ಜಾನುವಾರಗಳ ಅಕ್ರಮ ಸಾಗಣೆಗೆ ಪೊಲೀಸರೇ ಸಾಥ್.‌ ಪೊಲೀಸರ ವಿರುದ್ಧ ಎಸ್ ಪಿ ಕ್ರಮ ಕೈಗೊಳ್ಳುವರೇ?

ವರದಿ: ಎನ್.ಎನ್.
ಸುರಪುರ: ನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮಧ್ಯರಾತ್ರಿಯಲ್ಲಿ ಸಾಗಣೆ ಮಾಡುವಂತಹ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ.

“ಬೇಲಿಯೇ ಎದ್ದು ಹೊಲ ಮೇದಂತೆ” “ಕಾನೂನು ರಕ್ಷಣೆ ಮಾಡಬೇಕಾದವರು ಕಳ್ಳರಿಗೆ ಸಾತ್ ನೀಡಿ ಜಾನುವಾರುಗಳನ್ನು ಬೇರೆಯವರಿಗೆ ಸಾಗಿಸಲು ನೆರವಾಗುತ್ತಿರುವುದು ಪೊಲೀಸರ ಕಾರ್ಯವೈಕರಿಗೆ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಖಾಸಗಿಯಾಗಿ ವ್ಯಕ್ತಿಯೊಬ್ಬರು ವಿಡಿಯೋ ನೀಡಿದ್ದು, ಕಳೆದ ಒಂದು ವಾರದ ಹಿಂದೆ ಸುರಪುರ ನಗರದಲ್ಲಿ ಮಧ್ಯರಾತ್ರಿ 12 ರಿಂದ 1 ಗಂಟೆ ಸುಮಾರು ಹೊತ್ತಿನಲ್ಲಿ ಬುಲೆರೊ ಗಾಡಿನಲ್ಲಿ ಹಸುಗಳನ್ನು ಏರುತ್ತಿರುದ್ದರೆ ರಸ್ತೆ ಒಂದರಲ್ಲಿ ಪೊಲೀಸರ ಪೆಟ್ರೋಲ್ ಹೈವೇ ಜಿಪ್ ಒಂದು ನಿಂತಿರುವುದು ಕಂಡುಬರುತ್ತದೆ.
ಪೊಲೀಸರು ಗಾಡಿಯೊಳಗೆ ಕುಳಿತುಕೊಂಡಿರುತ್ತಾರೆ. ಜಾನುವಾರುಗಳನ್ನು ಟಾಟಾ ಎಸ್ ನಲ್ಲಿ ತುಂಬಿಕೊಂಡ ನಂತರ ಪೊಲೀಸರ ಸರ್ಪಗಾವಲಿನಲ್ಲಿ ವೆಂಕಟಪುರ ದಿಬ್ಬದಡೆಗೆ ಕಳಿಸುತ್ತಾರೆ.
ರಸ್ತೆಯ ಹೆದ್ದಾರಿಗೆ ತಲುಪಿದ ನಂತರ ಜಾನುವಾರುಗಳನ್ನು ತುಂಬಿದ ಟಾಟಾ ಎಸಿ ಗಾಡಿಯ ಹೋದ ನಂತರ ಪೊಲೀಸರು ಮತ್ತೊಂದು ಕಡೆಗೆ ನಿರ್ಗಮಿಸುತ್ತಾರೆ.

  • ಮತ್ತೊಂದಡೆ ನಗರದ ರಾಜಭೀದಿಗಳಲ್ಲಿ ಸಾಗಿ ವೆಂಕಟಪ್ಪನಾಯಕ್ ಸರ್ಕಲ್ ವರೆಗೆ ಪೊಲೀಸರೇ ಸಾಥ್ ನೀಡಿ ಜಾನುವಾರುಗಳನ್ನು ಕಳಿಸಿಕೊಡುತ್ತಾರೆ. ಹಾಗಾದರೆ ಪೊಲೀಸ್ ಇಲಾಖೆಗೆ ಅಕ್ರಮ ಜಾನುವಾರುಗಳ ಸಾಗಣೆಗೆ ಸಾತ್ ನೀಡಿ ಕಳಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
    ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ, ಪೊಲೀಸರೇ ಸಹಕಾರ ನೀಡುವುದು ಹಾಗೂ ಅಕ್ರಮ ಗೋ ಸಾಗಣೆ ಮೂಲಕ ಗೋ ಹತ್ಯೆಗಳನ್ನು ನಡೆಸುತ್ತಿರುವ ಕಳ್ಳರಿಗೆ ಖಾಕಿಯೇ ನೆರವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು..
    ಪೊಲೀಸರ ವಿರುದ್ಧ ಪೊಲೀಸ್ ಮೇಲ್ಮಟ್ಟದ ಅಧಿಕಾರಿಗಳು ಮತ್ತು ನಸರಕಾರ ಕ್ರಮ ಕೈಗೊಳ್ಳುವುದೇ ಎಂದು ಕಾಯ್ದು ನೋಡಬೇಕಾಗಿದೆ.
ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ