ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಚಾಲನೆ,ಪೂರ್ವಾಗ್ರಹ ಪೀಡಿತರಾಗದೆ ನಿಷ್ಪಕ್ಷಪಾತವಾಗಿ ತೀರ್ಪು ನೀಡಿ: ತಾಪಂ ಇಒ ಬಸವರಾಜ ಸಜ್ಜನ್

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೆಕ್ಕಿ ಹೊರಗೆಳೆಯುವ ಕೆಲಸವನ್ನು ಪ್ರತಿಯೊಬ್ಬ ಶಿಕ್ಷಕರು ಮಾಡಬೇಕ್ಕಿದ್ದು, ಆರೋಗ್ಯಕರ ಸ್ಪರ್ಧೆ ಹುಟ್ಟು ಹಾಕಬೇಕು. ಸರಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ಬಸವರಾಜ ಸಜ್ಜನ್ ಹೇಳಿದರು.

ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರಂಜಿಯಲ್ಲಿ ತಂಡವಾಗಿ ಪಾಲ್ಗೊಳ್ಳುವುದರಿಂದ ನಾಯಕತ್ವ ಬೆಳೆಯುತ್ತದೆ. ತಂಡಗಳ ಸಹಭಾಗಿತ್ವ, ಸಂವಹನ ನಡೆಯುತ್ತಿದೆ. ಸ್ನೇಹಿತ ಬಳಗ ಬೆಳೆಯುತ್ತದೆ. ಸ್ಪರ್ಧೆಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕಿದ್ದು, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಪೂರ್ವಾಗ್ರಹ ಪೀಡಿತರಾಗದೆ ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು ಎಂದರು.

ಶಿಕ್ಷಣ ಇಲಾಖೆಯ ಇಸಿಒ ಪಂಡಿತ್ ನಿಂಬೂರೆ, ಪ್ರತಿಭ ಕಾರಂಜಿಯೂ ಮಕ್ಕಳ ಹಬ್ಬವಾಗಿದೆ. ಒಂದು ದಿನಕ್ಕೆ ಸೀಮಿತವಲ್ಲ. ವರ್ಷವಿಡೀ ನಡೆಯುವಂತ ಚಟುವಟಿಕೆಯಾಗಿದೆ. ಮಕ್ಕಳ ಕಲಿಕೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರತಿಭೆ ಗುರುತಿಸುವ ವೇದಿಕೆಯಾಗಿದೆ. ಸ್ಪರ್ಧೆ ಮುಖ್ಯವೇ ಹೊರತು ಸೋಲು ಗೆಲುವಲ್ಲ. ಎಲ್ಲರಲ್ಲೂ ಸ್ಪರ್ಧಾ ಮನೋಭಾವ ಬೆಳೆಯಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಬಿಇಒ ಯಲ್ಲಪ್ಪ ಕಾಡ್ಲೂರು ಮಾತನಾಡಿ, ಮಕ್ಕಳಲ್ಲಿರುವ ಗುಪ್ತ ಶಕ್ತಿಗಳು ಮತ್ತು ಅಂತರAಗದಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯೇ ಪ್ರತಿಭಾ ಕಾರಂಜಿ. ಹುಣಸಗಿ ಮತ್ತು ಸುರಪುರ ತಾಲೂಕಿನ ವಿದ್ಯಾರ್ಥಿಗಳಲ್ಲಿ ಅದಮ್ಯವಾದ ಪ್ರತಿಭೆಯಿದೆ. ವೈಯಕ್ತಿಕ ಮತ್ತು ಸಾಮೂಹಿಕ ಸ್ಪರ್ಧೆಗಳಿವೆ. ಅದರಲ್ಲಿಯೂ ಆರೋಗ್ಯಕರ ಸ್ಪರ್ಧಿಸಿ ಮುಂದಿನ ಗೆಲುವಿನ ಹೆಜ್ಜೆಗೆ ಮುನ್ನುಡಿ ಬರೆಯಬೇಕು. ಪ್ರತಿಭೆಗಳು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಅರಳಿ ತಾಲೂಕಿಗೆ ಕೀರ್ತಿ ತರಬೇಕು ಎಂದರು.


ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯಲ್ಲಪ್ಪ ಚಂದನಕೇರಿ, ಬಿಆರ್‌ಸಿ ಖಾದರ ಪಟೇಲ್, ಶರಣಗೌಡ ಪಾಟೀಲ, ಗೋವಿಂದಪ್ಪ ಟಣಕೆದಾರ, ಸೋಮರೆಡ್ಡಿ ಮಂಗಿಹಾಳ, ಅನ್ವರ ಜಮದಾರ, ಸಾಬರೆಡ್ಡಿ, ಬಸವರಾಜ, ರಾಮಣ್ಣ ಪೂಜಾರಿ, ಗೋಪಾಲ ನಾಯಕ, ಬಸನಗೌಡ ವಠಾರ, ಶರಣು ಗೋನಾಲ, ಶಿವಪುತ್ರ ಸೇರಿದಂತೆ ಇತರರಿದ್ದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ