ಸಾಮರ್ಥ್ಯವಿರುವ ವ್ಯಕ್ತಿ ಜಿಲ್ಲಾಧ್ಯಕ್ಷರಾಗಿರುವುದು ಸಂತಸ ತಂದಿದೆ: ಧರ್ಮರಾಜ

ಕ್ರಾಂತಿವಾಣಿ ಶಹಾಪುರ.

ಸಮಾಜದ ಎಲ್ಲಾ ವರ್ಗದ ಜನರನ್ನು ಸಮನ್ವಯದಿಂದ ಕರೆದೊಯ್ಯುವ ಸಾಮರ್ಥ್ಯವಿರುವ ವ್ಯಕ್ತಿಯನ್ನು ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಬಾಣತಿಹಾಳ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಧರ್ಮರಾಜ ಹೇಳಿದರು.
ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಗೌಡಪ್ಪ ಗೌಡ ಆಲ್ದಾಳ  ಅವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಿ ಮಾತನಾಡಿದ ಅವರು,
ಗೌಡಪ್ಪಗೌಡ ಅವರು ಸರ್ವ ಸಮಾಜದ ಜೊತೆ ಪ್ರೀತಿ ವಿಶ್ವಾಸ ಹಾಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸತ್ಯ ಹಾಗೂ ನೇರ ನುಡಿಯ ವ್ಯಕ್ತಿತ್ವ ಹೊಂದಿರುವ ಇವರಿಂದ ನಮ್ಮ ನಾಯಕ ಸಮಾಜ ಹೆಚ್ಚಿನ ರೀತಿಯಲ್ಲಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇವರ ಆಯ್ಕೆಯಿಂದ ನಾಯಕ ಸಮಾಜಕ್ಕೆ ಶಕ್ತಿ ಬಂದಂತಾಗಿದೆ ಎಂದು ಅವರು ಹೇಳಿದರು.
ಇದೆ ವೇಳೆ. ಭೀಮಣ್ಣ ನಾಯ್ಕೋಡಿ, ಪ್ರಭು ಟ್ರೈಲರ್, ಗೋಪಾಲಗೌಡ ಮೇಟಿ ರವಿ ನಾಯ್ಕೋಡಿ ಮಲ್ಲಿಕಾರ್ಜುನ್ ಮೇಟಿ ಪರಮೇಶ್ವರ ಕರಡಿ ಇದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ