ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗರ್ಭಿಣಿಗೆ ಹೆರಿಗೆ, ಹೆಣ್ಣು ಮಗು ಜನನ. ತಾಯಿ ಮಗು ಆರೋಗ್ಯ.

ಶ್ಲಾಘನೀಯ. ಮಾನವೀಯತೆ ಮೆರೆದ ಚಾಲಕ ಮತ್ತು ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರು

ಕ್ರಾಂತಿ ವಾಣಿ ಶಹಾಪುರ.

ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದಯ, ಮಾರ್ಗ ಮಧ್ಯದಲ್ಲಿಯೇ ಬಸ್ಸಿನಲ್ಲಿದ್ದ ಮಹಿಳಾ‌ ಪ್ರಯಾಣಿಕರೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಬಸ್ಸಿನಲ್ಲಿರುವ ಪುರುಷರ ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆಗೆ ಸಹಕರಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಪ್ರಯಾಣಿಕರನ್ನು ಕೆಳಗಿಳಿಸಿ ಹೆರಿಗೆ.
ಗರ್ಭಿಣಿ ಮಹಿಳೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ನಿರ್ವಾಹಕ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪುರುಷ ಪ್ರಯಾಣಿಕರನ್ನು ಕೆಳಗೆ ಇಳಿಸಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಮಹಿಳಾ ಪ್ರಯಾಣಿಕರು ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿದ್ದಾರೆ. ತಕ್ಷಣ ಚಾಲಕ ನೀಲಕಂಠ ಸ್ವಾಮಿ, ಕಂಡಕ್ಟರ್ ಖೆಮುನಾಯಕ್ ಪ್ರಯಾಣಿಕರಿಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿ ಕಳಿಸಿ ಬಾಣಂತಿ ಮತ್ತು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಬಸ್ಸಿನಲ್ಲಿ ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ವಿವರ.
ಉತ್ತರ ಪ್ರದೇಶದ ನಿವಾಸಿಗಳಾಗಿದ್ದು ಕೆಲ ದಿನಗಳಿಂದ ಬಲೂನ್ ಮಾರುವ ಉದ್ಯೋಗ ಮಾಡುತ್ತಾ ಕಲ್ಬುರ್ಗಿಯಲ್ಲಿ ನೆಲೆಸಿರುವ ಈ ಕುಟುಂಬ ಡಿ.14 ಗುರುವಾರದಂದು ಬೆಳಿಗ್ಗೆ ಕಲ್ಬುರ್ಗಿಯಿಂದ ಸುರಪುರಕ್ಕೆ ಆಗಮಿಸಿ ಅಲ್ಲಿಂದ ಬಿಜಾಪುರಕ್ಕೆ ಪರಿಚಯವಾದೊಡನೆ ಬಲೂನ್ ತರಲು ಹೊರಟಿದ್ದರು. ತುಂಬ ಗರ್ಭಿಣಿಯಾಗಿದ್ದ ಪಿಂಕಿಯವರಿಗೆ ಮೈಯಲ್ಲಿ ಹುಷಾರಿಲ್ಲದ್ದನ್ನು ಆಕೆಯ ಪತಿ ಅಜಯ ಹೆಂಡತಿಯೊಂದಿಗೆ ಪುನ ಕಲ್ಬುರ್ಗಿಗೆ ಹೊರಟಿರುವ ಬಸ್ಸಿಗೆ ಹತ್ತಿದ್ದಾರೆ. ಈ ಬಸ್ ಸಿಂಧನೂರ ಡಿಪೋಕ್ಕೆ ಸೇರಿದ್ದು ಎನ್ನಲಾಗಿದೆ ಬಸ್ ನಂಬರ್ ಕೆಎ36 ಎಫ್ 1591 ಸಿಂಧನೂರ ದಿಂದ ಕಲ್ಬುರ್ಗಿ ಗೆ ಹೊರಟಿರುವ ಈ ಬಸ್ ಬೆಳಿಗ್ಗೆ 10.15 ನಿಮಿಷಕ್ಕೆ ಶಹಾಪುರ ಬಸ್ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣದಲ್ಲಿ ಭೀಮರಾಯನ ಗುಡಿ ಮಾರ್ಗ ಮಧ್ಯದ ಮೋಟಗಿ ಹೋಟೆಲ್ ಹತ್ತಿರ ಬಸ್ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪುರುಷ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಗರ್ಭಿಣಿ 23 ವರ್ಷದ ಪಿಂಕಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು.ಗರ್ಭಿಣಿಗೆ ಹೆಚ್ಚಿನ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಿಣಿ ತೊಟ್ಟಿದ್ದ ಚೂಡಿದಾರ ಬಿಚ್ಚುವ ಹೊತ್ತಿಗೆ ಹೆರಿಗೆಯಾಗಿದೆ. ಈ ಸಮಯದಲ್ಲಿ ಬಾಣಂತಿಯ ಹತ್ತಿರ ಯಾವುದೇ ಬಟ್ಟೆಗಳು ಇಲ್ಲದ ಕಾರಣ ಪುರುಷ ಪ್ರಯಾಣಿಕರೋಬ್ಬರು ತಮ್ಮ ಹೊಸ ಟಾವೆಲ್ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ತಕ್ಷಣ ಬಾಣತಿ ಮಗುವನ್ನು ಶಹಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಂತಿ ಹಾಗೂ ಹೆಣ್ಣು ಮಗು ಆರೋಗ್ಯವಾಗಿದ್ದಾರೆ. ಹುಟ್ಟಿದ ತಕ್ಷಣ ಮಗುವಿನ ತೂಕ 3 ಕೆಜಿ 200 ಗ್ರಾಂ ಇದೆ. ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.


ಹೆರಿಗೆ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಪ್ರಯಾಣಿಕರಿಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿ ಕಳಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದೇನೆ.ಹೆರಿಗೆಗೆ ಸಹಕರಿಸಿ ಮಾನವೀಯತೆ ಮೆರೆದ ಚಾಲಕ ಮತ್ತು ನಿರ್ವಾಹಕರಿಗೆ ಹಾಗೂ ಹೆರಿಗೆ ಮಾಡಿಸಿದ ಮಹಿಳೆಯರಿಗೆ ಅಭಿನಂದನೆಗಳು.

ಅಕ್ಬರ್ ಹೊಟಗಿ ಡಿಪೋ ಮ್ಯಾನೇಜರ್.ಶಹಾಪುರ ಘಟಕ.

 

ಚಾಲಕ ಮತ್ತು ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಹೆರಿಗೆ ಸುರಕ್ಷಿತವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ.

ಡಾ. ರಾಘವೇಂದ್ರ.
ಮಕ್ಕಳ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಶಹಾಪುರ.

ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜವಾಬ್ದಾರಿ ಯೋಗ ಕ್ಷೇಮ ನೋಡಿಕೊಳ್ಳುವುದು ನಮ್ಮ ಅಧ್ಯ ಕರ್ತವ್ಯ. ಹೆರಿಗೆ ನೋವಿನಿಂದ ಬಳಲುತ್ತಿದ್ದ ತಾಯಿ ಮತ್ತು ಮಗುವಿನ ಪ್ರಾಣ ರಕ್ಷಣೆ ಒಂದೇ ನಮ್ಮ ಗುರಿಯಾಗಿತ್ತು. ತಕ್ಷಣ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಬೇರೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ.
ಚಾಲಕ ನೀಲಕಂಠ ಸ್ವಾಮಿ ಕಂಡಕ್ಟರ್ ಖೇಮು ನಾಯಕ್.

ನನ್ನ ಹೆಂಡತಿಗೆ ಹೆರಿಗೆ ಬ್ಯಾನಿಯಿಂದ ನರಳುತ್ತಿದ್ದನ್ನು ನೋಡಿ ಗಾಬರಿಯಾಗಿದ್ದೆ, ಆದರೆ ಬಸ್ ಡ್ರೈವರ್ ಕಂಡಕ್ಟರ್ ಹಾಗೂ ಬಸ್ಸಿನಲ್ಲಿರುವ ಮಹಿಳೆಯರು ನನ್ನ ಹೆಂಡತಿಗೆ ಸುರಕ್ಷಿತ ಬಾಣೆತನ ಮಾಡಿದ್ದಾರೆ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

ಅಜಯ. ಉತ್ತರ ಪ್ರದೇಶದ ನಿವಾಸಿ.

ಬಸ್ಸಿನಲ್ಲಿ ಹೆರಿಗೆಯಾದ ಬಾಣಂತಿ ಪಿಂಕಿಯ ಗಂಡ.

 

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ