ಬಿಜೆಪಿ ಮುಖಂಡ ಮಣಕಂಠ ಬಂಧನಕ್ಕೆ ಡಿ.೧೩ರಂದು ಪ್ರತಿಭಟನೆ.. ಖರ್ಗೆ ಕುಟುಂಬಕ್ಕೆ ಅವಮಾನಿಸಿದರೆ ಸಹಿಸಲ್ಲ: ಮಲ್ಲಿಕಾರ್ಜುನ ಕ್ರಾಂತಿ

ವರದಿ: ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಅಜಾತಶತ್ರು ಎಂಬುದಾಗಿ ಹೆಸರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ಮತ್ತವರ ಕುಟುಂಬ ಮತ್ತು ಬೆಂಬಲಿಗರ ಮೇಲೆ ಸುಳ್ಳು ಕೇಸು ಹಾಕುತ್ತಿರುವ ಬಿಜೆಪಿ ಮುಖಂಡ ಮಣ ಕಂಠ ರಾಠೋಡ್ ಅವರನ್ನು ಶಾಶ್ವತವಾಗಿ ಸೆರೆಮನೆಯಲ್ಲಿರಿಸಬೇಕು ಎಂದು ಒತ್ತಾಯಿಸಿ ಡಿ. ೧೩ರಂದು ಸುರಪುರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಕ್ರಾಂತಿಕಾರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಹೇಳಿದರು.

ನಗರದ ಪ್ರತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಕುಟುಂಬ ಪದೇ ಪದೇ ಹೇಳಿಕೆ ನೀಡುತ್ತಿರುವ ಮಣ ಕಂಠನ ವಿರುದ್ಧ ೫೦ಕ್ಕೂ ಹೆಚ್ಚು ಪ್ರಕರಣಗಳಿವೆ. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ಮಾಡಿಕೊಂಡಿದ್ದು, ಪ್ರಿಯಾಂಕ್ ಖರ್ಗೆ ಅವರು ಆಕ್ಸಿಡೆಂಟ್ ಮಾಡಿಸಿದ್ದಾರೆ ಎಂದು ದೂರು ಸಲ್ಲಿಸಿ ಖರ್ಗೆ ಅವರ ತೇಜೋವಧೆಗೆ ಮುಂದಾಗಿದ್ದಾರೆ. ಇದು ಅಪರಾಧವಾಗಿದ್ದು, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸರಳ ಸಜ್ಜನಿಕೆ ರಾಜಕಾರಣ ಖರ್ಗೆ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಶಾಶ್ವತವಾಗಿ ಮಣ ಕಂಠನನ್ನು ಜೈಲಿನಲ್ಲಿ ಇಡಬೇಕು ಎಂಬುದಾಗಿ ಒತ್ತಾಯಿಸಿ ನಗರದಲ್ಲಿ ಡಿ. ೧೩ರಂದು ಹಮ್ಮಿಕೊಂಡಿರು ಪ್ರತಿಭಟನೆ ಪ್ರತಿಯೊಬ್ಬರೂ ಆಗಮಿಸಬೇಕು. ಪ್ರತಿಭಟನಾ ಮೆರವಣ ಗೆಯೂ ಗೌತಮ ಬುದ್ಧ ವೃತ್ತದಿಂದ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ನಡೆದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುವುದು ಎಂದರು.
ಮುಖಂಡರಾದ ಮಹಾದೇವಪ್ಪ ಬಿಜಾಸ್ಪುರ, ಮೂರ್ತಿ ಬೊಮ್ಮನಹಳ್ಳಿ ಮಾತನಾಡಿದರು. ಮಾನಪ್ಪ ಬಿಜಾಸ್ಪುರ, ಮಾನಪ್ಪ ಕಟ್ಟಿಮನಿ, ಮಾನಪ್ಪ ಕರಡಕಲ್, ಚಂದ್ರಶೇಖರ ಹಸನಾಪುರ, ಬಸವರಾಜ ದೊಡ್ಡಮನಿ, ಅಜೀಜ್ ಸಾಬ್, ರವಿಚಂದ್ರ, ಬುದ್ದಿವಂತ ನಾಗರಾಳ, ಜೆಟ್ಟೆಪ್ಪ, ಖಾಜಾ ಹುಸೇನ್, ಮಹೇಶ ಯಾದಗಿರಿ, ಶರಣಪ್ಪ ಇತರರಿದ್ದರು.

ಸುರಪುರ: ನಗರದ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ