ಅಂಚೆ ನೌಕರರಿಂದ ಕಚೇರಿ ಎದುರು ಅನಿರ್ದಿಷ್ಠಾವಧಿ ಮುಷ್ಕರ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ.

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ  ಸುರಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ದಾಕ್ ಸೇವಕರ ಒಕ್ಕೂಟ, ರಾಷ್ಟ್ರೀಯ ಗ್ರಾಮೀಣ ದಾಕ್ ಸೇವಕರ ಒಕ್ಕೂಟದಿಂದ ಮಂಗಳವಾರ ನಗರದ ಕಚೇರಿ ಎದುರು ನೌಕರರು ಅನಿರ್ದಿಷ್ಠಾವಧಿ ಮುಷ್ಕರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ನೀಡುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅಂಚೆ ನೌಕರರಿಗೆ ನೀಡುವಲ್ಲಿ ತಾರತಮ್ಯ ಎಸುಗುತ್ತಿದೆ. ೩೦ ಸಾವಿರಕ್ಕಿಂತ ಹೆಚ್ಚು ಜಿಡಿಎಸ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾನ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
೨೦೧೮ರಲ್ಲಿ ೧೬ ದಿನಗಳ ಮುಷ್ಕರ, ೨೦೨೨ ರಲ್ಲಿ ದೆಹಲಿಯ ರಾಜ್ ಘಾಟ್‌ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಇಲಾಖೆಯ ಉನ್ನತಾಧಿಕಾರಿಗಳು ನೀಡಿದ ಭರವಸೆ ಇದುವರೆಗೂ ಈಡೇರಿಸಿಲ್ಲ. ಹೀಗಾಗಿ ಮುಷ್ಕರಕ್ಕೆ ಮುಂದಾಗಲಾಗಿದೆ ಎಂದು ತಿಳಿಸಿದರು.
೮ ಗಂಟೆಗಳ ಕೆಲಸ ನೀಡಿ ನಿವೃತ್ತಿ ವೇತನ ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕು. ಕಮಲೇಶ್ ಚಂದ್ರ ಸಮಿತಿ ವರದಿ ಜಾರಿಯಾಗಬೇಕು. ೨೪ ವರ್ಷಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿದವರಿಗೆ ಹೆಚ್ಚುವರಿ ಇಂಕ್ರಿಮೆಂಟ್ ನೀಡಬೇಕು. ೧.೫ ಲಕ್ಷದ ಬದಲಿಗೆ ಕೊನೆಯ ತಿಂಗಳ ವೇತನದ ಶೇ. ೧೬.೫ ರಷ್ಟು ನೀಡಬೇಕು. ಜಿ.ಡಿ.ಎಸ್. ನೌಕರರು ಮತ್ತು ಕುಟುಂಬದವರಿಗೆ ಆರೋಗ್ಯ ವಿಮೆ, ಉಳಿಕೆ ಗ್ರಾಜ್ಯೂಟಿ, ವೇತನ ಸಹಿತ ನೀಡುತ್ತಿರುವ ರಜೆಯನ್ನು ೧೮೦ ದಿನಗಳವರೆಗೆ ಕೂಡಿಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಗ್ರೂಪ್ ಇನ್ಸೂರೆನ್ಸ್ ಅನ್ನು ೫ ಲಕ್ಷಕ್ಕೆ ಹೆಚ್ಚಿಸಬೇಕು. ಎಸ್‌ಡಿಬಿಎಸ್ ಸ್ಟೀಮ್‌ನಲ್ಲಿ ೩ ಪರ್ಸೆಂಟ್ ನಿಂದ ೧೦ ಪರ್ಸೆಂಟ್‌ಗೆ ಹೆಚ್ಚಿಸಿ ನಿವೃತ್ತಿ ವೇತನ ನೀಡಬೇಕು. ನೂತನವಾಗಿ ನೇಮಕಾತಿ ಹೊಂದಿದ ನೌಕರರಿಗೆ ಕೆಲಸದ ಹೊರೆಯ ಆಧಾರದ ಮೇಲೆ ವೇತನ ನಿಗದಿಗೊಳಿಸುವುದು. ನೌಕರರು ತಮ್ಮ ಸ್ವಂತ ಮೊಬೈಲ್‌ನಲ್ಲಿ ಇಲಾಖಾ ಕೆಲಸವನ್ನು ನಿರ್ವಹಿಸಲು ಒತ್ತಾಯಿಸುತ್ತಿರುವುದು. ಅವೈಜ್ಞಾನಿಕ ಟಾರ್ಗೆಟ್ ಗಳನ್ನು ಕೂಡಲೇ ನಿಲ್ಲಿಸಬೇಕು. ಎಲ್ಲಾ ಬಿಒಗಳಿಗೆ ಲ್ಯಾಪ್‌ಟಾಪ್, ಪ್ರಿಂಟರ್, ಬ್ರಾಡ್ ಬ್ಯಾಂಡ್ ನೆಟ್‌ವರ್ಕ್ ನೀಡಬೇಕು. ಇಲ್ಲದಿದ್ದರೆ ಮುಷ್ಕರ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ಎಐಡಿಡಿಎಸ್‌ಯು ಅಧ್ಯಕ್ಷ ದೇವಿಂದ್ರಪ್ಪ, ದೊಡ್ಡಯ್ಯ ನಾಯಕ, ಪ್ರಭುಲಿಂಗಯ್ಯ ಸ್ವಾಮಿ, ಪಿ.ವಿಶ್ವನಾಥ, ಮಹಿಬೂಬ, ಎಂ.ಪಿ. ಚಿತ್ರಸೇನ, ಅಶೋಕ್ ಮನಗೊಳಿ, ಚಂದ್ರಕಲಾ, ಹಣಮಂತ್ರಾಯ ಗೋನಾಲ, ಹಣಮಂತ ಬಿಜಾಸ್ಪುರ, ನೀಲಕಂಠರಾಯ ಸುಗೂರು, ಯಲ್ಲಾಲಿಂಗ ಮುದ್ನೂರು ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ