ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ; ನಗರದ ಶೆಟ್ಟಿಮೊಹಲ್ಲಾದ ಎಸ್ ಬಿಐ ಬ್ಯಾಂಕಿನ ಹತ್ತಿರದ ನಗರಸಭೆಯ ಒಣ ಮತ್ತು ಹಸಿ ಕಸ ಹಾಕುವ ಡಬ್ಬಿಯಲ್ಲಿ ಧಗ ಧಗ ಬೆಂಕಿ ಸೋಮವಾರ ಬೆಳಗ್ಗೆ 7:30ರ ಕಾಣಿಸಿಕೊಂಡಿದ್ದು ನಗರ ನಿವಾಸಿಗಳು ಆತಂಕಗೊಂಡಿದ್ದಾರೆ.
ನಗರಸಭೆಯ ಕಸ ಹಾಕು ಡಬ್ಬದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಈ ಪ್ರದೇಶದ ಸುತ್ತಮುತ್ತ ಮನೆಗಳು, ಬ್ಯಾಂಕ್, ಎಟಿಎಂ ಮಷಿನ್, ಖಾಸಗಿ ಶಾಲೆ, ಆಸ್ಪತ್ರೆ, ಕಿರಣಿ ಅಂಗಡಿಗಳು ಇವೆ.. ಬೆಂಕಿಯ ಕಿಡಿ ಹಾರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಜೀವಹಾನಿ, ಆಸ್ತಿ ಹಾನಿಯಾದರೆ ಯಾರು ಹೊಣೆ? ಎನ್ನುವುದು ಸಾರ್ವಕನಿಕರ ಪ್ರಶ್ನೆಯಾಗಿದೆ..
ನಗರದಲ್ಲಿರುವ ಕಸದ ರಾಶಿ ಮತ್ತು ಡಬ್ಬಗಳಿಗೆ ಬೆಂಕಿ ಹಚ್ಚುತ್ತಿರುವ ಘಟನೆಗಳು ಸಂಭವಿಸುತ್ತಿವೆ. ಇದರ ಬಗ್ಗೆ ತೀವ್ರಕ್ರಮ ಕೈಗೊಳ್ಳಬೇಕು ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸಮನಿ ಒತ್ತಾಯಿಸಿದ್ದಾರೆ.
ಕಸ ಡಬ್ಬದಿಂದ ಹೊರಹೊಮ್ಮುವ ವಿಷಕಾರಿ ಹೊಗೆಯು ಆ ಪ್ರದೇಶದ ಸುರ್ತಮುತ್ತ ಹಲವಾರುಆವರಿಸಿತ್ತು, ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು ಮತ್ತು ವ್ಯವಸ್ಥೆಗಳ ಆಮೂಲಾಗ್ರ ಕೂಲಂಕುಷ ಪರೀಕ್ಷೆ ಮಾಡುತ್ತಾರೆ ಕಾದು ನೋಡಬೇಕಿದೆ.
ಶೆಟ್ಟಿಮೊಹಲ್ಲಾದ ಸುತ್ತಮುತ್ತ ಇರುವ ಕಸವನ್ನು ಖಾಸಗಿ ಶಾಲೆಯ ಮುಂದೆ ತಂದು ಹಾಕುತ್ತಾರೆ. ನಗರಸಭೆಯ ಕಸ ಬಳಿಯುವ ಸಿಬ್ಬಂದಿ ಗಳು ಕಸ ದುಂಡಗೆ ಮಾಡಿ ಕಸ ಒಯ್ಯುವ ವಾಹನಕ್ಕೆ ಹಾಕಬೇಕು. ಅದನ್ನು ಮಾಡದಿ ನಗರಸಭೆ ಪೌರ ಕಾರ್ಮಿಕರು ಬೆಂಕಿ ಹೊತ್ತಿಸಿ ಹೋಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕಸವನ್ನು ಡಬ್ಬಿಯಿಂದ ತೆಗೆದು ವಾಹನಕ್ಕೆ ಹಾಕಬೇಕೆ ಹೊರತು ಬೆಂಕಿ ಹಚ್ಚುವುದು ಸರಿಯಲ್ಲ. ಇದು ಸೂಕ್ಷ್ಮ ಘಟನೆಯಾಗಿದ್ದು ಸಿಬ್ಬಂದಿ ಸಭೆ ಕರೆದು ತಿಳಿವಳಿಕೆ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರಾದ ಜೀವನ ಕಟ್ಟಿಮನಿ ತಿಳಿಸಿದ್ದಾರೆ