ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ಟೇಲರ್ ಮಂಜಿಲ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಆದೇಶದ ಮೇರೆಗೆ ಸೋಮವಾರ ಜಿಲ್ಲಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 67ನೇಯ ಪರಿನಿರ್ವಾಣ ನಿಮಿತ್ತ ಹಿಂದುತ್ವದ ಹುನ್ನಾರ ಹತ್ತಿಕ್ಕಲು ಜಾತ್ಯಾತೀತ ರಾಷ್ಟ್ರ ನಿರ್ಮಿಸಲು ರಾಜ್ಯ ಮಟ್ಟದ ಬ್ರಹತ್ ಸಮಾವೇಶ ಡಿ. 27 ಡಿಸೆಂಬರ್ ಬೆಳಗ್ಗೆ 11:30 ಡಾ. ಬಿ.ಆರ್. ಅಂಬೇಡ್ಕರ್ ಭವನ, ವಸಂತ ನಗರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂ ಸಂ ಶಿವಲಿಂಗ ಹಸನಾಪೂರ, ಉಪ ವಿಭಾಗದ ಸಂಚಾಲಕ ವೀರಭದ್ರ ದೊಡ್ಡಮನಿ, ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಶಹಾಪುರ ಸಂಚಾಲಕ ಮರೆಪ್ಪ ಕ್ರಾಂತಿ, ವಡಿಗೇರಾ ಸಂಚಾಲಕ ಬಾಲರಾಜ ಖಾನಾಪುರ, ಯಾದಗಿರಿ ಸಂಚಾಲಕ ತಾಯಪ್ಪ ಭಂಡಾರಿ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಮಲ್ಲಿಕಾರ್ಜುನ ಹುರಸಗುಂಡಿಗಿ, ಮೈನಾರಿಟಿ ತಾಲೂಕು ಸಂಚಾಲಕ ಎಂ. ಪಟೇಲ್, ಸಾಯಬಣ್ಣ ಸದಬ ಇದ್ದರು.
ಪದಾಧಿಕಾರಿಗಳ ನೇಮಕ:
ಸಂಘಟನೆಯ ನೂತನ ತಾಲೂಕು ಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು
ತಿಪ್ಪಣ್ಣ ಶೆಳ್ಳಗಿ ಸಂಚಾಲಕ,ಶೇಕರ್ ಮಂಗಳೂರು ತಾ.ಸಂ.,
ವೆಂಕಟೇಶ್ ದೇವಾಪೂರ ತಾ.ಸಂ,ರಾಜು ಬಡಿಗೇರ ತಾ.ಸಂ.,
ಚನ್ನಬಸಪ್ಪ ದೇವಾಪೂರ, ತಾ.ಸಂ ಸಂಚಾಲಕ ಖಾಜಾ ಅಜ್ಮೀರ್, ಖಜಾಂಚಿ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಭೀಮರಾಯ ಮಂಗಳೂರು, ಅಮ್ಮಣ್ಣ ಬಿಜಾಸಪೂರ, ಪಾರಪ್ಪ ದೇವತ್ಕಲ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ತಾಲೂಕು ಪದಾಧಿಕಾರಿಗಳು, ನಗರ ಶಾಖೆ ಪದಾಧಿಕಾರಿಗಳು, ಹೋಬಳಿ ಮಟ್ಟದ ಪದಾಧಿಕಾರಿಗಳು, ಗ್ರಾಮ ಶಾಖೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.