ವರದಿ ಎನ್.ಎನ್.
ಕ್ರಾಂತಿವಾಣಿ ವಾರ್ತೆ ಸುರಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ನಗರ ಸಮಾವೇಶ ಮತ್ತು ವ್ಯಕ್ತಿವ ವಿಕಸನ ಕಾರ್ಯಕ್ರಮ ನಗರದ ಶ್ರೀ ಪ್ರಭು ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಉತ್ತರ ಕರ್ನಾಟಕ ದ ಪ್ರಧಾನ ಕಾರ್ಯದರ್ಶಿ ಡಾ. ಉಪೇಂದ್ರ ನಾಯಕ ಸುಬೇದಾರ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 1949 ರಲ್ಲಿ ಸ್ಥಾಪಿತವಾಗಿ ಮುನ್ನುಗ್ಗುತ್ತಿದ್ದು, ಮುಂದೆಯೂ ದೇಶಕ್ಕಾಗಿ ಸಮಾಜಕ್ಕಾಗಿ ದೇಶದ ವಿದ್ಯಾರ್ಥಿಗಳಿಗಾಗಿ ಹಗಲಿರುಳು ಕೆಲಸ ಮಾಡುತ್ತಿದೆ. ಯುವ ಜನಾಂಗಕ್ಕೆ ಸಂಸ್ಕಾರವನ್ನು ನೀಡುತ್ತಾ ಸಾವಿರಾರು ವಿದ್ಯಾರ್ಥಿ ಸಮಸ್ಯೆ ಗಳನ್ನೂ ನಿವಾರಣೆ ಮಾಡುತ್ತಾ ಬಂದಿದೆ ಎಂದರು.
ನೂತನವಾಗಿ ನೇಮಕವಾದ ನಗರ ಅಧ್ಯಕ್ಷ ಡಾ. ಮಹಾಂತೇಶ್ ಸುಬೇದಾರ್, ಎಬಿವಿಪಿ ನಡೆದು ಬಂದ ದಾರಿ ಕುರಿತು ಹಾಗೂ ವಿದ್ಯಾರ್ಥಿ ಸಮಸ್ಯೆ ಕುರಿತು ಹಾಸ್ಟೆಲ್ ಸಮಸ್ಯೆ ಕುರಿತು ಮಾತನಾಡಿದರು.
ಸ್ವಾಗತ ಭಾಷಣವನ್ನು ದೇವರಾಜ್ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ನೆರವೇರಿಸಿದರು. ನಿರೂಪಣೆ ಜಯಶ್ರೀ ವಾಣಿಜ್ಯ ವಿದ್ಯಾರ್ಥಿ ಮಾಡಿದರು. ವಂದನೆ ಬಸಮ್ಮ ದೇವಪೂರ ಮಾಡಿದರು.
ಹೊಸ ಕಾರ್ಯ ಕಾರಿಣಿ ನೇಮಕ:
ನಗರ ಅಧ್ಯಕ್ಷರಾಗಿ – ಡಾ ಮಹಾಂತೇಶ್ ಸುಬೇದಾರ್ ಅರ್ಥ ಶಾಸ್ತ್ರ ಉಪನ್ಯಾಸಕರು,
ನಗರ ಉಪಾಧ್ಯಕ್ಷರಾಗಿ – ರೋಹಿಣಿ ಉಪನ್ಯಾಸಕಿ ಹಾಗೂ ರೇಖಾ ಶಿಕ್ಷಕರು,
ಕಾರ್ಯದರ್ಶಿಯಾಗಿ – ವಿನೋದ್ ಕುಮಾರ್ ಯಾಳಗಿ,
ಸಹ ಕಾರ್ಯದರ್ಶಿಯಾಗಿ – ದೇವರಾಜ್ ನಾಟೇಕರ್, ದೇವರಾಜ್ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ,
ಹೋರಾಟ ಪ್ರಮುಖರು – ಅಭಿಷೇಕ್,
ಸಹ ಹೋರಾಟ ಪ್ರಮುಖ – ರಾಜು ತಂದೆ ಮಲ್ಲಯ್ಯ, ಕಾರ್ಯಾಲಯ ಕಾರ್ಯದರ್ಶಿಯಾಗಿ – ತಿಮ್ಮಯ್ಯ ರತ್ತಲ್,
ಅಧ್ಯಯನ ಪ್ರಮುಖ – ಮಾಳಪ್ಪ ಹಾಗೂ
ವಿವಿಧ ಕಾಲೇಜಿನ ಪ್ರಮುಖರಾಗಿ ರಾಜು ಗೆಡ್ಡಲಾಮರಿ , ಲಕ್ಷ್ಮಿ, ಕಾವೇರಿ ರಾಥೋಡ್, ಕಾವೇರಿ ಎಸ್, ಸ್ವಾತಿ, ರಾಧಿಕಾ, ಅನಿಲ್, ಭೀಮಣ್ಣ ಯಮನುರು, ಜ್ಯೋತಿ, ಪರಶುರಾಮ್, ಪರಮವ್ವ, ಭಲರಾಜ್ , ನಾಗರಾಜ್, ಜಯಶ್ರೀ, ಸುನೀತಾ ಮತ್ತಿತರರು ನೇಮಕವಾದರು.
ಈ ಸಂದರ್ಭ ದಲ್ಲಿ ಶ್ರೀ ಪ್ರಭು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಶಾಂತ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಡಾ. ಮಹಾಂತೇಶ್ ಸುಬೇದಾರ್ ಅರ್ಥಶಾಸ್ತ್ರ ಉಪನ್ಯಾಸಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುರಪುರ , ತಿರುಪತಿ ಜನನಿ ಕಾಲೇಜು ಉಪನ್ಯಾಸಕರು ರೋಹಿಣಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಉಪನ್ಯಾಸಕರು ಮತ್ತು ರೇಖಾ ಶಿಕ್ಷಕರು, ವಿಭಾಗ ಸಹ ಪ್ರಮುಖರು ಡಾ. ಉಪೇಂದ್ರ ನಾಯಕ ಸುಬೇದಾರ್ ಹಾಗೂ ಎಬಿವಿಪಿ ಕಾರ್ಯ ಧರ್ಶಿ ವಿನೋದ್ ಕುಮಾರ್ ಯಾಳಗಿ, S P ಕಾಲೇಜಿನ ಉಪನ್ಯಾಸಕರಾದ ಶರಣು ನಾಯಕ್, ಮತ್ತು ಶ್ರೀದಾರ್ ಸೇರಿದಂತೆ ಉಪನ್ಯಾಸಕರು ಕಾರ್ಯ ಕರ್ತರು ಮತ್ತು ನೂರಾರು ಜನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.