ಭಕ್ತಿಯ ಹರಿಕಾರ ಕನಕದಾಸರನ್ನು ಭಿನ್ನ ನೆಲೆಯಲ್ಲಿ ಪರಿಭಾವಿಸಿ..

ಲೇಖನ: ಡಾ. ಸಾಯಿಬಣ್ಣ ಮೂಡಬುಳ

ಕ್ರಾಂತಿವಾಣಿ ವಾರ್ತೆ ಸುರಪುರ : ಭಿನ್ನ ನೆಲೆಯಲ್ಲಿ ಕನಕದಾಸರರನ್ನು ಪರಿಭಾವಿಸುವ ಸಮೃದ್ಧತೆ ಸಮಾಜದ ಮುಂಚೂಣಿಗೆ ಬರುವ ಅಗತ್ಯತೆಯಿದೆ.

ಭಾರತವು ಹಲವಾರು ಸಂತರು, ಶರಣರು, ಸುಫಿಗಳು, ಅನುಭಾವಿಗಳ ನೆಲೆವೀಡಾಗಿದೆ. ಈ ನೆಲೆದ ಜೀವಪರತೆ, ವೈವಿಧ್ಯತೆ, ಮೌಲ್ಯ ಆದರ್ಶಗಳ ಮಹಾಸಾಗರವನ್ನೆ ತಮ್ಮ ಚಿಂತನೆಗಳಲ್ಲಿ ಅಳವಡಿಸಿ, ನಿರೂಪಿಸಿದ ಮಹಾನ್ ಸಾಧನಾ ಜೀವಿಗಳ ಕೊಡುಗೆಗಳು ನಾಡನ್ನು ರಚನಾತ್ಮಕವಾಗಿ ಕಟ್ಟಲು ಶ್ರಮಿಸಿವೆ.

ಸಾಹಿತ್ಯದ ಮತ್ತು ಸಾಮಾಜಿಕ ಅಭಿಧ್ಯಯ ದೃಷ್ಟಿಯಿಂದಲೂ ಈ ಚಿಂತನಾ ವಲಯದ ಬಹುಮುಖಿ ಆಶಯಗಳು ನಿತ್ಯಹರಿಧ್ವರಣದಂತೆ ಸದಾ ಹಸಿರಾಗಿವೆ. ಇಂತಹ ಅರ್ಥಪೂರ್ಣ ಚಿಂತನೆಗಳ ಮಹಾ ಮೊತ್ತವೆ ದಾಸ ಶ್ರೇಷ್ಠ ಶ್ರೀ ಕನಕದಾಸರು. ಭಕ್ತಿಯ ಪರಂಪರೆಗೆ ಹೊಸ ಸ್ವರೂಪವನ್ನು ನೀಡಿ, ಭಕ್ತಿ ಮಾರ್ಗಕ್ಕೆ ಹೊಸ ಆಯಾಮವನ್ನು ನೀಡಿ ಸಂವರ್ಧನೆಗೊಳಿಸಿದ ಕೀರ್ತಿ ಕೂಡಾ ಶ್ರೀ ಕನಕದಾಸರಿಗೆ ಸಲ್ಲಲೇಬೇಕು.

ಭಕ್ತಿಯ ಮಾರ್ಗ, ಪರಿಭಾವಿಸುವ ರೀತಿ ಭಕ್ತಿಯನ್ನು ಎದುರುಗೊಳ್ಳಲು ಬೇಕಾಗುವ ವಿಧಾನಗಳನ್ನು ತಮ್ಮ ಚಿಂತನೆಗಳ ಮೂಲಕ ಪರಿಷ್ಕರಿಸಿ ಸಮಾಜಕ್ಕೆ ಮುಖಾ ಮುಖಿಯಾದವರು ಕನಕದಾಸರು. ಕೀರ್ತನೆಗಳು ಸಾಮಾಜಿಕ ಅಸ್ತವ್ಯಸ್ತಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿದ ರೀತಿ ಅಮೋಘವಾದದ್ದು. ಸಾಮಾಜಿಕ ಪರಿವರ್ತನೆಯನ್ನೆ ತಮ್ಮ ಮುಖವಾಣಿಯಾಗಿಸಿಕೊಂಡು ಸಮಾಜಮುಖಿ ಧೋರಣೆಯನ್ನು ಹೊಂದಿದ ಇವರ ಕಾವ್ಯ ಸಂಪತ್ತು ಸಮಾಜ ವಿಜ್ಞಾನ ಅಧ್ಯಯನ ಶಿಸ್ತುಗಳಿಗೆ ಬ್ರಹತ್ ಮಾಹಿತಿವಾಹಕ ಗಳಾಗಿವೆಯೆಂದರೆ ಬಹುಶಃ ಅತಿಷಿಯೋಕ್ತಿಯಾಗಲಿಕ್ಕಿಲ್ಲ.

ಕನಕದಾಸರ ಕಾವ್ಯ ಪ್ರಕಾರಗಳು ಸಮಾಜದ ತಳಸ್ಪರ್ಶಿಯ ವಸ್ತುನಿಷ್ಠ ಸಮಸ್ಯೆ ಮತ್ತು ಬಿಕ್ಕಟ್ಟುಗಳನ್ನು ಅರ್ಥಪೂರ್ಣ ದಾಖಲಿಸುವಲಿ ಸಫ ಲವಾಗಿವೆ.ಸಮಾಜವನ್ನು ಬಹುನೆಲೆಯಲ್ಲಿ ಗ್ರಹಿಸಿ ಸಮಾಜದ ಉನ್ನತಿಗೆ ಬೇಕಾಗುವ ಅನೇಕ ಮಾರ್ಗೋಪಾಯಗಳು ಕನಕದಾಸರ ವಿಚಾರಧಾರೆಗಳಲ್ಲಿರುವದನ್ನು ಹಲವಾರು ಚಿಂತಕರು ದೃಡೀಕರೀಸಿರುವದನ್ನು ಗಮನಿಸಬಬಹುದಾಗಿದೆ.

ಸಾಮಾಜಿಕ ಸಂಸ್ಥೆಗಳ ಬೆಳವಣಿಗೆಗೆ ದಾಸ ಸಾಹಿತ್ಯದ ಕೊಡುಗೆಗಳು ಗಮನಾರ್ಹವಾದದ್ದಾಗಿದೆ. ಮಾನವನ ವ್ಯಕ್ತಿತ್ವದ ಹೆಚ್ಚಳಿಕೆ ಬೇಕಾಗುವ ವಿಪುಲವಾದ ಮೌಲಿಕ ಗುಣಗಳನ್ನು ನೀಡಿದ ಕನಕರು ಸಮಾಜಕ್ಕೆ ತಮ್ಮ ಸಮರ್ಪಿಸಿ ಕೊಂಡವರು. ಕನಕದಾಸರ ಚಿಂತನೆಗಳು ಬಹುಪಯೋಗಿಯಾದವು.

ಬಹು ಆಯಾಮಗಳಲ್ಲಿ ಸಮಾಜವನ್ನು ಕ್ಷ ಕಿರಣದಿಂದ ಗಮನಿಸಿ ಸಮಾಜವನ್ನು ಆವರಿಸಿದ್ದ ಮೌಢ್ಯ ಕಂದಾಚಾರಗಳನ್ನು ವೈಚಾರಿಕವಾಗಿ ಪ್ರತಿರೋಧಿಸಿ ಸಾಮಾಜಿಕ ವಿಕಾಸದ ಬಹುದೊಡ್ಡ ಮಾಧ್ಯಮವಾಗಿ ತಮ್ಮನ್ನು ನೆಲೆಗೊಳಿಸಿಕೊಂಡವರು.ಕನಕದಾಸರ ಸಾಹಿತ್ಯ ಪರಿಪಕ್ವ ಸಮಾಜವನ್ನು ಪ್ರೆರೆಪಣೆಯ ನವೀನ ಭಾವಸಾರವಾಗಿದೆ.ಮೇಲು ಕೀಳು ಉಚ್ಚ ನೀಚ ಭಾವನೆಯನ್ನು ಸಮಾಜವನ್ನು ಕುಬ್ಜೆವನ್ನಾಗಿಸುತ್ತವೆ ಎನ್ನುವ ಚಿಂತನೆಗಳನ್ನು ಶೇಖರಿಸಿಕೊಂಡ ಇವರ ಕಾವ್ಯ ಸಂಪತ್ತು ಸಮಾಜದ ಗತಿಶೀಲತೆಗೆ ರಾಜಮಾರ್ಗದ ರಹದಾರಿಯನ್ನು ಸೃಷ್ಟಿಸಿವೆ.

ಹೀಗೆ ಕನಕರು ಇಂತಹ ಇಂತಹ ಮೌಲಿಕ ಸನ್ನಿವೇಶದ ಸ್ಥಾಪನೆಗೆ ಸದಾ ಹಂಬಲಿಸುವ ಪ್ರಗತಿಪರ ಮನೋಧಾರಣೆಯ ಧಾರ್ಶನಿಕರಾದ ಕನಕರನ್ನು ಸೀಮಿತವಾದ ನೆಲೆಯಲ್ಲಿ ನೋಡದೆ ಬಹುರೂಪಿ ದೃಷ್ಟಿಯಿಂದ ಅವರನ್ನು ಅವರ ಕೊಡುಗೆಗಳನ್ನು ಪರಿಭಾವಿಸಬೇಕಾಗಿದೆ. ಇಂದಿನ ಯುವ ತಲೆಮಾರು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವದರ ಮೂಲಕ ಅವರ ಬಹುಮುಖಿ ಆಶಯಗಳನ್ನು ಈಡೇರಿಸುವ ವಾತಾವರಣ ಸಮಾಜದಲ್ಲಿ ಬೆಳೆದು ಬರಬೇಕು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ