆ. ಶೋಷಿತ ವರ್ಗಗಳಿಗೆ ಸಂವಿಧಾನದ ಮಹೋನ್ನತ ಆಶಯಗಳು, ಹಕ್ಕು, ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಯಾದಗಿರಿ ಜಿಲ್ಲಾ ಸಮಿತಿಯು ನ.೨೮. ಸಂವಿಧಾನ ದಿನ, ಶೋಷಿತರ ಜಾಗೃತಿ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಗಾಂಧಿವೃತ್ತದಿAದ ಕಾರ್ಯಕ್ರಮ ಸ್ಥಳದವರಗೆ ಬೈಕ್ ರ‍್ಯಾಲಿ ನಡೆಯಲಿದೆ. ದಲಿತರು, ಹಿಂದುಳಿದವರು, ಧಾರ್ಮಿಕ ಅಲ್ಪಸಂಖ್ಯಾತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರೂ ಭಾಗಹಿಸಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸುವರು. ಸುರಪುರ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪನಾಯಕ ಬಹದ್ದೂರ್, ಶಾಸಕ ರಾಜಾ ವೆಂಕಟಪ್ಪ ನಾಯಕ ಅತಿಥಿಗಳಾಗಿ ಪಾಲ್ಗೊಳ್ಳುವರು. ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸುವರು. ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ರಾಜಾ ಮುಕುಂದ ನಾಯಕ, ಟಿಎಚ್‌ಒ ಡಾ. ಆರ್.ವಿ. ನಾಯಕ, ಧರ್ಮಣ್ಣ ಡಿ.ಎಂ, ನಂದಕುಮಾರ್ ಬಾಂಬೇಕರ್ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಎಂ.ಓಕಳಿ, ಸಂಗಣ್ಣ ಗೋನಾಲ, ಎಚ್.ಆರ್. ಬಡಿಗೇರಾ, ಧರ್ಮಣ್ಣ ಹೊಸಮನಿ, ರಮೇಶ ಪೂಜಾರಿ, ಹಣಮಂತ ದೊಡ್ಡಮನಿ, ಅನಿಲಕುಮಾರ ಕಟ್ಟಿಮನಿ, ಬಸವರಾಜ ಮುಷ್ಠಳ್ಳಿ, ಮಾನಪ್ಪ ಶೆಳ್ಳಗಿ, ಚಂದ್ರು ಪತ್ತೇದಾರ, ಸಾಯಬಣ್ಣ ಎಂಟಮನೆ, ಚಂದ್ರು ದೀವಳಗುಡ್ಡ, ಹುಲಗಪ್ಪ ಶೆಳ್ಳಗಿ, ಭೀಮಣ್ಣ ಅಡ್ಡೊಡಗಿ ಸೇರಿದಂತೆ ಇತರರಿದ್ದರು.

ಸುರಪುರ: ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕದಸಂಸ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಮಾತನಾಡಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ