ಶ್ರೀ  ವೀರಾಂಜನೇಯ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ರಚನೆ: ಸಂಜೀವ ದರಬಾರಿ

⋅ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ : ನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀ ವೀರಾಂಜನೇಯ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಟ್ರಸ್ಟ್ ಅನ್ನು ರಚಿಸಲಾಗಿದೆ. ಈ ಟ್ರಸ್ಟಿನ ಹೆಸರಿನಲ್ಲಿಯೇ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ನ ಅಧ್ಯಕ್ಷ ಸಂಜೀವ್ ದರಬಾರಿ ತಿಳಿಸಿದರು.

ನಗರದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ನಾಗಲಾಪುರ ವೀರಾಂಜನೇಯ ದೇವಸ್ಥಾನ ಸುಮಾರು 900 ವರ್ಷಗಳ ಇತಿಹಾಸವನ್ನು ಹೊಂದಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ ಇದ್ದ ಊರಿನ ದೇವಸ್ಥಾನವಾಗಿದೆ ಇದರ ಪುರಾವೆಗಳ ನೋಡಲು ಸಿಗುತ್ತವೆ ಎಂದರು.

ನಾಗಲಾಪುರ ಎಂಬ ಊರಿನ ಆಗಿಸಿ ಕಲ್ಲಿನಿಂದ ಕೂಡಿದ್ದು ಇದನ್ನು ಈಗಲೂ ನೋಡಬಹುದು ಹಾಗೂ ಬಾವಿಗಳು ಕೆರೆಗಳು ಶಿವನ ದೇಗುಲಗಳು ದೇವತೆಗಳ ಇರುವ ಪುರಾವೆಗಳು ಈಗಲೂ ನೋಡಲು ಸಿಗುತ್ತವೆ ಎಂದು ತಿಳಿಸಿದರು.

ನಾಗಲಾಪುರ ಊರಿನ ಹೊರಗಡೆ ಶ್ರೀ ಶ್ರೀ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಮಾರಿಕಾಂಬ ದೇವಿಯ ಹಳೆಯ ಕಲ್ಲಿನ ಪಾದುಕೆಗಳು ಈಗಲೂ ಇವೆ. ಹಾಗೂ ಮನೆಗಳ ಇರುವ ಪುರಾವೆಗಳಲ್ಲಿ ಕಲ್ಲುಗಳು ಕಾಣಸಿಗುತ್ತವೆ ಎಂದು ಹೇಳಿದರು.

ಈ ದೇವಸಾಥನವು 30 ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯಕ್ರಮ ಪ್ರಗತಿಯಲ್ಲಿದೆ. ಸುತ್ತಮುತ್ತಲಿನ ಊರುಗಳಾದ ತಳವಾರಗೇರ, ಕುಂಬಾರಪೇಠ, ಹಾಗೂ ನರಸಿಂಗಪೇಠ ನಂತರ ಸುರಪುರದ ಸರ್ವ ಭಕ್ತಾದಿಗಳಿಂದ ಜೀರ್ಣೋದ್ದಾರದ ಕಾರ್ಯ ಪ್ರಗತಿಯಲ್ಲಿ ಇದೆ. ಇದಕ್ಕೆ ಈ ನಾಗಲಾಪುರ ವೀರಾಂಜನೇಯ ಹಳೇಯ ದೇವಸ್ಥಾನವನ್ನು ಭಕ್ತಾದಿಗಳು ನವ ವಿನ್ಯಾಸದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕಟ್ಟಡಕ್ಕೆ ಕಂಪೌಂಡ ಹಾಗೂ 1 ಕೋಣೆಯ ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಹನುಮ ಜಯಂತಿ ಹಾಗೂ ನಾಗರ ಅಮವಾಸ್ಯೆಯ ಶ್ರಾವಣ ಮಾಸದಲ್ಲಿ ಪರ್ವ ಮಾಡುವ ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

2009-10 ನೇ ಸಾಲಿನಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಹಲವಾರು ಭಕ್ತಾದಿಗಳು ಕೂಡಿ ಮೌನ ಮಾರ್ಗ ಎಂಬ ಸತ್ಸಂಗವನ್ನು ನಿರ್ಮಾಣ ಮಾಡಿ ಇನ್ನು ಹೆಚ್ಚಿನ ಕ್ಷೇತ್ರಾಭಿವೃದ್ಧಿ ಕಾರ್ಯಗಳು ಮಾಡುತ್ತಿದ್ದಾರೆ ಎಂದರು.

ಈ ಕ್ಷೇತ್ರಾಭಿವೃದ್ಧಿ ಕಾರ್ಯಗಳಲ್ಲಿ ಮೊದಲನೆಯದ್ದಾಗಿ ಡಿಸೆಂಬರಿನಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ 6,7 ವರ್ಷದಿಂದ ಪ್ರತಿ ಅಮವಾಸ್ಯೆಗೆ ದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು ಹಾಗೂ ನವರಾತ್ರಿಯಲ್ಲಿ 9 ದಿನಗಳಲ್ಲಿ ಶುಕ್ರವಾರ ಸ್ವಯಂ ಉದ್ಭವ ಭನ್ನಿ ಗಿಡಕ್ಕೆ (ಶಮಿವೃಕ್ಷ) ಹಾಗೂ ವಿವಿಧ ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ. ನಂತರ ದೀಪಾವಳಿ ಪಾಡ್ಯಕ್ಕೆ ದಿಪೋತ್ಸವ ಹಾಗೂ ತುಳಸಿ ಪೂಜೆ ವಿಪ್ರವೃಂದದವರಿಂದ ನಡೆಯುತ್ತವೆ ಎಂದರು.

ಡಿಸೆಂಬರ್‌ನಲ್ಲಿ ಕಾರ್ತಿಕ ಮಹೋತ್ಸವ ಕಾರ್ಯಕ್ರಮ ಎರಡು ದಿನಗಳು ನಿರಂತರ ಮಹಾಪ್ರಸಾದ ದೇವರಿಗೆ ಅಭಿಷೇಕ, ಹೊಂ, ಹವನ, ಪೂಜಾ ಕಾರ್ಯಕ್ರಮಗಳು ನಂತರ ಸಂಗೀತ ಕಾರ್ಯಕ್ರಮ, ಪ್ರವಚನ, ಭಾರ, ಚೀಲ, ಗುಂಡು, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಅಭಿನಂದನೆ, ಸಾಯಂಕಾಲ ದೀಪೋತ್ಸವ ಮತ್ತು ಎಲೆ ಪೂಜೆ, ರಾತ್ರಿ ಭಜನೆ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.

 

2023 ನೇ ಸಾಲಿನಿಂದ ಈ ಕ್ಷೇತ್ರದಲ್ಲಿ ಶ್ರೀ ಶ್ರೀ ಶ್ರೀ ವೀರಾಂಜನೇಯ ಕ್ಷೇತ್ರಾಭಿವೃದ್ಧಿ ಟ್ರಸ್ಟ್ (ರಿ) ಶತಕೋಟಿ ಯುವ ಸ್ಫೂರ್ತಿ ಬಳಗ ಸಹಯೋಗದೊಂದಿಗೆ ರಚನೆಯಾಗಿದೆ. ಈ ಟ್ರಸ್ಟ್‌ನಿಂದಲೇ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.

ಸರ್ವ ಭಕ್ತಾದಿಗಳು ತನು, ಮನ, ಧನ, ಸಹಾಯ ಸಹಕಾರ ಮಾಡಿ ಕ್ಷೇತ್ರಾಭಿವೃದ್ಧಿಯಲ್ಲಿ ತಮ್ಮೆಲ್ಲರ ಸಹಾಯ ಬಹಳ ಮುಖ್ಯವಾದದ್ದು. ಎಲ್ಲರೂ ಸೇರಿ ದೇವರ ಸೇವೆಯನ್ನು ಮಾಡಿ ದೇವರ ಕೃಪೆಗೆ ಪಾತ್ರರಾಗಿ ಭಾಗಿಯಾಗಿ ಆಶೀರ್ವಾದ ಪಡೆಯೋಣ ಎಂದು ಈ ಮೂಲಕ ಸರ್ವ ಭಕ್ತಾದಿಗಳಿಗೆ ಭಕ್ತಿಯಿಂದ ಕೋರಲಾಗಿದೆ ಎಂದು ತಿಳಿಸಿದರು.

ಈ ಟ್ರಸ್ಟ್‌ನಿಂದ 2024 ನೇ ಸಾಲಿನಿಂದ ಯೋಗ ತರಬೇತಿ ಮತ್ತು ಕರಾಟೆ ತರಬೇತಿ ಪ್ರಾರಂಭ ಮಾಡುವ ಗುರಿ ಹೊಂದಿದೆ. ನಂತರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಬಡ ವಿದ್ಯಾರ್ಥಿಗಳಿಗೆ ತರಬೇತಿ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ. ಹಾಗೂ ಅನಾಥಾಶ್ರಮ, ಶಾಲಾ, ಕಾಲೇಜುಗಳ ವಿವಿಧ ರೀತಿಯ ಸಾಮಾಜಕ ಸೇವೆ ಮಾಡಲು ಗುರಿ ಮತ್ತು ಉದ್ದೇಶಗಳನ್ನು ಟ್ರಸ್ಟ್ ಹೊಂದಿರುತ್ತದೆ. ಈ ಎಲ್ಲಾ ಕಾರ್ಯತ್ರಗಳಿಗೆ ಸರ್ವಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ