ವರದಿ: ಎನ್.ಎನ್.
ಕ್ರಾಂತಿ ವಾಣಿ ವಾರ್ತೆ ಸುರುಪುರ: ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯ ವಾತಾವರಣದಲ್ಲಿ ಅಭ್ಯಾಸ ಮಾಡಬೇಕೆ ಹೊರತು ಜಾನುವಾರಗಳು ಮತ್ತು ದನದ ಕೊಟ್ಟಿಗೆಗಳ ಮಧ್ಯೆ ಕಲಿಯಬೇಕಾಗಿದೆ.
ಇಂಥಹ ಒಂದು ಅಮಾನುಷ ಘಟನೆ ತಾಲೂಕಿನ ಶಖಾಪುರದ ಎಸ್ ಎಚ್. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳದ್ದಾಗಿದೆ. ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಕಷ್ಟದ ಸರಮಾಲೆಗಳು ನಡೆಯತ್ತಲಿವೆ. ಯಾರೊಬ್ಬರು ಇತ್ತ ಗಮನ ಹರಸದಿರುವುದು ಶಿಕ್ಣ ಇಲಾಖೆ ನಿದ್ದೆಗೆ ಜಾರಿದೆ ಎನ್ನುವುದಯ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಶಾಲೆಗೆ ಭೂದಾನ ನೀಡಿದವರು ಒಬ್ಬರು. ಜಮೀನು ಖರೀದಿ ಮಾಡಿದವರು ಮತ್ತೊಬ್ಬರು. ಪ್ರಸ್ತುತ ಖರೀದಿ ಮಾಡಿದ
ಮಾಲೀಕನಿಂದ ಶಾಲೆ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಇನ್ನಿಲ್ಲದ ತೊಂದರೆ ಉಂಟು ಮಾಡುತ್ತಿದ್ದಾರೆ. ಶಾಲೆಗೆ ದಾನ ಪತ್ರ ಕೊಟ್ಟಿದ್ದರು ಹಾಗೂ ದಾಖಲಾತಿಗಳಿದ್ದರೂ ಸಹ ಈಗಿರುವ ಕೃಷಿ ಜಮೀನಿನ ಮಾಲೀಕನ ದರ್ಪ ಮೆರೆಯುತ್ತಿದ್ದಾನೆ.
ಶಾಲೆಯ ಆವರಣದಲ್ಲಿಯೇ ಬತ್ತದ ಬಣವಿಯನ್ನು ಹಾಕಲಾಗಿದೆ. ಶಾಲೆಯ ಆವರಣದಲ್ಲಿಯೇ ದನದ ಕೊಟ್ಟಿಗೆಯನ್ನು ನಿರ್ಮಿಸಿದ್ದಾರೆ. ಅಂಗನವಾಡಿ ಗೆ ಒತ್ತಿಕೊಂಡು ಗೃಹವನ್ನು ನಿರ್ಮಿಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲಿ ಬತ್ತದ ಹುಲ್ಲು ಸೇರಿದೆಂದೆ ಇತರ ಹುಲ್ಲುಗಳನ್ನು ತಂದು ಹಾಕಿದ್ದಾನೆ . ಇದರಿಂದ ಮಕ್ಕಳು ಆಟವಾಡಲು ತೊಂದರೆಯಾಗುತ್ತಿದೆ
ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ಸವಿಯುವಾಗ ಬತ್ತದ ಧೂಳು ಊಟದಲ್ಲಿ ಮಿಶ್ರಣವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ ಎಂದು
ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಯ ಕೊಠಡಿಯ ಮುಂದುಗಡೆ ಬತ್ತದ ಹುಲ್ಲನ್ನು ಹಾಕಿರುವುದರಿಂದ ಮಕ್ಕಳು ಆ ಧೂಳನ್ನು ಸೇವಿಸುತ್ತಾ ಪಾಠವನ್ನು ಕಲಿಯುವ ಅನಿವಾರ್ಯವಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪೋಷಕರಾದ ಲಕ್ಷ್ಮೀ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು ಎಂಬ ವದಂತಿದೆ. ಕಾರಣ ಹುಡುಕುತ್ತಾ ಹೋದಾಗ ಅಲ್ಲಿರುವ ಕಲುಷಿತ ವಾತಾವರಣ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲು ಕಾರಣವೆಂಬುದು ಶಿಕ್ಷಕರ ಮತ್ತು ಪೋಷಕರ ಮತ್ತು ಎಸ್ಡಿಎಂಸಿ ಸದಸ್ಯರ ಅಭಿಮತವಾಗಿದೆ.
ಮಕ್ಕಳ ಆರೋಗ್ಯವನ್ನು ಕಾಪಾಡಲು ಜಿಲ್ಲಾಡಳಿತ ಮತ್ತು ತಾಲೂಕ್ ಆಡಳಿತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಲೆಗೆ ಇರುವ ಆಸ್ತಿಯನ್ನು ಕಾಪಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವರೇ ಎಂದು ಕಾದು ನೋಡಬೇಕಾಗಿದೆ.