ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ನೈಸರ್ಗಿಕವಾಗಿ ದೊರೆಯುವ ಸಸ್ಯಮೂಲಗಳಲ್ಲಿ ಹೆತೆಚ್ಛವಾಗಿ ಔಷಧೀಯ ಗುಣವಿದ್ದು, ಜನರಲ್ಲಿ ರೋಗ ನಿರೋಧಕ ಹೆಚ್ಚಿಸುವ ಶಕ್ತಿ ಆಯುಷ್‌ಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಹೇಳಿದರು.
ನಗರದ ಸರಕಾರಿ ಮೆಟ್ರಿಕ್ ಪೂರ್ವ ಎಸ್‌ಟಿ ಬಾಲಕರ ವಸತಿ ನಿಲಯದಲ್ಲಿ ಗುರುವಾರ ಪ್ರಸಕ್ತ ಸಾಲಿನ ಎಸ್‌ಸಿಪಿ-ಎಸ್‌ಟಿಪಿ ಯೋಜನೆಯಡಿ ಹಮ್ಮಿಕೊಂಡಿದ್ದ ಆಯುಷ್ ಜೌಷಧಿಯುಕ್ತ ಸಸ್ಯವನ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ರೋಗವನ್ನು ತಡೆಯುವ ಗುಣವಿದೆ. ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದರು
ಜಿಲ್ಲಾ ಆರ್ಯುವೇದ ಅಧಿಕಾರಿ ಡಾ. ವಂದನಾ ಗಾಳಿ ಮಾತನಾಡಿ, ಸ್ಥಳೀಯವಾಗಿ ದೊರೆಯುವ ಅರಿಶನ, ಹಾಲು, ಪುಡೀನ ಎಲೆ, ಓಮದಕಾಳು, ಲವಂಗ, ಜೇನು ತುಪ್ಪ, ತುಪ್ಪ, ಕಲ್ಲುಸಕ್ಕರೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆಯಲ್ಲಿ ಔಷಧೀಯ ಗುಣಗಳಿವೆ. ಇವುಗಳು ಮನೆಯಲ್ಲೇ ದೊರೆಯುತ್ತವೆ. ನಮ್ಮ ಪೂರ್ವಜರು ಬಳಸಿದಂತೆ ನಾವೂ ಕೂಡ ಬಳಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ತಾಪಂ ಇಒ ಬಸವರಾಜ ಸಜ್ಜನ್, ವಸತಿ ನಿಲಯದ ಮೇಲ್ವಿಚಾರಕ ಶಿವುಗೌಡ ಬಿರಾದಾರ, ಆರೋಗ್ಯಾಧಿಕಾರಿ ಪ್ರಕಾಶ್, ಮಲ್ಲಪ್ಪ ಗೋನಾಲ, ಶಿವುಪುತ್ರ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು.
ಸುರಪುರ: ನಗರದ ಎಸ್‌ಟಿ ಬಾಲಕರ ವಸತಿ ನಿಲಯದಲ್ಲಿ ನಡೆದ ಆಯುಷ್ ಜೌಷಧಿಯುಕ್ತ ಸಸ್ಯವನ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು.