ಕನ್ನಡಪ್ರಭ ವಾರ್ತೆ ಶಹಾಪುರ.
ಸುಮಾರು ೩೦ ವರ್ಷಗಳಿಗೂ ಹೆಚ್ಚು ಕಾಲ ಒಬ್ಬರಿಗೊಬ್ಬರು ಆಸರೆಯಾಗಿ ಬಾಳಿ ಬದುಕಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ನಗರದ ಜಾಲಗಾರ್ ಮೊಹೊಲ್ಲದಲ್ಲಿ ನಡೆದಿದೆ.
ವಾರ್ಡ್ ನಂಬರ ೧೦ ರ ಚಾಮುಂಡೇಶ್ವರಿ ನಗರ ನಿವಾಸಿ ಬಾಬು ಹುಸೇನಸಾಬ ಆಂದೋಲಿ (೫೫) ಮತ್ತು ಅವರ ಪತ್ನಿ ಮುನೀರಾಬೇಗಂ (೫೦) ಸಾವಿನಲ್ಲೂ ಒಂದಾಗಿದ್ದಾರೆ.
ಶುಕ್ರವಾರ ಬೆಳಗಿನ ಜಾವ ೪ ಗಂಟೆಗೆ ಪತ್ನಿ ಮುನೀರಾಬೇಗಂ ಎದೆನೋವು ಕಾಣಿಸಿಕೊಂಡಿದ್ದು, ನಗರದ ಸ್ಪಂಧನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ತಪಾಸಣೆ ನಡೆಸಿ ಕುಡಲೇ ಕಲ್ಬುರ್ಗಿಯ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದು, ಜತೆಯಲ್ಲಿಯೇ ಇದ್ದ ಪತಿ ಬಾಬುಹುಸೇನ್ ಪತ್ನಿಗೆ ಏನೋ ಆಗಿದೆ ಎಂದು ಎದೆ ಹೊಡೆದು ಹೃದಯಘಾತವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಪತ್ನಿಯನ್ನು ಅಂಬ್ಯುಲೆನ್ಸ್ ನಲ್ಲಿ ಐದು ಕೀ.ಮೀ. ಸಾಗುವದರಲ್ಲಿ ಮನೀರಾಬೇಗಂ ಸಹ ಮೃತಪಟ್ಟ ದುರಂತ ನಡೆದಿದೆ.
ಇಬ್ಬರು ಒಂದಾಗಿ ಬದುಕಿ ಬಾಳಿ ಶುಕ್ರವಾರ ಸಾವಿನಲ್ಲೂ ಒಂದಾದ ದಂಪತಿಗಳ ದುರಂತಕ್ಕೆ ಜನರು ಮರುಕ ಪಡುತ್ತಿದ್ದಾರೆ.
ಮೃತ ದಂಪತಿಗಳಿಗೆ ಮೂರು ಗಂಡಯ ಇಬ್ಬರು ಹೆಚ್ಚು ಮಕ್ಕಳಿದ್ದಾರೆ. ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ. ಇಡಿ ಬಡಾವಣೆ ಈ ದುರಂತಕ್ಕೆ ಕಣ್ಣೀರು ಹಾಕುತ್ತಿರುವದು ಕಂಡು ಬಂದಿತು. ಶುಕ್ರವಾರ ಸಂಜೆ ೬ ಗಂಟೆಗೆ ಮುಸ್ಲಿಂ ಧರ್ಮದ ಪ್ರಕಾರ ದಿಗ್ಗಿಬೇಸ್ ಹೊರವಲಯದಲ್ಲಿರುವ ಈದ್ಗಾದಲ್ಲಿ ಅಂತ್ಯೆಕ್ರಿಯೆ ನಡೆಸಲಾಯಿತು.