ಕ್ರಾಂತಿವಾಣಿ ಶಹಾಪುರ.
ಶಹಾಪುರ ತಾಲೂಕಿನ ಕನ್ಯಕೋಳೂರು ಗ್ರಾಮದ ನಿವಾಸಿ ಮರಿಲಿಂಗಮ್ಮ ಸಿದ್ದಪ್ಪ ಹೊಸ್ಮನಿ (68) ಗುರುವಾರ ರಾತ್ರಿ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರವೀಂದ್ರನಾಥ್. ಹೊಸಮನಿ ಸೇರಿದಂತೆ ಏಳು ಜನ ಪುತ್ರರು, ಏಳು ಜನ ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬಡತನ ಬೇಗೆ ಯಲ್ಲಿದ್ದರು ಕೂಡ ಮಾತೃ ಮಮತೆಯನ್ನು,ಉಣಬಡಿಸಿ ಮಕ್ಕಳನ್ನು ಪ್ರತಿಭಾವಂತರಾನ್ನಾಗಿಸಿ ಸಮಾಜಕ್ಕೆ ಉತ್ತಮ ಕಾಣಿಕೆಯನ್ನು ನೀಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಶುಕ್ರವಾರ ಅವರ ಸ್ವಗ್ರಾಮ ಕನ್ಯಾಕುಳೂರು ದಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.