ಮಧ್ಯಪ್ರದೇಶ ಚುನಾವಣೆ 2023 ನಾ ಕಂಡಂತೆ..

ಲೇಖನ : ಶಿಕ್ಷಕ ಎಚ್.ರಾಠೋಡ್
ಕ್ರಾಂತಿವಾಣಿ ವಾರ್ತೆ ಸುರಪುರ
ಚುನಾವಣೆ ಬಂದೊ ಬಸ್ತ ಮಧ್ಯೆ ಪ್ರದೇಶ ಪ್ರಯಾಣ
ದಿ ೧೨/೧೧/೨೦೨೩ರಂದು ಸುರಪುರದಿ ನಿರ್ಗಮನ
ದಿ ೧೩/೧೧ ೨೦೨೩ ವರಗೆ ಯಾದ್ಗಿರಲ್ಲಿ ಕಾಲಹರಣ
ಅಂದು ೧೧.೧೫ಕ್ಕೆ ಮದ್ಯಾಹ್ನ ಹೊರಟಿತು ಪ್ರಯಾಣ.

೧೫,ರ ಬೆಳಿಗ್ಗೆ ೨ .೧೫ ಕ್ಕೆ ಸೀಹೂರ ತಲುಪಿತು ರೈಲು
೩.೩೦ರವರೆಗೆ ಹಾಗೆ ಹೀಗೆ ಇಂತ್ರೀಸ್ ಅಂತಲೆ ರೀಲ
ಕೊನೆಗೆ ಅಂದರು ಆಗಬೇಕೆಂದರು ಐದುಐದರಸಾಲ
ಬಸ್ಸು ಹತ್ತಲು ಹೊರಟೆವು ಒಬ್ಬರಿಂದೊಬ್ಬರು ಸಾಲ.

೪ ಗಂಟೆಗೆ ರಾಠೋಡ ಕಲ್ಯಾಣ ಮಂಟಪದಿ ವಾಸ್ತವ್ಯ
ಬೆಳಿಗ್ಗೆ ದಂತ ಮನ್ಜನ ಸ್ನಾನ ಚಹ ಗೆಳೆಯರಬಾಂದವ್ಯ
ಕುಬೇರ ಧಾಮ ಭೂತೇಶ್ವರ ತಿರುಗಿ ಮತ್ತಲ್ಲೆ ವಾಸ್ತವ್ಯ
ಸೀಹೋರ ಜಿಲ್ಲೆಯ ವಿವಿದ ತಾಲೂಕುಗಳಲ್ಲಿ ಕರ್ತವ್ಯ.

೧೬/೧೧/೨೦೨೩ ಬೆಳಿಗ್ಗೆ ಆರು ಗಂಟೆ ಕರ್ತವ್ಯಕ್ಕೆ ಬದ್ದ
ಸಮವಸ್ತ್ರ ಸರಂಜಾಮಿನೊಂದಿಗೆ ಸರ್ವತ್ರ ಸದಾ ಸಿದ್ಧ
ಯಾವ ಎಲ್ಲಿಯೂ ನಡೆಯಲಿಲ್ಲ ಮಾತಿನಲಿ ವಾಗ್ಯುದ್ಧ
ಏನೆ ಆಗಲಿ ಕರ್ತವ್ಯದಲಿ ನಮ್ಮವರು ಸದಾ ಕ್ರಮಬದ್ಧ

ಅಸ್ತವ್ಯಸ್ತ ಊಟದ ವ್ಯವಸ್ಥೆ ಆದರು ಕಾರ್ಯಭಾರ
ನಮ್ಮನ್ನೆಲ್ಲ ಹೊತ್ತು ನಡೆದನು ಸ್ಥಳೀಯ ಬಸ್ಸುಸವಾರ
ಅಲ್ಲಲ್ಲಿ ಅಪರೂಪಕೆ ಕಾಣಸಿಗುವವು ಗುಡ್ಡ ಗಂವ್ವಾರ
ಕೇಳಬೇಕು ಮನತುಂಬಿ ಶ್ರೀ ರಾಮನ ನಾಮ ವಿಸ್ತಾರ.

ಮೃಧು ಭಾಷೆ ಮನಕಾನಂದ ಹಿಂದಿಯದೇ ಪಾರಮ್ಯ
ಮನತುಂಬಿ ಮಾಡುವರು ಶ್ರೀ ರಾಮ ಪ್ರೇಮ ಅದಮ್ಯ
ಹಿರಿಯರ ನಿಂದನೆ ಅಪಮಾನ ಇಲ್ಲಿ ಅತ್ಯಂತ ಅಕ್ಷಮ್ಯ
ಭಾವ ಭಕ್ತಿಯ ಪರವಶತೆ ನಿಜವಾಗಲು ಇಲ್ಲಿ ಅಗಮ್ಯ.

ಸನಾತನ ಪರಂಪರೆ ತಲೆಮೇಲೆ ಸೆರಗಿಲ್ಲದ ನಾರಿಕಾಣೆ
ಬದಲಾವಣೆ ಆಗಿದೆ ಆದರೆ ಅದು ಕೇವಲ ನಾಲ್ಕಾಣೆ
ಗೋದಿಯ ಪರಾಕ್ರಮ ಜಿಲೇಬಿ ಅವಲಕ್ಕಿ ವಗ್ಗರಾಣೆ
ಜೋಳದ ರೊಟ್ಟಿ ಹುಡುಕಿದರು ಸಿಗದು ದೇವರಾಣೆ.

ಒಮ್ಮೊಮ್ಮೆ ಇಲ್ಲಿ ಚಹಾ ಪಾನ ಅತಿಥಿ ಸತ್ಕಾರದ ಆತಿಥ್ಯ
ಅಲ್ಲಲ್ಲಿ ಹೊಟೇಲುಗಳು ಇದ್ದರು ಚಹಾ ಕಾಫಿ ನೇಪತ್ಯ
ಪುಡಾರಿಗಳು ಮತಗಟ್ಟೆಗಳೆಡೆ ಸುಳಿಯರು ಇದು ಸತ್ಯ
ನಿಧಾನಕೆ ಪೂರ್ವದಲ್ಲಿ ಏರಿ ಪಶ್ಚಿಮದಿಳಿದನು ಆದಿತ್ಯ.

ಭಾಷೆ ಬರದ ಊರುಗಳಲ್ಲಿ ಪರಿತಪಿಸಿದರು ನಮ್ಮಜನ
ಹಿಡಿಸಲಿಲ್ಲ ಜವಾರಿ ಮಂದಿಗೆ ಇಲ್ಲಿನ ಪೂರಿ ಭೋಜನ
ಗಡ ಗಡನೆ ನಡುಗಿಸುವ ಚಳಿಯಲ್ಲಿ ತಣ್ಣೀರಿನ ಮಜ್ಜನ
ತಾವೇ ಸರತಿ ಸಾಲಿನಲಿ ಬಂದು ಮತ ಹಾಕುವ ಸಜ್ಜನ.

೧೭/೧೧/೨೦೨೩ ಬೆಳ್ಳಂಬೆಳಗ್ಗೆ ೭ಕ್ಕೆ ಮತದಾನವು
ಈಗ ಮತದಾನದ ಕಾವು ಏರತೊಡಗಿತು ನಿಧಾನವು
ದುಡಿಯುವವರಿಗೂ ಸಹ ಮತದಾನವೇ ಪ್ರಧಾನವು
ಬಲಗೈ ತೋರು ಬೆರಳಿಗೆ ಬಿತ್ತು ಕರುನಾಡ ಖೂನವು.

ಮತದಾರಲ್ಲಿ ಉತ್ಸಾಹವಿದೆ ಉಪಟಳವು ನಾ ಕಾಣಿ
ಮೃದುವಾಣಿ ಅರವಿಂದ ಪಾಣಿ ಅದೆಂತಹ ಹಣಾಹಣಿ
ಮಕರಂದ ಹೀರುವಂತೆ ಮಧುಕರ ಮಿತ್ರ ಜಮಾವಣಿ
ಮನಸಿನಲ್ಲಿ ಮನೆಕಟ್ಟಿರುವ ಪ್ರಬುದ್ಧತೆಯ ಜನವಾಣಿ.

ವವಾವಿವಿ ಉಚ್ಚಾರಣೆ ಬಬಾಬಿಬಿ ಆದದ್ದು ತಿಳಿಲಿಲ್ಲ
ಬೆಳಗಿನ ಉತ್ಸಾಹ ಸಂಜೆಯವರೆಗೂ ಉಳಿಯಲಿಲ್ಲ
ಭಾಗ್ಯದ ಬಾಗಿಲು ಯಾರಿಗೆ ಎಂಬುದನು ಹೇಳಲಿಲ್ಲ
ಕೆಲವರ ಗೆಳೆತನ ಸಾಧಿಸಲು ಸಮಯ ಹಿಡಿಯಲಿಲ್ಲ.

ಡಾ ರಾಜೇಶ ಕುಮಾರ ರವರ ಆತಿಥ್ಯ ಸಂತಸ ತಂತು
ಅವರ ಮನೆಯಿಂದಲೆ ಎರಡೊತ್ತು ಪ್ರಸಾದ ಬಂತು
ಮಧ್ಯ ಪ್ರದೇಶ ಸಮರ ಮುಗಿಯಿತು ಅಂತು ಇಂತು
ಇನ್ನೂ ನೇತಾರರು ದಿನಗಳನು ಎಣಿಸುವರು ಕುಂತು.

ಯಾವ ತಲೆ ಉರುಳುವುದೊ ಮತದಾರನ ದಾಳಕ್ಕೆ
ಯಾರು ಬಿದ್ದಿಹರೇನು ಗೊತ್ತು ಬೇಟೆಗಾರನ ಗಾಳಕ್ಕೆ
ಕಾದು ನೋಡೋಣ ಹೇಗೆ ಕುಣಿಯುವರು ತಾಳಕ್ಕೆ
ಮತಯಂತ್ರಗಳು ಮರಳಿದವಲ್ಲ ಭದ್ರತಾ ಸ್ಥಳಕ್ಕೆ

ಹಾಯ ಬಾಯ ಹೇಳಿ ಹೊರಟೇವು ಜಿಲ್ಲಾ ಕೇಂದ್ರಕ್ಕೆ
ನಾವು ಮರಳಿದೆವು ನಮ್ಮಯ ಆ ವಾಸ್ತವ್ಯದ ಸ್ಥಳಕ್ಕೆ
ಅನಿವಾರ್ಯವು ಪೂರಿ ಭಾಜಿ ಹಾಕಿದೆವು ಉದರಕ್ಕೆ
ದಣಿದ ದೇಹಗಳು ನಿಧಾನನಿದ್ರೆಗೆ ಒರಗಿದವು ನೆಲಕ್ಕೆ.

18/೧೧/೨೦೨೪ ರ ಬೆಳಗು ಲಗುಬಗೆಯಲ್ಲಿ ಸ್ನಾನ
ಉಜ್ಜಯಿನಿ ಕಾಲಕಾಲೇಶ್ವರನ ದರ್ಶನಕೆ ಪ್ರಯಾಣ
ಮಧ್ಯ ಮಧ್ಯ ಅಲ್ಲಲ್ಲಿ ಹಸಿವು ತೃಷೆಗೆ ಚಹಾ ಪಾನ
ಸರಿಯಾಗಿ ೧೧-೫೦ಕ್ಕೆ ಮಹಾಕಾಲೇಶ್ವರನ ದರ್ಶನ.

ಸಿದ್ದಿ ಮಾತಾ ದರ್ಶನದೊಂದಿಗೆ ಆನಂದಿಸಿದ ಮನ
ದಾರಿಯಲಿ ವಿಕ್ರಮಾದಿತ್ಯ ಸ್ಥಾಪಿತ ಶನಿ ದೇವಸ್ಥಾನ
ಕೊಂಡರು ಕುಂಕುಮ ರುದ್ರಾಕ್ಷಿ ಬೇಕಾದ ಸಾಮಾನ
ಯಾವುದು ಅಸಲಿ ಯಾವುದು ನಕಲಿ ಈ ಜಮಾನ

ಸಿಹಿ ಪದಾರ್ಥಗಳಿಗೆ ಹೇಳಿ ಮಾಡಿಸಿದ ಪ್ರದೇಶಗಳು
ಜೀಲೇಬಿ ಸಮೋಸ ಮೆಲ್ಲುತ್ತಾ ತಿರುಗಿದ ದೇಹಗಳು
ಸಿನೇಮಾದ ನೋಟ ಹಾಡು ಮತ್ತೆ ಕುಣಿದಾಟಗಳು
ಕಾಯಕ ತೀರೆ ಊರಿನಡೆ ನೆಟ್ಟ ಎಲ್ಲರ ನೋಟಗಳು.

ನಿಗದಿತ ರೈಲು ಸಮಯಕ್ಕೆ ಸರಿಯಾಗಿ ಬಾರದಾದವು
ಇಲ್ಲಿ ಬೇಕು ಬೇಡದ ವಸ್ತುಗಳು ಎಲ್ಲಖರಿದಿಯಾದವು
ಖಾಲಿಯಾದ ಮನೆಯ ಚೀಲಗಳೆಲ್ಲ ಭರ್ತಿಯಾದವು
ನಿಧ ನಿಧಾನವಾಗಿ ಜೇಬುಗಳೆಲ್ಲವು ಖಾಲಿಯಾದವು.

ಬ್ಯಾಗುಗಳು ಬೂಟುಗಳು ಚಳಿ ಅಂಗಿಗಳು ತರೆವಾರಿ
ಮನೆಯಜಮಾನಿರಿಗೆ ಖರಿದಿಯಾದವು ಹೊಸ ಸೀರಿ
ನವನವಿನತರ ಐಟಂಗಳು ಬ್ಯಾಗು ಸೇರಿದವು ತೂರಿ
ಬೆಲೆ ಕಡಿಮೆಯೋ ಏನೋ ಖರಿದಿಯಾದವು ಸಪಾರಿ

ಇದರ ಮಧ್ಯ ಭಾರತ ವಿಶ್ವ ಕಪ್ ಸೋತ ಬೇಸರವು
ಏನೋ ಕಳೆದುಕೊಂಡಂತಹ ಕಳೆಗುಂದಿದ ವದನವು
ಅಧಿಕಾರಿಗಳು ಹುಡುಕುತಿಹ ಮುಂದಿನ ವಿಧಾನವು
ನಮ್ಮ ಸುರಕ್ಷಿತ ಊರು ತಲುಪಿಸುವುದು ಪ್ರಧಾನವು.

೧೯,೨೦,೨೧ ದಿನಾಂಕಗಳು ಸೀಹೂರನಲ್ಲೆ ಅಲೆದಾಟ
ಕಾಲಕಾಲಕ್ಕೆ ಬರುತ್ತಿದೆ ಮಧ್ಯ ಪ್ರದೇಶ ಸರ್ಕಾರಿಊಟ
ಬೇಸರವು ಕಳೆಯಲು ಸಂತೆ ಪೇಟೆಗಳಲ್ಲೆಲ್ಲ ತಿರುಗಾಟ
ಸಂಜೆ ವಸತಿ ತಾಣದಿ ರಸಮಂಜರಿ ಹಾಡು ಕುಣಿದಾಟ.

ಆಧ್ಯಾತ್ಮಿಕ ಒಲವುಳ್ಳವರು ದೇವಸ್ಥಾನಗಳಿಗೆ ಸುತ್ತಾಟ
೨೧ರಂದು ರಾಜದಾನಿ ಭೂಪಾಲ್ ನತ್ತವು ನಮ್ಮ ಓಟ
ಬಲು ಸಂತಸದಲಿ ಓಡಾಡಿತು ನಮ್ಮ ಗೆಳೆಯರ ಕೂಟ
ಕೊರತೆ ಒಂದೇ ನೋಡಲಾಗಲಿಲ್ಲ ಓಂಕಾರೇಶ್ವರ ಪೀಠ.

ಪವಿತ್ರ ದರ್ಗಾದ ತರಂಗಿಣಿಯಲ್ಲಿ ಜಲ ಸವಾರಿಯು
ಕಿರು ಸಮುದ್ರದಂತಿದೆ ಭೂಪಾಲ್ ದೊಡ್ಡ ಕೆರೆಯು
ಮನಮೋಹಕವಾಗಿ ಪುಟಿದೇಳುವ ನೀರಿನಅಲೆಯು
ರಾಜಾ ಭೋಜನ ಮೂರ್ತಿಹೊತ್ತುನಿಂತಿದೆ ಧರೆಯು.

ಜಲವಿಹಾರ ಮದ್ಯೆ ದರ್ಗದಲ್ಲಿ ಸಮನ್ವಯ ಔದಾರ್ಯ
ಅದ್ಭುತ ರಮಣೀಯ ಬಿರ್ಲಾ ಮಂದಿರದ ಸೌಂದರ್ಯ
ಪಾನ ನಿಷೇಧ ಅಭಿಯಾನದ ಭಾಗವಹಿಸಿ ಸತ್ಕಾರ್ಯ
ಹಾಡಿ ಹೊಗಳುವರು ಇಲ್ಲಿ ರಾಜಾ ಭೋಜನ ಶೌರ್ಯ.

ಬಿರ್ಲಾ ಮಂದಿರದ ವಸ್ತು ಸಂಗ್ರಹಾಲಯ ಕಂಡಿದ್ದು
ಅಲ್ಲಿನ ಭಗ್ನ ಮೂರ್ತಿಗಳು ಕಂಡು ವ್ಯೆಥೆ ಗೊಂಡಿದ್ದು
ಶಿಲಾ ಮೂರ್ತಿಗಳ ಅವಶೇಷಗಳು ಕರುಳು ಹಿಂಡಿದ್ದು
ಅವುಗಳಮುಂದೆ ನಮ್ಮ ಭಾವಚಿತ್ರ ಕ್ಲಿಕ್ಕಿಸಿಕೊಂಡಿದ್ದು.

ಭೂಪಾಲನ ಸಂತೆಪೇಟೆಯಲ್ಲಿ ಸುತ್ತಾಡಿದ್ದು ಆಯಿತು
ಸಂಜೆ ಎಂಟರ ಸುಮಾರಿಗೆ ಮರಳಿ ಬಂದದ್ದಾಯಿತು
ಇನ್ನೂ ಊರಿಗೆ ಮರಳುವುದಂತು ತಿಳಿಯದಾಯಿತು
ಅಧಿಕಾರಿಗಳ ಪಡಿಪಾಟಲು ಹೇಳ ತೀರದಾಯಿತು.

ಕರ್ನಾಟಕದಲ್ಲಿ ಸಿಗದಿದು ಸಿಂಗಾಡೆ ಎಂಬ ಜಲ ಬೆಳೆ
ಕೊರೆದು ಇಟ್ಟಿರುವರು ಬುಟ್ಟಿಯ ತುಂಬದರ ತೊಳೆ
ತುಂಬಾ ರುಚಿಕರ ವಿಶಿಷ್ಟ ಕರಿಬಣ್ಣದವು ಕಟ್ಟಿದೆ ಕಳೆ
ಊರಿಗೆ ತಂದೆವು ತಿಂದೆವು ಪರಿಚಯ ಇಂದು ನಾಳೆ

ಆಯಿತು ಇಲ್ಲಿ ಬೇಸರವು ಸುಮ್ಮನೆ ಕುಳಿತು ಕುಳಿತು
ಆಡುತ ನೋಡುತಿಲ್ಲಿನ ಪೂಜಾರಿಗಳ ಸಖ್ಯೆ ಬೆಳಿತು
ಅವರೊಡನೆ ಆಡಿ ಕುಣಿತ ಭಜಿಸಿದ ದ್ಯಾಸ ಉಳಿತು
ಬ್ಯಾಸರಿಕೆಯಲ್ಲಿ ಹಾಂಗ ಹೀಂಗ ಆರು ದಿನ ಕಳಿತು .

ಏಕಾದಶಿ ಗನ್ನಾ ಗ್ಯಾರಾಮಿ ಹಬ್ಬ ಅದೆಂತಹ ಸಡಗರ
ಗೋಮಯದ ಸಾರಣೆಯಿಂದ ಅಂಗಳವು ಸುಂದರ
ವಿವಿಧ ರಂಗು ರಂಗಿನ ರಂಗೋಲಿಗಳ ಚಿತ್ತ ಚಿತ್ತಾರ
ಪ್ರತಿ ಮನೆಗಳ ಮೇಲೆ ಸಾಲಂಕೃತ ದೀಪಗಳ ಹಾರ.

ದೀಪಾವಳಿನಂತರ ಹನ್ನೊಂದನೆ ದಿನ ಗ್ಯಾರಮಿ ಹಬ್ಬ
ಲಕ್ಷ್ಮಿಯ ಪೂಜೆಗೆ ಅವಸ್ಯವಂತೆ ತರಾವರಿ ನೆಲ ಕಬ್ಬ
ಕಬ್ಬುನು ಮುಗಿಬಿದ್ದು ಕೊಂಡರು ಬಂದು ಮನೆಗೊಬ್ಬ
ನಾರಿಯರ ಅದರ ಸೃಂಗಾರಕ್ಕೆ ಹಾರಿವೆ ಕಣ್ಣು ಹುಬ್ಬ.

ಬರುವ ಹೊತ್ತಿನವರೆಗೆ ನಮ್ಮವರ ಖರೀದಿ ತೀರಲಿಲ್ಲ
ಕೆಲವರಿಗೆ ಇಲ್ಲಿನ ಈಊಟ ವಾತಾವರಣ ಸೇರಲಿಲ್ಲ
ಹಾಗಂತ ಅವರೇನು ವಾತಾವರಣಕ್ಕಂಜಿ ಕೂರಲಿಲ್ಲ
ಕನ್ನಡಿಗರ ಶಕ್ತಿಗೆ ಯಾವ ಬಾಧೆ ಸನಿಹಕ್ಕೂ ಬರಲಿಲ್ಲ.

ಅಂತು ಇಂತೂ ದಿನಾಂಕ ೨೩ರ ಸಂಜೆ ಟ್ರೈನ್ ಬಂತು
ಹಳೆ ಮುದುಕರಲ್ಲಿ ಹೊಸ ರಕ್ತ ಸಂಚಾರಾದಂಗಾತು
ಹತ್ತು ದಿನಗಳ ಬೇಸರಿಕೆ ಗೊತ್ತಿಲದೆ ಹಾರಿ ಹೋತು
ಬಹಳ ಖುಷಿಯಲ್ಲಿ ನಡೆದವೀಗ ಗೆಳೆಯರ ಮಾತು.

ಸೀಹೋರ ನಿಲ್ದಾಣದಿ ಜೀಲೇಬಿ ವಡಾ ಭಾಜಿವಾಲಾ
ಮೆದ್ದು ನಡದೆವು ಮುಂದಿನ ನಿಲ್ದಾಣವು ಭೂಪಾಲ
ಬಂತು ನೋಡಿ ಮತ್ತೆ ಚಪಾತಿ ಅನ್ನ ರಸಂ ಮಸಾಲ
ನಮ್ಮವರ ಮುಖವ ಅರಳಿಸಿ ನಗುತಿಹರೀಗ ಕಲಕಲ.

ಊರಿನಡೆ ಹೊರಟಿದೆ ರೈಲು ಎದೆಂತಹ ಸಡಗರವು
ಲಗು ಬಗೆಯಲಿ ಭದ್ರಪಡಿಸಿಕೊಂಡರಲ್ಲ ಸ್ಥಾನವು
ರೈಲಿನಲಿ ಕುಳಿತು ಕ್ಲಿಕ್ಕಿಸಿದ ಫೋಟೋ ರವಾನವು
ಕುಳಿತುಮೋಬೈಲನಲ್ಲಿ ಮುಳುಗೇಳುವ ಜಮಾನವು.

ಏಳಿ ಎದ್ದೇಳಿ ಉಪಹಾರ ಬಂದರೆ ನಿದ್ದೆ ಹಾರಿತ್ತು
೨೪ರ ಬೆಳಿಗ್ಗೆ ೭ಗಂಟೆಗಾಗಲೆ ಉಪಹಾರ ಬಂದಿತ್ತು
ವಡಾ ಪಾವು ಪೂರಿ ಬಿಸ್ಕತ್ತು ಚಾಕಲೇಟ್ ಕಾದಿತ್ತು
ತಣ್ಣನ ಥಂಡ್ಯಾಗ ಬಿಸಿ ಬಿಸಿ ಚಹಾ ಹೊಟ್ಟೆ ಸೇರಿತ್ತು.

ಆನಂದ ತುಂದಿಲರಾಗಿ ಭಜನೆಯು ಮಾಡುತಿಹರು
ಸರ್ವ ಶಕ್ತಿ ಭಗವಂತನ ನಾಮವನು ಹಾಡುತಿಹರು
ತಾಸುಘಳಿಗೆಗೊಮ್ಮ ಊರ ದಾರಿ ನೋಡುತಿಹರು
ಬೇಸರವಿಲ್ಲದಲೆ ನಕ್ಕು ನಲಿದು ಕುಣಿದಾಡುತಿಹರು.

ಗೆಳೆಯರು ತಂದ ರುಚಿ ರುಚಿಯಾದ ಕರಿದ ಚೂಡಾ
ಜೊತೆಗೆ ಹಸಿಮೆಣಸಿನ ಕಾಯಿ ಉಳ್ಳಾಗಡ್ಡಿ ಪಾಡಾ
ಹಾಗೆ ತಿನ್ನುತ್ತಲೆ ನಡೆದಾವ ಭರ್ಜರಿ ಎಲ್ಲಿಲ್ಲದ ಹಾಡ
ಸುತ್ತಮುತ್ತಲ ಬೆಳೆದ ಕಬ್ಬು ಹತ್ತಿ ಬೆಳೆಗಳು ನೋಡ.

ಮೋಜು ಮಸ್ತಿಯೊಂದಿಗೆ ಸಾಗಿದೆ ನಮ್ಮ ಸವಾರಿ
ಆಗಾಗ ಶ್ರೀ ಪ್ರಶಾಂತ ಪಾಟೀಲರ ಮೇಲುಸ್ತುವಾರಿ
ಮೆಲ್ಲುತ್ತಿದ್ದರು ಕೆಲವರುಬ್ರೇಡ್ಡ ಮೇಲೆ ಜಾಮ ಸವರಿ
ಹೀಗೆ ಗೆಳೆಯರೊಡನೆ ಪ್ರಯಾಣವು ಬಹಳಮಜಾರಿ.

ಬರೋಬ್ಬರಿ ೩ಗಂಟೆಗೆ ಬಂತು ನೋಡಿ ಸೋಲಾಪುರ
ರುಚಿಕರವಾದ ಆಹಾರವು ಬಂತು ನೋಡಿ ಭರಪೂರ
ಬಾಯಿ ತುಂಬಾ ಹುಳಿ ಉಪ್ಪು ಖಾರದ ಪಾಕ ಸಾರ
ಕರುನಾಡಿನ ಗಾಳಿ ತಾಕಿತು ಸ್ವಚ್ಛಂದವು ಉಲ್ಲಾಸಕರ

ಸಂಜೆ ೫ -೩೦ಕ್ಕೆ ಕಲಬುರಗಿ ಶರಣಬಸವನ ನಾಡಿಗೆ
ಬಂದು ತಲುಪಿದೇವು ಸೂಫಿ ಸಂತರುದಿಸಿದಬೀಡಿಗೆ
ಸಮಯ ೭ ಕ್ಕೆ ರೈಲು ತಲುಪಿತು ಜಂಗ್ಸನ ವಾಡಿಗೆ
ಸರಿಯಾಗಿ ೮ -೨೫ ಯಾದಗಿರಿ ಸ್ವ ಜಿಲ್ಲೆಯ ಗೂಡಿಗೆ.

ಯಾದಗಿರಿ ಜಿಲ್ಲೆ ಬೋಧಕಿಯವರಿಂದ ಕುಶಲೋಪರಿ
೯ -೩೦ ಸರಿಯಾಗಿಬಿಟ್ಟಂಗಾತು ನೋಡರಿ ಯಾದಗಿರಿ
ಇಲ್ಲಿಂದ ಕ್ರೋಸರನಲ್ಲಿ ಸಾಗಿತು ನಮ್ಮೆಲ್ಲರ ಸವಾರಿ
ಶರಣು ಶರಣಾರ್ಥಿ ಬಂದುಗಳೇ ಸುರಪುರ..

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ