ಶೋಷಿತರ ಏಳ್ಗೆಗೆ ಮೊದಲ ಆದ್ಯತೆ: ಭೀಮರಾಯ ಸಿಂದಗೇರಿ ಸಂವಿಧಾನ ಸಮರ್ಪಣಾ ದಿನ, ತಾಲೂಕು ಸಮಿತಿ ರಚನೆ ಕಾರ್ಯಕ್ರಮದಲ್ಲಿ ಅಭಿಮತ

ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಹಿಂದುಳಿದವರ, ತುಳಿತಕ್ಕೊಳಗಾದವರ, ಶೋಷಣೆಯಿಂದ ಬಳಲುತ್ತಿರುವವರನ್ನು ಮೇಲುತ್ತೆಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸದಸ್ಯರು ನಿರ್ಭಿಯವಾಗಿ ದುಡಿಯುತ್ತಾರೆ. ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನ ಆಶಯದಂತೆ ಪ್ರತಿಯೊಬ್ಬರೂ ಜೀವಿಸಬೇಕು ಎಂದು ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂದಗೇರಿ ಹೇಳಿದರು.
ನಗರದ ಗೋಲ್ಡನ್‌ಕೇವ್ ಬುದ್ಧವಿಹಾರದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನ ಹಾಗೂ ತಾಲೂಕು ಸಮಿತಿ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ದ, ಬಸವ, ಜ್ಯೋತಿ ಬಾಪುಲೆ, ಸಾವಿತ್ರಿಬಾಪುಲೆ, ಛತ್ರಪತಿ ಶಾಹುಮಹಾರಾಜ್, ತಂದೆ ಪೆರಿಯಾರ್, ನಾರಾಯಣಗುರು ರವರ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ನಡೆಯಬೇಕು ಎಂದರು.

ಜಾತಿಯ ನೋವಿನಿಂದ ಬಳಲುತ್ತಿದ್ದ ಜನಾಂಗದ ನೋವನ್ನು ಅರಿತು ಹಗಲು ರಾತ್ರಿಯನ್ನದೆ ೨ ವರ್ಷ, ೧೧ ತಿಂಗಳು, ೧೮ ದಿನಗಳ ಕಾಲ ಅವಿರತವಾಗಿ ಶ್ರಮಿಸಿದ್ದಾರೆ. ಈ ದೇಶದ ತಳ ಸಮುದಾಯದ ಸಮುದಾಯಗಳು ನೆಮ್ಮದಿಯಿಂದ ಬದುಕಲು ಸಮ-ಸಮಾಜದ ನಿರ್ಮಾಣಕ್ಕಾಗಿ ನವೆಂಬರ್ ೨೫, ೧೯೪೯ರಂದು ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ಸಮರ್ಪಿಸಿದರು. ಈ ದಿನವನ್ನು ಪ್ರತಿಯೊಂದು ಮನೆಮನೆಯಲ್ಲೂ ಆಚರಿಸಬೇಕು ಎಂದು ಮನವಿ ಮಾಡಿದರು.

ರಚನೆ: ಸಂಘಟನೆಯ ತಾಲೂಕು ಸಮಿತಿ ರಚಿಸಲಾಗಿದ್ದು, ತಾಲೂಕು ಸಂಚಾಲಕರಾಗಿ ಬಸವರಾಜ ಬಡಿಗೇರ, ಸಂಘಟನಾ ಸಂಚಾಲಕರಾಗಿ ಮಲ್ಲಿಕಾರ್ಜುನ ಜಾಲಿಬೆಂಚಿ, ಮುತ್ತು ಬೋನಾಳ, ಮಲ್ಲಪ್ಪ ತಡಿಬಿಡಿ, ಸಿದ್ರಾಮ ನಾಯಕ್ಕಲ್, ಮಲ್ಲಿಕಾರ್ಜುನ ತಳವಾರಗೇರಾ ಸೇರಿದಂತೆ ಆಯ್ಕೆಯಾಗಿದ್ದಾರೆ.
ಹೋರಾಟಗಾರ ವೆಂಕೋಬ ದೊರೆ, ಸಾಹಿತಿ ಮಹಾಂತೇಶ ಗೋನಾಲ ಮಾತನಾಡಿದರು.
ಶಿವಶಂಕರ ಹೊಸಮನಿ, ಶಿವಶರಣಪ್ಪ ವಾಡಿ, ಮಲ್ಲಪ್ಪ ಲಂಡನ್ಕರ್, ಮಂಜುಳಾ, ಸಿದ್ದರಾಮ ಭಂಡಾರಿ, ಬಸವರಾಜು ಬಡಿಗೇರಾ, ಮಲ್ಲಿಕಾರ್ಜುನ ಜಾಲಿಬೆಂಚಿ, ಪ್ರಭು ಕಚಕನೂರು, ಮಾನಪ್ಪ ಹಳಿ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ