ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಗರುಡಾದ್ರಿ ಕಲಾಮಂದಿರ ದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ರತಿ ವರ್ಷದಂತೆ ಕನ್ನಡ ರಾಜ್ಯೋತ್ಸವದಲ್ಲಿ ಕೊಡಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರ ಮತ್ತು ಕೊರೋನಾ ಕಾಲಘಟ್ಟದಲ್ಲಿ ನೀಡಿದ ಸೇವೆ ಗುರುತಿಸಿ ತಾಲ್ಲೂಕು ಆರೋಗ್ಯ ಅಧಿಕಾರಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ,
೨೦೨೩ ನೇ ಸಾಲಿಗಾಗಿ ಹಿರಿಯ ಸಾಹಿತಿ ಕಾದಂಬರಿ ಕಾರ ಡಾ. ಸತ್ಯನಾರಾಯಣ ಆಲ್ದಾರ್ತಿ ಅವರನ್ನು ” ವರ್ಷದ ವ್ಯಕ್ತಿ ” ಪ್ರಶಸ್ತಿಗೆ
ಆಯ್ಕೆ ಮಾಡಲಾಗಿದೆ. ಅದೇರೀತಿ ಕೊರೊನಾ ಕಾಲಘಟ್ಟದಲ್ಲಿ ತಮ್ಮ ಜೀವದ ಹಂಗು ತೊರೆದು ರೋಗಿಗಳ ಸೇವೆಯನ್ನು ಮಾಡಿದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜಾ ವೆಂಕಪ್ಪ ನಾಯಕ್ ಅವರನ್ನು ” ವರ್ಷದ ವ್ಯಕ್ತಿ ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ರಾಜಾ ಮುಕುಂದ ನಾಯಕ್ ಅವರು ಕಸಾಪ ಸರ್ವ ಸದಸ್ಯರು ಹಾಗೂ ಕನ್ನಡ ಮನಸ್ಸುಗಳ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸಭೆಯ ನಂತರ ಘೋಷಣೆ ಮಾಡಿದರು ಎಂದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಪ್ರಬುದ್ಧತೆಯನ್ನು ಪಡೆದ ನಮ್ಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಶಿಷ್ಟ ಪೂರ್ಣವಾದ ಪರಂಪರೆಯನ್ನು ಹೊಂದಿದ್ದು ಪಾರದರ್ಶಕವಾಗಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಗೃಹ ಸನ್ಮಾನ ಮಾಡುವ ಮೂಲಕ ಸಾಹಿತಿಗಳನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಸರ್ಕಾರವು ಅರ್ಜಿ ಹಾಕಿದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸುತ್ತದೆ. ಆದರೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಅರ್ಜಿಯನ್ನು ಕರೆಯದೆ ಎಲೆಮರೆಯ ಕಾಯಿಯಂತಿರುವ ಸ್ವಾಭಿಮಾನಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಸಾಹಿತಿಗಳನ್ನು ಗೌರವಿಸುತ್ತದೆ ಎಂದರು.
ಸಾಹಿತಿಗಳಾದ ಶಾಂತಪ್ಪ ಬೂದಿಹಾಳ್, ಶ್ರೀನಿವಾಸ ಜಾಲವಾದಿ, ನಬೀಲಾಲ್ ಮಕಾಂದಾರ, ಸಿದ್ದಯ್ಯ ಮಠ, ಕನಕಪ್ಪ ವಾಗಣಗೇರಿ, ವೆಂಕಟೇಶ ಪಾಟೀಲ್, ಪ್ರಕಾಶ್ ಅಲಬನೂರ್, ಮಲ್ಲಿಕಾರ್ಜುನ ಸತ್ಯಂ ಪೇಟ್, ಮಲ್ಲಿಕಾರ್ಜುನಯ್ಯ ಹಿರೇಮಠ, ನಿಂಗಣ್ಣ ಚಿಂಚೋಡಿ, ಪ್ರಕಾಶ ಸಜ್ಜನ್, ಸೋಮಶೇಖರ್ ಶಾಬಾದಿ, ಮಹೇಶ್ ಜಹಗೀರ್ದಾರ್, ಸೋಮರೆಡ್ಡಿ ಮಂಗಿಹಾಳ್, ಎ.ಕಮಲಾಕರ, ದೇವು ಹೆಬ್ಬಾಳ್, ಮಲ್ಲಿಕಾರ್ಜುನ ಗುಳಗಿ, ಮುದ್ದಣ್ಣ ಅಪ್ಪಾಗೋಳ್, ಅನ್ವರ್ ಜಮಾದಾರ್, ರಾಘವೇಂದ್ರ ಬಕ್ರಿ, ಸಾಹೇಬರೆಡ್ಡಿ ಇಟಗಿ, ಶ್ರೀಶೈಲ್ ಯಂಕಂಚಿ, ರವಿಚಂದ್ರ ಠಾಣಾಗುಂದಿ, ಅಂಬರೀಶ್ ಬಿರಾದಾರ್, ಗೌರಿಶಂಕರ್ ಯೆನಗುಂಟಿ, ಹನುಮಂತರಾಯ ಭಜಂತ್ರಿ,ತಿಮ್ಮಣ್ಣ ಪೂಜಾರಿ, ಶಂಕರ್ ಬಡಿಗೇರ್ , ಶಿವಪ್ಪ , ತಿಮ್ಮಣ್ಣ ದೇವಿಕೇರಿ, ಎಂ ಗಂಗಾಧರ , ಪಾಂಡುರಂಗ ಲಕ್ಷ್ಮಿಪುರ ಸೇರಿದಂತೆ ಇತರರಿದ್ದರು.
ದೇವು ಹೆಬ್ಬಾಳ್ ನಿರೂಪಿಸಿದರು. ಗೌರವಕೋಶಾಧ್ಯಕ್ಷ ವೆಂಕಟೇಶ್ ಪಾಟೀಲ್ ಅಭಿಪ್ರಾಯ ಸಂಗ್ರಹಿಸಿ ಸ್ವಾಗತಿಸಿದರು. ಶ್ರೀಶೈಲ್ ಯಂಕಂಚಿ ವಂದಿಸಿದರು.