ಕ್ರಾಂತಿ ವಾಣಿ ಶಹಾಪುರ.
ನೀವು ಬ್ಯಾಂಕನ್ನು ಬೆಳೆಸಿದರೆ ಬ್ಯಾಂಕ್ ನಿಮ್ಮನ್ನು ಬೆಳೆಸುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಅನೇಕ ವೃತ್ತಿ ಅವಕಾಶಗಳು ಇದ್ದು, ಗ್ರಾಮೀಣ ಜನತೆಯ ಬದುಕು ಉತ್ತಮ ಗೊಳ್ಳಬೇಕು. ಆಗ ಮಾತ್ರ ಮೂಲತಃ ಹಳ್ಳಿಗಳ ರಾಷ್ಟ್ರವಾದ ಭಾರತ ಆಭಿವದ್ಧಿಯ ಪಥದಲ್ಲಿ ಮುಂದುವರಿಯಲು ಸಾಧ್ಯ ವಾಗುತ್ತದೆ. ಈ ದಿಶೆಯಲ್ಲಿ ನಮ್ಮ ಎಸ್ ಬಿ ಐ ಬ್ಯಾಂಕ್ ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಎಸ್ ಬಿ ಐ ಬ್ಯಾಂಕಿನ ಸಿಜಿಎಂ ಕಿಶನ್ ಶರ್ಮ ಹೇಳಿದರು.
ತಾಲೂಕಿನ ಇಬ್ರಾಹಿಂಪುರ್ ಗ್ರಾಮದಲ್ಲಿ ಎಸ್‌ಬಿಐ ನೂತನ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ಪ್ರತಿಯೊಬ್ಬ ಪ್ರಜೆಯೂ ಕೂಡ ಬ್ಯಾಂಕಿನಲ್ಲಿ ಆರ್ಥಿಕ ವಹಿವಾಟು ನಡೆಸಲು ಆರ್‌ಬಿಐ ಮಹತ್ತರವಾದ ನಿರ್ಧಾರಗಳನ್ನು ಕೈಗೊಂಡು ಸೇವಾ ಕ್ಷೇತ್ರ ದಲ್ಲಿ ಬದಲಾವಣೆಗಳೊಂದಿಗೆ ಜನ ಸಾಮಾನ್ಯರಲ್ಲಿಗೆ ಬ್ಯಾಂಕುಗಳು ಹತ್ತಿರ ವಾಗುತ್ತಿವೆ. ಈ ಶಾಖೆ ದೇಶದಲ್ಲಿ 64427 ನೆಯ ಹಾಗೂ ಕರ್ನಾಟಕದಲ್ಲಿ ನಮ್ಮ ಎಸ್ ಬಿ ಐ ಬ್ಯಾಂಕ್ ಇಂದು 1561 ನೆಯ ಶಾಖೆಯಾಗಿ ನಿಮ್ಮ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಇಬ್ರಾಹಿಂಪುರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಬ್ಯಾಂಕಿನ ಸದುಪಯೋಗ ಪಡಿಸಿಕೊಳ್ಳಬೇಕು. ಬ್ಯಾಂಕಿನ ಜೊತೆ ವ್ಯವಹಾರ ಸರಿಯಾಗಿ ಇಟ್ಟುಕೊಂಡರೆ ಬ್ಯಾಂಕ ಸದಾ ನಿಮ್ಮ ಹಿತವನ್ನೇ ಬಯಸುತ್ತದೆ ಗ್ರಾಮದ ಪ್ರತಿಯೊಬ್ಬರು ನಮ್ಮ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕು.ಈ ನೂತನ ಶಾಖೆಯಲ್ಲಿ ಗ್ರಾಹಕರ ಅನುಕೂಲವಾಗುವ ವಿವಿಧ ಸಾಲ ಸೌಲಭ್ಯ, ಕೇಂದ್ರ ಸರಕಾರದ ನಾನಾ ಸಾಲ ಯೋಜನೆಗಳ ಜತೆಗೆ ಇತ್ತೀಚೆಗಷ್ಟೇ ಆರಂಭವಾಗಿರುವ ಮುದ್ರಾ ಯೋಜನೆಗಳು ಲಭ್ಯವಿದೆ. ಇದಲ್ಲದೆ ಕೋರ್ ಬ್ಯಾಂಕಿಂಗ್ ಸಿಸ್ಟಮ್(ಸಿಬಿಎಸ್) ಸಹ ಲಭ್ಯವಿದೆ ಎಂದು ಗ್ರಾಹಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್ ಬಿ ಐ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿ ಎನ್ ಸರ್ಮಾ ಅವರು, ನಾವು ನಮ್ಮ ಎಸ್ ಬಿ ಐ ಬ್ಯಾಂಕ್ ನೂತನ ಶಾಖೆಯನ್ನು ಈ ಗ್ರಾಮದಲ್ಲಿ ತೆಗೆಯುವ ಉದ್ದೇಶ ಇಷ್ಟೇ ಈ ಗ್ರಾಮದಿಂದ 15, 20 ಕಿಲೋ ಮೀಟರ್ ಅಂತರದಲ್ಲಿ ಯಾವುದೇ ಬ್ಯಾಂಕ್ ಇಲ್ಲ. ಈ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ಜನರಿಗೆ ತೊರಿತವಾಗಿ ಅತ್ಯಂತ ಸಮೀಪದಲ್ಲಿ ಸಮಯ ಹಾಗೂ ಹಣ ಉಳಿತಾಯ ಮಾಡುವ ಉದ್ದೇಶದಿಂದ ಈ ಗ್ರಾಮದಲ್ಲಿ ನೂತನ ಶಾಖೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ಶಾಖೆ ದೊಡ್ಡ ಶಾಖೆಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದು ಅವರು ತಿಳಿಸಿದರು
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸಾಲ ಮತ್ತು ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳಲು ಯೋಜನೆಗಳು ಇದ್ದು, ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ಗೋಲ್ಡ್ ಲೋನ್ ಪಡೆಯಬಹುದಾಗಿದೆ. ನಮ್ಮ ಬ್ಯಾಂಕಿಗೆ ಬೇಕಾಗಿರುವದು ಗ್ರಾಹಕರ ವಿಶ್ವಾಸ ಬಹಳ ಮುಖ್ಯ.ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಸ್ಪರ್ಧಾತ್ಮಕ ದರಗಳಲ್ಲಿ ಸಾಲಗಳನ್ನು ಒದಗಿಸುವ ಮೂಲಕ, ವಿಶ್ವಾಸಾರ್ಹ ರವಾನೆ ಸೇವೆಗಳನ್ನು ಪಾವತಿಸುವ ಮೂಲಕ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದು ಜನರು ತಮ್ಮ ಹಣವನ್ನು ಉಳಿಸಲು ಮತ್ತು ಸರ್ಕಾರಿ ಭದ್ರತೆಗಳು, ದೀರ್ಘಾವಧಿಯ ಬಾಂಡ್‌ಗಳು ಮುಂತಾದ ವಿವಿಧ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ.
ಈ ಕಾರ್ಯಕ್ರಮದಲ್ಲಿ, ಎಸ್ ಬಿ ಐ ಬ್ಯಾಂಕ್ ಕಲ್ಬುರ್ಗಿ ಆಡಳಿತ ಕಚೇರಿಯ ಡಿಜಿಎಂ ಪಿಎಲ್ ಶ್ರೀನಿವಾಸರಾವ್, ಕ್ಷೇತ್ರ ವ್ಯವಸ್ಥಾಪಕ ಶ್ರೀಪಾದರಾಜು, ಇಬ್ರಾಹಿಂಪುರ್ ನೂತನ ಎಸ್ ಬಿ ಐ ಬ್ಯಾಂಕಿನ ವ್ಯವಸ್ಥಾಪಕ ಪ್ರವೀಣ್, ಬ್ಯಾಂಕಿನ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು ರಮೇಶ್ ವಂದನಾರ್ಪಣೆ ಮಾಡಿದರು. ಸೀನಿಯರ್ ಹೆಡ್ ಮೆಸೆಂಜರ್ ನಾರಾಯಣ ಕುಲಕರ್ಣಿ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು ಇದ್ದರು.