ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ೧೯ನೇ ವರ್ಷದ ಕರವೇ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನು ನ. ೩೦ರಂದು ರಂಗಪೇಟೆಯ ದೊಡ್ಡ ಬಜಾರ್‌ನಲ್ಲಿ ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ್ ನಾಯಕ ಬೈರಿಮಡ್ಡಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕುವೆಂಪು ಪ್ರಶಸ್ತಿ ವಿತರಣೆ, ಜೀ ಕನ್ನಡವಾಹಿನಿಯ ಸರಿಗಮಪ ಖ್ಯಾತಿಯ ಆಶಾ ಭಟ್, ಕಾಮಿಡಿ ಕಿಲಾಡಿ ಸೂರಜ್, ಮಿಂಚು ಹಾಗೂ ಭರ್ಜರಿ ಬ್ಯಾಚುಲರ್ಸ್ ರನ್ನರ್ ಅಪ್ ಗಿಲ್ಲಿ ನಟ, ಜೂನಿಯರ್ ಉಪೇಂದ್ರ ತಂಡ ಹಾಗೂ ಸ್ಥಳೀಯರ ಸಂಗೀತ ಕಲಾವಿದರಿಂದ ಗಾನ ವೈಭವ ಮತ್ತು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಶಾಸಕ ಡಾ. ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸುವರು. ಮಾಜಿ ಸಚಿವ ನರಸಿಂಹ ನಾಯಕ ರಾಜೂಗೌಡ ಜ್ಯೋತಿ ಬೆಳಗಿಸುವರು. ರಾಜಾ ಮುಕುಂದ ನಾಯಕ ಮತ್ತು ರಾಜ ಹರ್ಷವರ್ಧನ ನಾಯಕ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ ವಹಿಸುವರು. ದೇವಾಪುರದ ಜಡಿ ಶಾಂತಲಿAಗೇಶ್ವರ ಸಂಸ್ಥಾನ ಮಠದ ಶಿವಮೂರ್ತಿ ಶಿವಚಾರ್ಯರು, ಶ್ರೀ ಗಿರಿಮಠದ ಮಲ್ಲಿಕಾಜುನ ಶಿವಾಚಾರ್ಯರು, ಯಮನೂರಪ್ಪ ಮಠದ ಮಲ್ಲಿಕಾರ್ಜುನ ಮುತ್ಯಾ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ಡಾ. ಶಫಿ ಉಜ್ಜಮ್, ಸಣ್ಣಕೆಪ್ಪ ಮದಲಿಂಗನಾಳ, ಡಾ. ಮಲ್ಲಿಕಾರ್ಜುನ ಸ್ವಾಮಿ, ನರಸಿಂಹರಾವ್ ಕುಲಕಣ ð, ಶ್ರೀಮಂತ ಚಲವಾದಿ, ಪುರುಷೋತ್ತಮ ನಾಯಕ, ಸಂದೇಶ ಸಾಳಂಕಿ ಸೇರಿದಂತೆ ಇತರರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸೂಗುರೇಶ್ ವಾರದ, ಶಿವಶರಣಯ್ಯ ಸ್ವಾಮಿ, ಬಿಲ್ವಿದ್ಯೆ ಪರಿಣ ತ ತಂಡ ದೇವಾಪುರ, ಬಸವರಾಜ್ ಪರಮಣ್ಣ ದೇವಪುರ, ಗುರುಸ್ವಾಮಿ ನಾಯಕ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಭೀ
ಮನಾಯಕ ಮಲ್ಲುಭಾವಿ, ಶ್ರೀನಿವಾಸ್ ನಾಯಕ, ಹನುಮಗೌಡ, ಆನಂದ ಮಾಚಿಗುಂಡಾಳ, ಹಣಮಂತ ದೇವಿಕೇರಿ, ಶ್ರೀನಿವಾಸ್ ಲಕ್ಷ್ಮಿಪುರ, ಹನುಮಂತ ಹಾಲಗೇರಿ, ಕೃಷ್ಣ ಮಂಗಿಹಾಳ, ರಂಗನಾಥ್ ಬಿರಾದಾರ, ಶ್ರೀಶೈಲ ಕಾಚಿಪುರ, ಸೋಮಯ್ಯ ಹಾಲಗೇರ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.