ಪರವನಾಗಿಲ್ಲದ ಕ್ಲಿನಿಕ್‌ಗಳ ಮೇಲೆ ದಾಳಿ: ಪಾಟೀಲ್ ಡೈಗ್ನೋಸ್ಟಿಕ್ ಲ್ಯಾಬಾರೇಟರಿಗೆ ಸೀಲ್, ಅಂಕುರ ಹೋಮಿಯೋಪತಿ ಕ್ಲಿನಿಕ್, ಸೂಗುರೇಶ್ವರ ಕ್ಲಿನಿಕ್‌ಗಳಿಗೆ ನೋಟಿಸ್.

ಕ್ರಾಂತಿವಾಣಿ ವಾರ್ತೆ ಸುರಪುರ: ನಗರದಲ್ಲಿ ಸರಕಾರ ಮತ್ತು ಆರೋಗ್ಯ ಇಲಾಖೆಯ ಅನುಮತಿಯಿಲ್ಲದೆ ಅನಧಿಕೃತ ಕ್ಲಿನಿಕ್‌ಗಳ ಮೇಲೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಜಡಿದಿದ್ದಾರೆ.


ನಗರದಲ್ಲಿರುವ ಪಾಟೀಲ್ ಡೈಗ್ನೋಸ್ಟಿಕ್ ಮತ್ತು ಅಂಕುರ ಹೋಮಿಯೋಪತಿ ಕ್ಲಿನಿಕ್ ಹಾಗೂ ಸೂಗುರೇಶ್ವರ ಕ್ಲಿನಿಕಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ( ಕೆ.ಪಿ.ಎಮ್.ಇ.) ಕಾಯ್ದೆ ಪ್ರಕಾರ ದಾಳಿ ಮಾಡಿ ಪರಿಶೀಲಿಸಲಾಯಿತು.
ಕೆಪಿಎಂಇನಡಿ ನೋಂದಣ ಇಲ್ಲದ ಪಾಟೀಲ್ ಡೈಗ್ನೋಸ್ಟಿಕ್ ಲ್ಯಾಬಾರೇಟರಿಗೆ ಸೀಲ್ ಹಾಕಲಾಯಿತು. ಅಂಕುರ ಹೋಮಿಯೋಪತಿ ಕ್ಲಿನಿಕ್, ಸೂಗುರೇಶ್ವರ ಕ್ಲಿನಿಕ್‌ಗಳಿಗೆ ನೋಟಿಸ್ ನೀಡಲಾಯಿತು. ವೈದ್ಯರುಗಳಿಗೆ ತಕ್ಷಣ ಕ್ಲಿನಿಕ್ ಬಂದ ಮಾಡಲು ಸೂಚಿಸಿ, ಕೆಪಿಎಂಇನಡಿ ನೋಂದಣ ಮಾಡುವಂತೆ ಆದೇಶಿಸಲಾಗಿದೆ.
ಕನ್ನಡಪತ್ರಿಕೆಯೊಂದಿಗೆ ಮಾತನಾಡಿದ ಟಿಎಚ್‌ಒ ಡಾ. ಆರ್.ವಿ. ನಾಯಕ, ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದ್ದು, ಕೆಪಿಎಂಇನಡಿ ನೋಂದಣ ಯಾಗದೇ ಇರುವ ಆಸ್ಪತ್ರೆಗಳನ್ನು ನೋಂದಾಯಿಸಿಕೊಳ್ಳಬೇಕು ಎಂದರು.

ವೈದ್ಯಕೀಯ ಪ್ರಮಾಣ ಪತ್ರ ಇರುತ್ತದೆ. ಆದರೆ, ನಗರದಲ್ಲಿರುವ ಕೆಲವು ಕ್ಲಿನಿಕ್‌ಗಳು ಕೆಪಿಎಂಇನಡಿ ನೋಂದಣ ಯಾಗಿರುವುದಿಲ್ಲ. ಸಾರ್ವಜನಿಕರ ಆರೋಗ್ಯ ಮತ್ತು ವೈದ್ಯಕೀಯ ಕಾನೂನು ೨೦೦೭ರಡಿಯಲ್ಲಿ ಪ್ರಯೊಬ್ಬರಿಗೂ ನೋಟಿಸ್ ನೀಡಲಾಗಿದೆ. ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್, ಪ್ರಯೋಗಾಲಯ, ಸ್ಕಾö್ಯನಿಂಗ್ ಸೆಂಟರ್ ತೆರೆಯಲು ಆರಂಭಿಸಲು ಕೆಪಿಎಂಇನಡಿ ನೋಂದಣ ಅಗತ್ಯವಾಗಿರುತ್ತದೆ. ಐದು ವರ್ಷಕ್ಕೊಮ್ಮೆ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳತಕ್ಕದ್ದು. ಬರುವ ದಿನಗಳಲ್ಲಿ ಅನಧಿಕೃತ ಕ್ಲಿನಿಕ್ ಗಳ ಮೇಲೆ ದಾಳಿ ನಡೆಯುತ್ತದೆ. ಆದ್ದರಿಂದ ಕೆಪಿಎಂಇನಡಿ ನೋಂದಣ ಮಾಡಿಕೊಳ್ಳಬೇಕು. ನಕಲಿ ವೈದ್ಯರು ಕಂಡುಬಂದಲ್ಲಿ ಸೆಕ್ಸನ್ ೧೯ ಕೆಪಿಎಂಇ ಕೇಸ್ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿ ಹನುಮಂತ, ಅನಂತ ಕೃಷ್ಣ, ಶಾಂತು ನಾಯಕ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ