ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ: ಹೂಗಾರ

ಅದ್ದೂರಿಯಾಗಿ ಜರುಗಿದ ಶಹಾಪುರ ತಾಲೂಕಿನ ಬೆನಕನಹಳ್ಳಿ ಬಂಡೆರAಗನಾಥ ದೇವರ ಛಟ್ಟಿ ಉತ್ಸವ

ಕ್ರಾಂತಿ ವಾಣಿ ಶಹಾಪುರ.

ತಾಲೂಕಿನ ಬೇನಕನಹಳ್ಳಿ(ಜೆ) ಗ್ರಾಮದಲ್ಲಿ ಶನಿವಾರದಂದು ಶ್ರೀ ಬಂಡೆರAಗನಾಥ ದೇವರ ಛಟ್ಟಿ ಉತ್ಸವ ಅದ್ದೂರಿಯಾಗಿ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಮಲ್ಲಿಕಾರ್ಜುನ ಹೂಗಾರ ಅವರು ಮಾತನಾಡಿ, ದಿನ ನಿತ್ಯದ ಜಂಜಾಟದಿಂದ, ಒತ್ತಡದಿಂದ ಮುಕ್ತರಾಗಲು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ದೇವಾಲಯಗಳು ಮನಶಾಂತಿ ನೀಡುವ ತಾಣಗಳಾಗಿವೆ. ಮಠ, ಮಂದಿರ, ದೇವಾಲಯಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿ ಶಾಂತಿ, ನೆಮ್ಮದಿ ಕರುಣಿಸುವ ಕೇಂದ್ರಗಳಾಗಿವೆ. ಜನರಲ್ಲಿ ಒಳ್ಳೆಯ ವಿಚಾರಗಳನ್ನು ಬೆಳೆಸುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಬೆಳಿಗ್ಗೆ ಗ್ರಾಮದ ಶ್ರೀ ಬಂಡೆರAಗನಾಥ ದೇವರ ಪಲ್ಲಕ್ಕಿ ಉತ್ಸವವು ಸ್ವಗ್ರಾಮದ ಹೊರವಲಯದಲ್ಲಿರುವ ಬಾವಿಗೆ ತೆರಳಿತು. ನಂತರ ದೇವರ ಗಂಗಾ ಸ್ನಾನವನ್ನು ಮಾಡಿಕೊಂಡು ದೇವಸ್ಥಾನದ ಪ್ರಧಾನ ಅರ್ಚಕರಾದ ಮಲ್ಲಿಕಾರ್ಜುನ ಹೂಗಾರ ಅವರ ಸಾನಿಧ್ಯದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳೆಲ್ಲರೂ ಪಾಲ್ಗೊಂಡು ವಾದ್ಯ ಮೇಳಗಳೊಂದಿಗೆ ಶ್ರೀ ರಂಗನಾಥನ ಜಯಘೋಷಣೆಯೊಂದಿಗೆ ಕುಣಿದು ಕುಪ್ಪಳಿಸುತ್ತಾ, ಗ್ರಾಮದ ಮುಖ್ಯ ಬೀದಿಗಳಲ್ಲಿ ಶ್ರೀರಂಗನಾಥನದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಕಾರ್ಯಕ್ರಮ ನಡೆಯಿತು.

ದಾರಿಯುದ್ದಕ್ಕೂ ಭಕ್ತರು ಸಂಭ್ರಮದಿAದ ಸ್ವಾಗತಿಸಿದರು, ಸನ್ನಿಧಾನದಲ್ಲಿ ವಿಶೇಷ ಪೂಜೆ ಜರುಗಿತು, ಮಧ್ಯಾಹ್ನದ ನಂತರ ಭಕ್ತಾದಿಗಳು ಮಹಾ ಪ್ರಸಾದವನ್ನು ಸೇವಿಸಿ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ